ಧರ್ಮ ರಕ್ಷಣೆಯ ಪ್ರೇರಕ ಶಕ್ತಿಯಾಗಿ ನಿಂತವಳು ಅಕ್ಕ ನಾಗಮ್ಮನ: ಅಮೀನಗಡ ಶ್ರೀಗಳು

Upayuktha
0


ಹುನಗುಂದ: ಧರ್ಮ ರಕ್ಷಣೆಯ ಪ್ರೇರಕ ಶಕ್ತಿಯಾಗಿ, ಪೋಷಕಳಾಗಿ ನಿಂತ ಅಕ್ಕನಾಗಮ್ಮ, ಬಸವಣ್ಣನ ಹಿರಿಯ ಸಹೋದರಿ. ಚನ್ನ ಬಸವಣ್ಣನ ತಾಯಿ. ವಚನ ಸಾಹಿತ್ಯ, ಧರ್ಮರಕ್ಷಣೆಯ ಉಳಿವಿಗಾಗಿ ಜೀವನದುದ್ದಕ್ಕೂ ಹೋರಾಡಿದ ವೀರಮಹಿಳೆ ಎಂದು ಅಮೀನಗಡದ ಪ್ರಭು ಶಂಕರೇಶ್ವರ ಮಠದ ಶಂಕರ ರಾಜೇಂದ್ರ ಶ್ರೀಗಳು ಹೇಳಿದರು.


ಅವರು ನಗರದ ತಾಲೂಕ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಓಂ ಶಾಂತಿ ಬಡಾವಣೆಯಲ್ಲಿರುವ ಶರಣ ದಂಪತಿಗಳಾದ ಲೇಖಕ ಮುತ್ತು ವಡ್ಡರ ಮನೆಯ ಅವರಣದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಶರಣ ಸಂಸ್ಕೃತಿ ಜಗತ್ತಿನಾದ್ಯಂತ ಬೆಳೆಸಲು ಅಕ್ಕನಾಗಮ್ಮನ ತ್ಯಾಗ, ಸಾಹಸಮಯ ಹೋರಾಟ ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶಿ. ಬಸವಣ್ಣನನ್ನು ಅಲ್ಲಮಪ್ರಭುವಿನ ನಂತರ ಶೂನ್ಯ ಪೀಠದ ಅಧ್ಯಕ್ಷನಾಗಿ ರೂಪಿಸಿದ ಕೀರ್ತಿ ಅಕ್ಕನಾಗಮ್ಮನದ್ದು. ಶರಣ ಸಂಕುಲ ಅಕ್ಕನಾಗಮ್ಮನನ್ನು ಅಕ್ಕನಾಗಲಾಂಬಿಕೆ, ನಾಗಲಾಂಬೆ, ಅಕ್ಕನಾಗಲಾಂಬೆ, ಅಕ್ಕನಾಗಾಯಿ, ಅಕ್ಕನಾಗಾಯಮ್ಮ, ನಾಗಾಯಿ, ನಾಗಲೆ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ.


ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಇಂಗಳೇಶ್ವರ ಅಗ್ರಹಾರದ ಅಧಿಪತಿ ಮಾದರಸ, ಮಿದಲಾಂಬಿಕೆ ದಂಪತಿಗೆ ಕ್ರಿ.ಶ. 1119 ರಲ್ಲಿ ಅಕ್ಕನಾಗಮ್ಮ ಜನಿಸಿದಳು. ಗುರು ರೇವಣಸಿದ್ದರ ಪ್ರಭಾವದಿಂದ ನಾಗಲಾಂಬಿಕೆಗೆ ಶಿವಭಕ್ತಿ, ಯೋಗಸಾಧನೆಯ ಕಡೆಗೆ ಒಲವು ಅಧಿಕವಾಯಿತು. ಬಸವಣ್ಣ ಎಂಟನೇ ವಯಸ್ಸಿನಲ್ಲಿ ಕೂಡಲಸಂಗಮಕ್ಕೆ ಹೊರಟಾಗ ಅಕ್ಕನಾಗಮ್ಮನೂ ಅವನೊಡನೆ ಹೋದಳು. ಸಂಗಮದ ಸುಂದರ ಪರಿಸರದಲ್ಲಿ ಬಸವಣ್ಣ ಸಕಲಾಗಮ ಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಅಕ್ಕನಾಗಮ್ಮ ಬಸವಣ್ಣನಿಗೆ ನೆರಳಾಗಿ, ಮಾರ್ಗದರ್ಶಕಳಾಗಿ ಕ್ರಿ.ಶ. 1140 ರಿಂದ 1156 ರವರೆಗೆ ಕೂಡಲಸಂಗಮದಲ್ಲಿ ವಾಸವಿದ್ದಳು.


