ಮಂಗಳೂರು: ಬಳಸಿದ ಅಡುಗೆ ಎಣ್ಣೆಯಿಂದ ಬಯೋಡೀಸೆಲ್ ತಯಾರಿಸುವ ಕಂಪನಿಯಾದ ಎಂ-11 ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸೇರಿದ ಪಡುಬಿದ್ರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಶಾಲೆಗಳು, ಆರೋಗ್ಯ ಕೇಂದ್ರಗಳು, ಪೆÇಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ನಾಗರಿಕ ಸಂಸ್ಥೆಗಳ ಕಾರ್ಯಕರ್ತರಿಗೆ ಛತ್ರಿ ವಿತರಿಸುವ ಉಪಕ್ರಮ ಆರಂಭಿಸಿದೆ.
ಮುಂದಿನ ದಿನಗಳಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಸಂಚಾರ ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಯೋಜಿಸಲಾಗಿದೆ.
ಈ ಉಪಕ್ರಮದ ಭಾಗವಾಗಿ, ಎಂ11 ಎನರ್ಜಿ ವತಿಯಿಂದ ಪ್ರಮುಖ ಸಮುದಾಯ ಸಂಸ್ಥೆಗಳಿಗೆ ಒಟ್ಟು 350 ಛತ್ರಿಗಳನ್ನು ವಿತರಿಸಲಾಗುತ್ತಿದೆ. ಇವುಗಳಲ್ಲಿ ಗಣಪತಿ ಹಿರಿಯ ಪ್ರಾಥಮಿಕ ಶಾಲೆ (120), ಸರ್ಕಾರಿ ಪ್ರಾಥಮಿಕ ಶಾಲೆ ಕಂಚಿನಡ್ಕ (35), ಪಡುಬಿದ್ರಿ ಪೊಲೀಸ್ ಠಾಣೆ (35), ಪಡುಬಿದ್ರಿ ಮತ್ತು ಮುದ್ರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು (10), ಪಡುಬಿದ್ರಿ ಮತ್ತು ಪಾಲಿಮಾರು ಪಂಚಾಯತ್‍ಗಳು (20) ಹಾಗೂ ನಂದಿಕೂರು ಅಂಗನವಾಡಿ ಶಾಲೆ (20) ಸೇರಿವೆ ಎಂದು ನಿರ್ದೇಶಕ ಅಬ್ದುಲ್ ಹನ್ನಾನ್ ಖಾನ್ ಹೇಳಿದ್ದಾರೆ.
ಸವಾಲಿನ ಮಳೆಗಾಲದ ಪರಿಸ್ಥಿತಿಯಲ್ಲೂ ಸಂಚಾರ ಮತ್ತು ಸಾರ್ವಜನಿಕರ ಓಡಾಟವನ್ನು ನಿರ್ವಹಿಸುವ ಮುಂಚೂಣಿಯಲ್ಲಿರುವ ಸಿಬ್ಬಂದಿಯ ಸೇವೆಯನ್ನು ಗುರುತಿಸಿ, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಸಂಚಾರ ಪೊಲೀಸ್ ಸಿಬ್ಬಂದಿಗೆ ಮಳೆಗಾಲದ ಕೋಟ್ (ರೇನ್‍ಕೋಟ್) ವಿತರಿಸುವ ಕಾರ್ಯಕ್ರಮವನ್ನೂ ಕಂಪನಿ ಯೋಜಿಸುತ್ತಿದೆ ಎಂದು ವಿವರಿಸಿದ್ದಾರೆ.
ಕಂಪನಿಯ ಸಮುದಾಯ ಕಾರ್ಯಕ್ರಮಗಳು ಶಿಕ್ಷಣ, ಆರೋಗ್ಯ ರಕ್ಷಣೆ, ಸಾರ್ವಜನಿಕ ಸುರಕ್ಷತೆ, ಕೌಶಲ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತಿಯನ್ನು ಒಳಗೊಂಡಿದ್ದು, ಕಂಪನಿಯ ಸಮುದಾಯ ಪ್ರಭಾವದ ಉಪಕ್ರಮಗಳು ಆರೋಗ್ಯ ರಕ್ಷಣೆ ಮೂಲಸೌಕರ್ಯಗಳಿಗೆ ಬೆಂಬಲ, ಸಾರ್ವಜನಿಕ-ಸುರಕ್ಷತಾ ಕ್ರಮಗಳು ಮತ್ತು ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಕಾರ್ಯಕ್ರಮಗಳನ್ನು ಒಳಗೊಂಡಿವೆ. ಮುಂಬರುವ ದಿನಗಳಲ್ಲಿ ಛತ್ರಿ ವಿತರಣಾ ಕಾರ್ಯಕ್ರಮವನ್ನು ಗುರುತಿಸಲಾದ ಸಂಸ್ಥೆಗಳಲ್ಲಿ ಜಾರಿಗೆ ತರಲಾಗುವುದು, ನಂತರ ಹಂತ ಹಂತವಾಗಿ ಸಂಚಾರ ಪೆÇಲೀಸರಿಗೆ ರೇನ್‍ಕೋಟ್‍ಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

