ಬದುಕನ್ನು ಬದುಕಬೇಕು. 'ಬೇರೆಯವರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಸಮಾಜದಲ್ಲಿ ಸಹಕಾರ ತತ್ವದ ಮೂಲಕ ಬದುಕಿದರೆ ಶಾಂತಿ ಸಮಾಧಾನ ಇರುತ್ತದೆ ಎಂದು ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಹಾಲುಸ್ವಾಮೀಜಿಗಳು ತಿಳಿಸಿದರು.
ಬಾದಾಮಿಯಲ್ಲಿ ಬನಶಂಕರಿ ಶ್ರೀ ಗಾಯಿತ್ರಿ ಸಭಾ ಭವನದಲ್ಲಿ ಕದಂಬ ಸೈನ್ಯ ರಾಜ್ಯ ಕನ್ನಡ ಸಂಘಟನೆ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ವತಿಯಿಂದ ಭಾನುವಾರ ನಡೆದ ಚಾಲುಕ್ಯ ವರಸಿರಿ ಕೃತಿ ಲೋಕಾರ್ಪಣೆ ಮತ್ತು ಚಾಲುಕ್ಯ ಇಮ್ಮಡಿ ಪುಲಿಕೇಶಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆರ್ಶೀವಚನ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾದಾಮಿ ಕ್ಷೇತ್ರದ ಶಾಸಕರು ಭೀಮಸೇನ ಬಿ. ಚಿಮ್ಮನಕಟ್ಟಿ ರವರು ಮಾತನಾಡಿ ಕದಂಬ ಸೈನ್ಯ ಕನ್ನಡ ಸಂಘಟನೆಯು ಕನ್ನಡ ನಾಡು ನುಡಿ ಉಳಿಸುವ ಕಾಳಜಿಯ ಉತ್ತಮ ಕಾರ್ಯ ಮಾಡುತ್ತಿದೆ. ಸಾಹಿತ್ಯ ಪ್ರೋತ್ಸಾಹ ವಿವಿಧ ಕ್ಷೇತ್ರದ ಸಾಧಕರನ್ನು, ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್ ಮಾತನಾಡಿ ಕನ್ನಡಾಂಬೆಯ ಸೇವೆ ಸಲ್ಲಿಸುತ್ತ ವಿವಿಧ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸುವ ಕೈಂಕರ್ಯದಲ್ಲಿ ಸಾಹಿತಿಗಳು, ಕಲಾವಿದರು, ಸಮಾಜ ಸೇವಕರು, ಪ್ರಗತಿಪರ ಕೃಷಿಕರು ಮೊದಲಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದೆ ಎಂದರು. ಸಾಹಿತ್ಯ ಕ್ಷೇತ್ರದಿಂದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ ಲಂಬಾಣಿ, ಹಾಸನದ ಹಿರಿಯ ಸಾಹಿತಿ, ನಿವೃತ್ತ ಇಂಜಿನಿಯರ್ ಟಿ. ಶಂಕರಪ್ಪ ಹುಲ್ಲಂಗಾಲ (ಕಾವ್ಯನಾಮ - ರಾಜಣ್ಣ ರಾಶಿ) ಯುವ ಸಾಹಿತಿ ಕೆ.ಎನ್. ಚಿದಾನಂದ (ನಾನಂಚಿ) ರವರಿಗೆ ಚಾಲುಕ್ಯ ಇಮ್ಮಡಿ ಪುಲಿಕೇಶಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ಹಾಸನದ ಸಾಹಿತಿ ಗೊರೂರು ಅನಂತರಾಜು ಬಾದಾಮಿಯ ನವಗ್ರಹ ಹಿರೇಮಠದ ಷ.ಬ್ರ. ಶಿವಪೂಜಾ ಶಿವಾಚಾರ್ಯ ಮಹಾಸ್ವಾಮೀಜಿ, ಚಿತ್ರ ನಿರ್ಮಾಪಕರು ಡಾ. ಎನ್ . ನರಸಿಂಹಮೂರ್ತಿ, ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಡಾ.ಸಿ.ರೇಣುಕಾಂಬ, ಚಲನಚಿತ್ರ ನಟಿ ಕು.ಸೋನಾ ಲದ್ವ ಮೊದಲಾದವರು ಇದ್ದರು.