ತಂದೆ- ತಾಯಿಯ ಅಕ್ಕರೆಯ ಮಗಳಾಗಿ ಬೆಳೆದ ಅಕ್ಕನಾಗಮ್ಮಗೆ ಕೂಡಲಸಂಗಮದ ಶಿವಸ್ವಾಮಿಯೊಂದಿಗೆ ಮದುವೆ ಮಾಡಿದರು. ಅಕ್ಕನಾಗಮ್ಮ, ಶಿವಸ್ವಾಮಿ ದಂಪತಿಗಳಿಗೆ ಚನ್ನಬಸವಣ್ಣ ಮಗ ಜನಿಸಿದ. ಬಾಲ್ಯದಲ್ಲಿಯೇ ನಾಗಮ್ಮ ಮಗನಿಗೆ ಆಧ್ಯಾತ್ಮಿಕ ಜ್ಞಾನ ಸಂಪತ್ತು ತುಂಬಿದಳು. ಅದರ ಫಲವಾಗಿಯೇ ಚನ್ನಬಸವಣ್ಣ ಜ್ಞಾನನಿಧಿ, ಷಟ್ಸ್ಥಲ ಚಕ್ರವರ್ತಿ ಎಂದು ಖ್ಯಾತನಾದ.


12ನೇ ಶತಮಾನದಲ್ಲಿ ಮಹಿಳೆಗೂ ಧಾರ್ಮಿಕ ಜೀವನದಲ್ಲಿ ಸಮಪಾಲು ಸಿಗಬೇಕು ಎಂದು ನಾಗಮ್ಮ, ಅನುಭವ ಮಂಟಪದ ಮೇಲ್ವಿಚಾರಣೆಯ ಜವಾಬ್ದಾರಿ ಪಡೆದಾಗ ಮಹಿಳೆಯರ ಸ್ಥಾನಮಾನ ಹೆಚ್ಚಿತು ಎಂದರು. ಹುನಗುಂದದ ಗಚ್ಚಿನ ಮಠದ ಅಮರೇಶ್ವರ  ದೇವರು ನೇತೃತ್ವ ವಹಿಸಿ ತಮ್ಮ ಆಶೀರ್ವಚನದಲ್ಲಿ ಮಹಿಳೆಯರು ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತಾಯಿತು. ಮಹಾಮನೆಗೆ ಬರುವ ಅತಿಥಿಗಳ ಪ್ರಸಾದೋಪಚಾರ, ಅನುಭವ ಮಂಟಪದ ಶಿವಾನುಭವಗೋಷ್ಠಿಯ ವ್ಯವಸ್ಥೆ ಅಕ್ಕನಾಗಮ್ಮ ನೋಡಿಕೊಳ್ಳುತ್ತಿದ್ದಳು. ತ್ರಿಪುರಾಂತರ ಗವಿಯಲ್ಲಿ ದೇವರ ಧ್ಯಾನ ಮಾಡುತ್ತಿದ್ದಳು.


ಶರಣರೆಲ್ಲರೂ ಕಾಯಕದಲ್ಲಿ ನಿರತರಾಗಬೇಕು, ಕಾಯಕದಲ್ಲಿ ಉಚ್ಚ ನೀಚ ಭಾವನೆ ಬರಬಾರದು, ಗಳಿಸಿದ್ದನ್ನು ದಾಸೋಹದ ಮೂಲಕ ಸಮಾಜದ ಒಳಿತಿಗಾಗಿ ವಿನಿಯೋಗಿಸಬೇಕು, ಸತ್ಯ ಶುದ್ಧ ಕಾಯಕದಿಂದ ನಿರ್ಮಲ ಚಿತ್ತರಾಗಬೇಕು. ದಾಸೀ ಪುತ್ರನಾಗಲಿ ಮಹಾರಾಜನಾಗಲಿ  ಲಿಂಗದೀಕ್ಷೆ ಪಡೆದ ನಂತರ ತಮ್ಮ ಪೂರ್ವಾಶ್ರಮ ಮರೆಯಬೇಕು ಎಂಬ ತತ್ವಗಳನ್ನು ಅಕ್ಕನಾಗಮ್ಮ ಜನರಿಗೆ ಬಿತ್ತರಿಸಿದಳು.


