ಕೆಎಸ್‌ಸಿಎ ಅಂತರ್‍‌ ಶಾಲಾ ಕ್ರಿಕೆಟ್: ಸುದಾನ ಶಾಲೆ ಸೆಮಿಫೈನಲ್ ಹಂತಕ್ಕೆ

Upayuktha
0

ಪುತ್ತೂರು: ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ನಡೆಯುತ್ತಿರುವ ಮಂಗಳೂರು ಜೋನ್ 16 ವಯೋಮಾನದ ಅಂತರ್ ಶಾಲಾ ಕ್ರಿಕೆಟ್ ಪಂದ್ಯಾಟದಲ್ಲಿ ಸುದಾನ ಶಾಲೆ ಸೆಮಿಫೈನಲ್ ಹಂತಕ್ಕೆ ತೇರ್ಗಡೆ ಹೊಂದಿದೆ. ಕ್ವಾರ್ಟರ್ ಫೈನಲ್ ನಲ್ಲಿ ಸೈಂಟ್ ಅಲೋಶಿಯಸ್ ಉರ್ವ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ 30 ಓವರ್ ಗಳಲ್ಲಿ 187 ರನ್‌ಗಳ ಗುರಿ ನೀಡಿತು. ಮೊಹಮ್ಮದ್ ಅಜ್ಮಲ್ 21 ರನ್ ಗೆ 4 ವಿಕೆಟ್ ಇಬ್ರಾಹಿಂ ಫಾಸಿಲ್ 1 ವಿಕೆಟ್ ಕಬಳಿಸಿದರು.


ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸುದಾನ ಶಾಲೆ 22 ಓವರ್ ಗಳಲ್ಲಿ 187 ರನ್ ಗುರಿ ತಲುಪಿತು. ಸುದಾನ ಶಾಲೆಯ ಸಂಭ್ರಮ್ ಕುಶಾಲ್ ಶೆಟ್ಟಿ ಭರ್ಜರಿ ಅಜೇಯ ಶತಕ 107 ರನ್ ದಾಖಲಿಸಿದರು. ಇವರಿಗೆ ಜೊತೆಯಾಟದಲ್ಲಿ ಮೊಹಮ್ಮದ್ ಅಜ್ಮಲ್ 26 ರನ್, ಆಯುರ್ ವರ್ಷ 26 ರನ್‌ಗಳ ಕೊಡುಗೆ ನೀಡಿದರು.


ಇವರನ್ನು ಶಾಲಾ ಸಂಚಾಲಕರು ರೆ. ವಿಜಯ ಹಾರ್ವಿನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್, ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪರಾಜ್ ಲೀಲಾವತಿ ಜೀವಿತ, ಅಭಿನಂದಿಸಿ ಶುಭ ಹಾರೈಸಿದರು. ಇವರಿಗೆ ಸುದಾನ ಕ್ರಿಕೆಟ್ ಅಕಾಡೆಮಿಯ ಕಿರಣ್ ಕುಮಾರ್ ಹಾಗೂ ನವೀನ್ ಕಡಬ ತರಬೇತಿ ನೀಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top