ಜ್ಞಾನದ ಬಳಕೆ ಹಾಗೂ ಸೂಕ್ತ ಸಂಪನ್ಮೂಲಗಳೇ ಯಶಸ್ಸಿನ ಮೆಟ್ಟಿಲು : ಪ್ರೊ ಶ್ರೀ ಕೃಷ್ಣ ಗಣರಾಜ್ ಭಟ್

Upayuktha
0

  



ಪುತ್ತೂರು: ಜೀವನದಲ್ಲಿ ವಿಶಿಷ್ಟ ಕೌಶಲ್ಯಗಳನ್ನು ಹೊಂದಿರುವುದು ಮತ್ತು ದೊಡ್ಡ ಕನಸುಗಳನ್ನು ಕಾಣುವುದು ಅತ್ಯಂತ ಮುಖ್ಯ. ಆದರೆ ಕೇವಲ ಕನಸು ಕಂಡರೆ ಮಾತ್ರ ಸಾಲದು, ಆ ಕನಸುಗಳನ್ನು ನನಸಾಗಿಸಲು ಸತತ ಪರಿಶ್ರಮ ಮತ್ತು ಸರಿಯಾದ ಯೋಜನೆ ಅತ್ಯಾವಶ್ಯಕ. ಯಾವುದೇ ದೊಡ್ಡ ವ್ಯವಹಾರವು ಸಣ್ಣ ಕಲ್ಪನೆಯಿಂದಲೇ ಆರಂಭಗೊಂಡು, ಕಾಲಕ್ರಮೇಣ ಯಶಸ್ವಿ ಉದ್ಯಮವಾಗಿ ರೂಪಗೊಳ್ಳುತ್ತದೆ. ಉದ್ಯಮವಾಗಲಿ ಅಥವಾ ಸ್ಟಾರ್ಟ್ಅಪ್ ಆಗಲಿ, ಅದಕ್ಕೆ ಸೂಕ್ತ ಯೋಜನಾಬದ್ಧತೆ ಬಹಳ ಮುಖ್ಯ. ಅನೇಕ ಬಾರಿ ನಮ್ಮ ಹಾದಿಯಲ್ಲಿ ವೈಫಲ್ಯದ ಭಯವಿರುತ್ತದೆ. ಅದಕ್ಕೆಂದು ಸರಿಯಾದ ಯೋಜನೆ ಮತ್ತು ಅದರಲ್ಲಿ ಅಪಾರ ಅನುಭವ ಹೊಂದಿರುವ ತಜ್ಞರ ಮಾರ್ಗದರ್ಶನವಿದ್ದರೆ, ಸೋಲು ಅಥವಾ ತಿರಸ್ಕಾರದ ಸಾಧ್ಯತೆಗಳು ಅತ್ಯಂತ ಕಡಿಮೆ ಇರುತ್ತವೆ ಎಂದು ಪ್ರೊ .ಶ್ರೀಕೃಷ್ಣ ಗಣರಾಜ್ ಭಟ್ ಹೇಳಿದರು. 

      

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಇಲ್ಲಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸ್ನಾತಕೋತ್ತರ ವಾಣಿಜ್ಯ ವಿಭಾಗ, ಉದ್ಯಮಶೀಲತಾ ಕೋಶ ಮತ್ತು ಐ.ಕ್ಯೂ.ಎ.ಸಿ ಘಟಕ ಹಾಗು ಐ.ಸಿ.ಎ.ಆರ್- ಡೈರೆಕ್ಟರೇಟ್ ಆಫ್ ಕ್ಯಾಷ್ಯೂ ರಿಸರ್ಚ್, ಪುತ್ತೂರು ಇವರ ಸಹಯೋಗದೊಂದಿಗೆ ಆಯೋಜಿಸಿದ `ಶಿತಿಜ್ 2.0'  ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು. 

   

ಕಾರ್ಯಕ್ರಮದಲ್ಲಿ ಡಿ.ಸಿ.ಆರ್ ಪುತ್ತೂರಿನ ಹಿರಿಯ ವಿಜ್ಞಾನಿ (ತೋಟಗಾರಿಕೆ) ಡಾ.ವಿ.ತೊಂಡೈಮಾನ್, ವಿಜ್ಞಾನಿ (ಫಾರ್ಮ್ ಪವರ್ & ಮೆಷಿನರಿ) ಡಾ.ಮಂಜುನಾಥ ಕೆ, ಹಾಗೂ ವಿಜ್ಞಾನಿ (ಕೃಷಿ ವಿಸ್ತರಣೆ) ಡಾ. ಅಶ್ವತಿ ಸಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಶಿತಿಜ್ 2.0 ಕುರಿತು ಸಂವಾದ ನಡೆಸಿದರು. ವೇದಿಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ವಿಜಯಸರಸ್ವತಿ.ಬಿ ಉಪಸ್ಥಿತರಿದ್ದರು. 


ಸ್ನಾತ್ತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮಿ.ಎಸ್.ಭಟ್ ಸ್ವಾಗತಿಸಿ, ವಿದ್ಯಾರ್ಥಿನಿ ದೀಕ್ಷಾ ವಂದಿಸಿ, ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top