ಕಲ್ಯಾಣ ಕ್ರಾಂತಿಯಲ್ಲಿ ಚನ್ನಬಸವಣ್ಣನ ನೇತೃತ್ವದಲ್ಲಿ ಶರಣ ಶರಣೆಯರೆಲ್ಲ ಧರ್ಮ ರಕ್ಷಣೆಯ ಕಾರ್ಯಕ್ಕೆ ಸಿದ್ಧರಾದರು. ಅಕ್ಕನಾಗಮ್ಮ, ಗಂಗಾಂಬಿಕೆ ಶರಣರ ರಕ್ಷಣೆ ನಿರ್ವಹಿಸಲು ಮುಖಂಡತ್ವ ವಹಿಸಿದರು. ಅಕ್ಕನಾಗಮ್ಮ ತನ್ನೊಡನೆ ಸಮಗ್ರ ವಚನ ಸಾಹಿತ್ಯದ ಕಟ್ಟುಗಳನ್ನು ಕೊಂಡೊಯ್ದು ಸಂರಕ್ಷಿಸಿದಳು.


ನಾಗಲಾಪುರದಲ್ಲಿ ಅಕ್ಕನಾಗಮ್ಮ ಕೆಲವು ಕಾಲ ವಾಸವಾಗಿದ್ದರಿಂದ ಆ ಊರಿಗೆ ನಾಗಲಾಪುರ ಎಂಬ ಹೆಸರು ಬಂದಿದೆ. ಇಂದಿಗೂ ಆ ಊರಿನಲ್ಲಿ ಅಕ್ಕನಾಗಮ್ಮ ಹೆಸರಿನ ದೇವಾಲಯವಿದೆ. ಬಿಜ್ಜಳರೊಡನೆ, ಶರಣರ ಯುದ್ಧ ನಡೆದಾಗ ಅಕ್ಕನಾಗಮ್ಮ, ನುಲಿಯ ಚಂದಯ್ಯ ಶರಣರೊಡನೆ ಮುಂದೆ ಸಾಗಿ ತರೀಕೆರೆ ಹತ್ತಿರ ಎಣ್ಣೆಹೊಳೆ ಪ್ರದೇಶದಲ್ಲಿ ನೆಲೆಸಿದಳು. ಧರ್ಮ ರಕ್ಷಣೆಯ ಕಾರ್ಯವನ್ನು ಮುಂದುವರಿಸಿಕೊಂಡು, ಶರಣರ ಧರ್ಮದ ಪ್ರಚಾರ ಮಾಡುತ್ತ ಅಲ್ಲಿಯೇ ಅಕ್ಕನಾಗಮ್ಮ ಲಿಂಗದಲ್ಲಿ ಒಂದಾದಳು.


ಅಕ್ಕನಾಗಮ್ಮ 14 ವಚನಗಳು ಮಾತ್ರ ದೊರಕಿದ್ದು, ಬಸವಣ್ಣ ಪ್ರಿಯ ಚೆನ್ನಸಂಗಯ್ಯ ಎಂಬುದು ಅಂಕಿತವಾಗಿದೆ. ಬಸವಸ್ತುತಿ, ಶರಣಸ್ತುತಿ, ಆಧ್ಯಾತ್ಮ ರಂಗದಲ್ಲಿ ಆಕೆ ಸಾಧಿಸಿದ ನಿಲುವು, ಶ್ರದ್ಧೆ ಆಕೆಯ ವಚನದಲ್ಲಿ ಎದ್ದು ಕಾಣುವ ಅಂಶಗಳಾಗಿವೆ ಎಂದು ಅಭಿಪ್ರಾಯಪಟ್ಟರು.


ಹುನಗುಂದ ತಾಲೂಕ ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿ ಅನುಭಾವ ನೀಡಿದ ಅವರುಇವರ ವಚನಗಳು ಸರಳ ಭಾಷೆಯಲ್ಲಿ ಅಧ್ಯಾತ್ಮ, ಭಕ್ತಿ ಮತ್ತು ಅನುಭಾವ ಸಾರುತ್ತವೆ. ಬಸವಣ್ಣನವರ ವ್ಯಕ್ತಿತ್ವ ಹಾಗೂ ಶಿವಪಥದ ಕುರಿತು ಇವರ ವಚನಗಳಲ್ಲಿ ವಿಶೇಷ ವಿಶ್ಲೇಷಣೆ ಕಾಣಸಿಗುತ್ತದೆ.ಅಕ್ಕನಾಗಮ್ಮನ ವಚನಗಳ ವಿಶೇಷತೆ ಬಸವಣ್ಣನವರ ಪ್ರಭಾವ ಬಸವಣ್ಣ ತಮ್ಮ ತನು, ಮನ ಮತ್ತು ಛಲದ ಸೂತಕಗಳನ್ನು ಕಳೆದವರು ಎಂದು ಆಳವಾದ ಭಕ್ತಿಯಿಂದ ಸ್ಮರಿಸಿದ್ದಾರೆ.

