ಗುರು ಪೂರ್ಣಿಮಾ ವಿಶೇಷ: ಉಡುಪಿಯಲ್ಲಿ ಸಂಭ್ರಮದ ಸಹಸ್ರ ಕಂಠಗಾಯನ

Upayuktha
0

 


ಉಡುಪಿ: ಪರ್ಯಾಯ ಶ್ರೀ ಶೀರೂರುಮಠ -ಶ್ರೀಕೃಷ್ಣಮಠದ ಆಶ್ರಯ ದಲ್ಲಿ ಗುರುಪೂರ್ಣಿಮೆಯ ಪೂರ್ವಕಾಲದಲ್ಲಿ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥರಿಗೆ ಗುರು ಅಭಿವಂದನೆ ಹಾಗೂ ಸಹಸ್ರಕಂಠ ಭಕ್ತಿಗಾಯನ ಕಾರ್ಯಕ್ರಮ ಆಯೋಜಿಸಲಾಯಿತು. ರಾಜಾಂಗಣದಲ್ಲಿ ಉದ್ಘಾಟನೆಗೊಂಡ ಈ ಕಾರ್ಯಕ್ರಮ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮತ್ತು ದಾಸನಮನ ತಂಡ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆಯಿತು.


ದಾಸನಮನ ತಂಡದ ಸುಮಾರು ಆರುನೂರಕ್ಕೂ ಹೆಚ್ಚು ಮಂದಿ ಆಗಮಿಸಿ ಕುಣಿತಭಜನೆ ಹಾಗೂ ಸಹಸ್ರ ಕಂಠ ಗೀತಗಾಯನದಲ್ಲಿ ಭಾಗವಹಿಸಿದರು.


ಈ ಕಾರ್ಯಕ್ರಮದಲ್ಲಿ ಪರ್ಯಾಯ ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ, ಟಿಟಿಡಿ ಯ ದೃಶ್ಯವಾಹಿನಿಯ ಮುಖ್ಯಸ್ಥ ಗುಂಡುರಾವ್, ಭಜನಾ ಪರಿಷತ್ ನ ಸಂತೋಷ್ ಪಿ ಅಳಿಯೂರು, ದಾಸನಮನ ತಂಡದ ಶ್ರೀಮತಿ ಸುಭಾಷಿಣಿ, ಗೀತಾಮಣಿ ಆರ್ ಕೆ, ರಶ್ಮೀ  ಹಾಗೂ ಉಡುಪಿಯ ಡಾ. ಉಷಾ ಹೆಬ್ಬಾರ್, ಶೋಭಾ ಉಪಾಧ್ಯ‌ ಮೊದಲಾದವರು ಭಾಗವಹಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top