ಚಿತ್ರದುರ್ಗ: ಪ್ರತಿಷ್ಠಿತ ಮಹೀಂದ್ರಾ ಸಮೂಹದ ಕ್ರಾಂತಿಕಾರಿ ಓಜಾ ಪ್ಲಾಟ್‍ಫಾರ್ಮ್ ಯಶಸ್ವಿಯಾಗಿ ಮೂರು ವರ್ಷಗಳ ಮೈಲಿಗಲ್ಲು ಪೂರೈಸಿದೆ. ಈ ವಿನೂತನ ಪ್ಲಾಟ್ ಫಾರ್ಮ್ ದೇಶದ ವಿಶೇಷ ಹಾಗೂ ವಾಣಿಜ್ಯ ಕೃಷಿ ವಲಯದಲ್ಲಿ ಕಾಂಪ್ಯಾಕ್ಟ್ ಲೈಟ್ ವೇಟ್ 4 ವೀಲ್ ಡ್ರೈವ್ ಟ್ರ್ಯಾಕ್ಟರ್‍ಗಳ ಅಳವಡಿಕೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ಅಭೂತಪೂರ್ವ ವೇಗವನ್ನು ತಂದುಕೊಟ್ಟಿದೆ.
ಅತ್ಯಾಧುನಿಕ ತಂತ್ರಜ್ಞಾನದ ತಳಹದಿಯ ಮೇಲೆ ನಿರ್ಮಿಸಲಾದ ಹಾಗೂ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಂಡಿರುವ ಹಗುರ ತೂಕದ ಈ ಪ್ಲಾಟ್ ಫಾರ್ಮ್, ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ 21 -30 ಹೆಚ್‍ಪಿ ಟ್ರ್ಯಾಕ್ಟರ್ ವಿಭಾಗದಲ್ಲಿ ಹಲವು ಪ್ರಮುಖ ಮಾದರಿಗಳನ್ನು ಒಳಗೊಂಡಿದೆ. ಇದನ್ನು ವಿಶೇಷವಾಗಿ ಹೆಚ್ಚಿನ ಮೌಲ್ಯದ ಕೃಷಿ ಮತ್ತು ವಾಣಿಜ್ಯ ಬೇಸಾಯದ ಸಂಕೀರ್ಣ ಅವಶ್ಯಕತೆಗಳಿಗಾಗಿಯೇ ರೂಪಿಸಲಾಗಿದೆ ಎಂದು ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆಯ ಸಿಇಓ ಹರ್ಷ್ ರಾಯ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ದ್ರಾಕ್ಷಿ ತೋಟಗಳು, ಹಣ್ಣಿನ ತೋಟಗಳು, ಕಬ್ಬು ಮತ್ತು ಸಾಲು-ಬೆಳೆಗಳ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಓಜಾ, ತನ್ನ ಕಾಂಪ್ಯಾಕ್ಟ್ ಆಕಾರ, ನಿಖರವಾದ ಸ್ಟೀರಿಂಗ್ ನಿಯಂತ್ರಣ, ಸುಲಭ ತಿರುವು ಸಾಮಥ್ರ್ಯ ಮತ್ತು ಅತ್ಯುತ್ತಮ ಪವರ್ -ಟು -ವೇಟ್ ರೇಶಿಯೋ ಮೂಲಕ ಆಧುನಿಕ ಕೃಷಿಗೆ ಅತ್ಯಂತ ದಕ್ಷ ಹಾಗೂ ಬಹುಮುಖ ಪರಿಹಾರವಾಗಿದೆ. ಎಲ್ಲ ಮಾದರಿಗಳಲ್ಲೂ 4 ವೀಲ್ ಡ್ರೈವ್ ಸೌಲಭ್ಯ ಇರುವುದರಿಂದ, ಇದು ವಿವಿಧ ಕಠಿಣ ಭೂಪ್ರದೇಶಗಳಲ್ಲಿ ಸಾಟಿಯಿಲ್ಲದ ಎಳೆತದ ಸಾಮಥ್ರ್ಯ, ಸ್ಥಿರತೆ ಮತ್ತು ದಕ್ಷತೆಯನ್ನು ಒದಗಿಸುತ್ತದೆ ಎಂದು ವಿವರಿಸಿದ್ದಾರೆ.
ವೈವಿಧ್ಯಮಯ ಆಧುನಿಕ ಕೃಷಿ ಉಪಕರಣಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಜತೆಗೆ ಕಿರಿದಾದ ಟ್ರ್ಯಾಕ್ (ನ್ಯಾರೋ -ಟ್ರ್ಯಾಕ್) ವಿನ್ಯಾಸವು ಗಿಡಗಳ ಸಾಲುಗಳ ನಡುವಿನ ಕಿರಿದಾದ ಜಾಗಗಳಲ್ಲೂ ಟ್ರ್ಯಾಕ್ಟರ್ ಸುಲಭವಾಗಿ ಚಲಿಸಿ ಕೆಲಸ ಮಾಡಲು ನೆರವಾಗುತ್ತದೆ. ಬಲಿಷ್ಠ ಹಾಗೂ ದೃಢವಾದ 3- ಸಿಲಿಂಡರ್ ಎಂಜಿನ್ ಹೊಂದಿರುವ ಓಜಾ ಸರಣಿಯು ಪ್ರಬಲ ಕಾರ್ಯಕ್ಷಮತೆ, ಅತ್ಯುತ್ತಮ ಇಂಧನ ದಕ್ಷತೆ ಮತ್ತು ದೀರ್ಘಕಾಲೀನ ವಿಶ್ವಾಸಾರ್ಹ ಕಾರ್ಯಾಚರಣೆಯನ್ನು ಸಾಧ್ಯವಾಗಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