ಅಂಕಿತನಾಮ: ಇವರ ವಚನಗಳು 'ಕಲ್ಯಾಣದ ಲಿಂಗ' ಅಥವಾ ಸಹಜ ಶಿವಪ್ರಜ್ಞೆಯ ಅಂಕಿಹೊಂದಿವೆ.


ಕುಟುಂಬ ಹಾಗೂ ಆಧ್ಯಾತ್ಮ: ಸಂಸಾರದಲ್ಲಿದ್ದುಕೊಂಡೇ ಶಿವಯೋಗ ಸಾಧನೆ ಮಾಡಬಹುದು ಎಂಬುದನ್ನು ಇವರ ಜೀವನ ಹಾಗೂ ವಚನಗಳು ತೋರುತ್ತವೆ.ವಿಶ್ಲೇಷಣೆ ಮತ್ತು ತತ್ವಗಳುಅಂತಃಕರಣ ಶುದ್ಧಿ: ಕೇವಲ ಬಾಹ್ಯ ಆಚರಣೆಗಳಲ್ಲದೆ, ಮನಸ್ಸಿನ ಶುದ್ಧಿಯೇ ಶಿವಪೂಜೆ ಎಂದು ವಚನಗಳಲ್ಲಿ ವಿವರಿಸಲಾಗಿದೆ.ಗುರುಕಾರುಣ್ಯ: ಬಸವಣ್ಣ ಮತ್ತು ಶರಣರ ಒಡನಾಟದಿಂದ ಉಂಟಾದ ಜ್ಞಾನೋದಯವನ್ನು ಇವರ ಸಾಹಿತ್ಯದಲ್ಲಿಕಾಣಬಹುದು. ತಮ್ಮ ಅನುಭವದ ನುಡಿಯಲ್ಲಿ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊಫೆಸರ್ ಎಸ್ ಎನ್ನ್ ಹಾದಿಮನಿ, ಮಾತನಾಡಿ 12ನೇ ಶತಮಾನದ ಶಿವಶರಣರಲ್ಲಿ ಅಕ್ಕ ನಾಗಮ್ಮಳು ಬಸವಾದಿ ಶರಣರಲ್ಲಿ ಬಸವಣ್ಣನವರ ಪ್ರಭಾವವನ್ನು ಬೀರಿ ಶರಣಿಯ್ರರನ್ನಾಗಿ, ಮಾಡಿದ ಕೀರ್ತಿ ಅಕ್ಕ ನಾಗಮ್ಮನಿಗೆ ಸಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟರು.


ವೇದಿಕೆಯಲ್ಲಿ ಕದಡಿ ಮಹಿಳಾ ವೇದಿಕೆಯ ಅಧ್ಯಕ್ಷ ಡಾ. ಶಿವಗಂಗಾ, ರಂಜನಗಿ ಶಾಂತಮ್ಮ ಯಮುನಪ್ಪ ವಡ್ಡರ ಉಪಸ್ಥಿತರಿದ್ದರು.

 ಶಿಕ್ಷಕಿ, ಗೀತಾ ತಾರಿವಾಳ ಪ್ರಾರ್ಥಿಸಿದರು, ಹುನಗುಂದ ತಾಲೂಕಿನ ಹಿರೇಮಳಗಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಸೌಭಾಗ್ಯ ಲಕ್ಷ್ಮಿ ಹುಚಕರಿ ಹಾಗೂ ರಾಜೇಶ್ವರಿ ಇದ್ದಲಗಿ 50 ವಚನಗಳನ್ನು ಕಂಠಪಾಠ ಹೇಳಿದರು.


ಶಿಕ್ಷಕ ಅಂದಾನಯ್ಯ ವಸ್ತ್ರದ ಸ್ವಾಗಸಿದರು, ಕಾರ್ಯದರ್ಶಿ ಸಂಗಮೇಶ ಹೊದ್ಲೂರು ನಿರೂಪಿಸಿದರು. ಲೇಖಕ ಮುತ್ತು ವಡ್ಡರ ವಂದಿಸಿದರು. ಇದೇ ಸಂದರ್ಭದಲ್ಲಿ ಇಂದಿನ ಕಾರ್ಯಕ್ರಮದ ಭಕ್ತಿ ಸೇವೆ ಗೈದ ಲೇಖಕ ಮುತ್ತು ವಡ್ಡರ ಶರಣ ದಂಪತಿಗಳನ್ನು ಪೂಜ್ಯರು ಗೌರವಿಸಿದರು.




Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top