ದೆಹಲಿಯ ರಾಜಬೀದಿಯಲ್ಲಿ ಜಯತೀರ್ಥರ ಆರಾಧನಾ ಮೆರವಣಿಗೆ

Upayuktha
0

ನವದೆಹಲಿ: ಮಾಧ್ವ ಸಿದ್ಧಾಂತದ ಮಹಾಪುರುಷರಲ್ಲಿ ಓರ್ವರೆಂದು ಖ್ಯಾತರೂ, ಶ್ರೀಮನ್ನ್ಯಾಯಸುಧಾಗ್ರಂಥ ಕರ್ತೃಗಳೂ ಪ್ರಾತಃಸ್ಮರಣೀಯರೂ ಆಗಿರುವ ಶ್ರೀ ಜಯತೀರ್ಥಾರ್ಯರ ಆರಾಧನೋತ್ಸವದ ಪ್ರಯುಕ್ತ ನವದೆಹಲಿಯ ರಾಜಬೀದಿಯಲ್ಲಿ ವೈಭವದ ಮೆರವಣಿಗೆ ಸೋಮವಾರ ನೆರವೇರಿತು.


ಸಾಲಂಕೃತ ಪಲ್ಲಕ್ಕಿಯಲ್ಲಿ ಜಯತೀರ್ಥರ ಗ್ರಂಥಗಳಿಗೆ ಮತ್ತು ಜಯತೀರ್ಥರ ಭಾವಚಿತ್ರಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಮಂಗಳಾರತಿ ಬೆಳಗಿದ ಬಳಿಕ ವೇದವ್ಯಾಸ ಗುರುಕುಲದಿಂದ ಪುರಮೆರವಣಿಗೆಯು ಸುಮಾರು ಒಂದು ಕಿಮೀ ದೂರ ಸಾಗಿ ಗುರುಕುಲದ ಕೃಷ್ಣಮಂದಿರಕ್ಕೆ ಮರಳಿದ ಬಳಿಕ ಶ್ರೀ ಕೃಷ್ಣದೇವರ ಮುಂಭಾಗ ಪುನಃ ಶ್ರೀಗಳು ಜಯತೀರ್ಥರಿಗೆ ಮಂಗಳಾರತಿ ಬೆಳಗುವುದರೊಂದಿಗೆ ಮುಕ್ತಾಯಗೊಂಡಿತು. ಸಭಾವೇದಿಕೆಯಲ್ಲಿ ಸೋಮವಾರ ಪೂರ್ತಿ ನಡೆದ ವಿದ್ವದ್ಗೋಷ್ಠಿಯನ್ನು ಜಯತೀರ್ಥ ಗುರುಗಳಿಗೆ ಸಮರ್ಪಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top