ನಾಯಕತ್ವವು ಹುದ್ದೆಯಲ್ಲ, ಜವಾಬ್ದಾರಿ: ಶಿವಾನಿ ಬಾಳಿಗ

Upayuktha
0

ಮಂಗಳೂರು: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಪರಿಣಾಮಕಾರಿ ಸಂವಹನ ಕೌಶಲ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ತಂಡದ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕೆನರಾ ಕಾಲೇಜು, ಮಂಗಳೂರಿನಲ್ಲಿ ಮುಂಬೈನ ಎಂ.ಆರ್. ಪೈ ಫೌಂಡೇಶನ್ ಸಹಯೋಗದಲ್ಲಿ ಎರಡು ದಿನಗಳ ವಿದ್ಯಾರ್ಥಿಗಳ ನಾಯಕತ್ವ ತರಬೇತಿ ಶಿಬಿರ ಹಮ್ಮಿಕೊಂಡಿತ್ತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಐಎಸ್‌ಟಿಡಿ ಮಂಗಳೂರು–ಉಡುಪಿ ಶಾಖೆಯ ಅಧ್ಯಕ್ಷೆ ಶಿವಾನಿ ಬಾಳಿಗ ಮಾತನಾಡಿ, ನಾಯಕತ್ವವೆಂದರೆ ಕೇವಲ ಹುದ್ದೆಯನ್ನು ಅಲಂಕರಿಸುವುದಲ್ಲ; ಜವಾಬ್ದಾರಿಯನ್ನು ಹೊತ್ತು ಇತರರಿಗೆ ಸ್ಫೂರ್ತಿಯಾಗುವುದಾಗಿದೆ. ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ, ನಿರಂತರ ಕಲಿಕೆ ಮತ್ತು ಸಕಾರಾತ್ಮಕ ಮನೋಭಾವವನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ನಾಯಕತ್ವ ನೀಡುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಡಳಿತ ಮಂಡಳಿ ಸದಸ್ಯೆ ಆಶ್ವಿನಿ ಕಾಮತ್ ಮಾತನಾಡಿ, ನಾಯಕತ್ವಕ್ಕೆ ವ್ಯಕ್ತಿತ್ವ ಮತ್ತು ಮೌಲ್ಯಗಳು ಮೂಲಾಧಾರವಾಗಿವೆ ಎಂದು ತಿಳಿಸಿದರು. ಶೈಕ್ಷಣಿಕ ಸಾಧನೆಯೊಂದಿಗೆ ಜೀವನ ಕೌಶಲಗಳನ್ನೂ ಬೆಳೆಸಿಕೊಳ್ಳುವುದು ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಆತ್ಮವಿಶ್ವಾಸ, ಮುಂದಾಳತ್ವ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ ವಿದ್ಯಾರ್ಥಿಗಳು ಕಾಲೇಜು ಹಾಗೂ ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಾಗಿ ಇಂತಹ ತರಬೇತಿಗಳನ್ನು ಆಯೋಜಿಸುತ್ತಿರುವ ಎಂ.ಆರ್. ಪೈ ಫೌಂಡೇಶನ್ ಹಾಗೂ ಫೋರಂ ಆಫ್ ಫ್ರೀ ಎಂಟರ್‌ಪ್ರೈಸ್‌ನ ಕಾರ್ಯವನ್ನು ಅವರು ಶ್ಲಾಘಿಸಿದರು.


ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಡಳಿತ ಮಂಡಳಿ ಸದಸ್ಯ ಹಾಗೂ ಕೆನರಾ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜಕರಾದ ಬಸ್ತಿ ಪುರುಷೋತ್ತಮ ಶೆಣೈ ಮಾತನಾಡಿ, ನಿಜವಾದ ನಾಯಕತ್ವವು ಸ್ವಯಂಶಿಸ್ತು ಮತ್ತು ಸೇವಾ ಮನೋಭಾವದಿಂದ ಆರಂಭವಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಉತ್ತಮ ಅಭ್ಯಾಸಗಳು ಮತ್ತು ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡು ತರಬೇತಿಯಲ್ಲಿ ಕಲಿತ ವಿಚಾರಗಳನ್ನು ತಮ್ಮ ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ ಸಮಾಜ ಮತ್ತು ಸಂಸ್ಥೆಯ ಅಭಿವೃದ್ಧಿಗೂ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂತಹ ಮೌಲ್ಯಾಧಾರಿತ ಕಾರ್ಯಕ್ರಮಗಳಿಗೆ ಕೆನರಾ ಶಿಕ್ಷಣ ಸಂಸ್ಥೆಗಳು ಸದಾ ಬೆಂಬಲ ನೀಡಲಿವೆ ಎಂದರು.


ಎರಡು ದಿನಗಳ ಶಿಬಿರದಲ್ಲಿ ಪ್ರಮಾಣಿತ ಜೀವನ ಹಾಗೂ ಉದ್ಯಮಶೀಲತಾ ತರಬೇತುದಾರರಾದ ಕ್ಲಾರಿಸ್ಸಾ ಜತಣ್ಣ ಮತ್ತು ಕಾರ್ಪೊರೇಟ್ ತರಬೇತುದಾರ, ಲೇಖಕ ಹಾಗೂ ಹಾರ್ವರ್ಡ್ ಪ್ರಮಾಣಿತ ವೃತ್ತಿಪರ ಸುಧೀರ್ ಪೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಗುರಿ ನಿರ್ಧಾರ ಮತ್ತು ಯಶಸ್ಸಿನ ಮಾರ್ಗಸೂಚಿ, ಪರಿಣಾಮಕಾರಿ ಸಂವಹನ ಕೌಶಲ, ಉತ್ತಮ ಅಭ್ಯಾಸಗಳ ಮೂಲಕ ವ್ಯಕ್ತಿತ್ವ ವಿಕಾಸ, ತಂಡದ ಕಾರ್ಯಕ್ಷಮತೆ, ಆತ್ಮವಿಶ್ವಾಸ ಮತ್ತು ಸಂಬಂಧ ನಿರ್ಮಾಣ, ನಿರ್ಧಾರ ಕೈಗೊಳ್ಳುವ ಹಾಗೂ ಸಮಸ್ಯೆ ಪರಿಹರಿಸುವ ಕೌಶಲಗಳು ಕುರಿತು ಸಂವಾದಾತ್ಮಕ ತರಬೇತಿ ನೀಡಿದರು. ಗುಂಪು ಚಟುವಟಿಕೆಗಳು, ಚರ್ಚೆಗಳು ಮತ್ತು ಪ್ರಾಯೋಗಿಕ ಅಭ್ಯಾಸಗಳ ಮೂಲಕ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.


ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ತರಬೇತಿಯಲ್ಲಿ ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.


ಕಾರ್ಯಕ್ರಮದಲ್ಲಿ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ , ಎಂ.ಆರ್. ಪೈ ಫೌಂಡೇಶನ್ ಹಾಗೂ ಫೋರಂ ಆಫ್ ಫ್ರೀ ಎಂಟರ್‌ಪ್ರೈಸ್‌ನ ಪ್ರತಿನಿಧಿಗಳು, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಸಂಯೋಜಕ ಡಾ.ಗಣೇಶ್ ಶೆಟ್ಟಿ , ಉಪ ಸಂಯೋಜಕರಾದ ರೂಪಶ್ರೀ ಹಾಗೂ ಡಾ. ಸವಿತಾ ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅನಸೂಯ ಭಾಗವತ್, ವಿದ್ಯಾರ್ಥಿನಿ ಸಂಧ್ಯಾ ಭಂಡಾರಿ ನಿರೂಪಿಸಿದರು. 


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top