ನಾರಾಯಣಗುರು ಜಯಂತಿ ಸಮಿತಿ ನೂತನ ಅಧ್ಯಕ್ಷ ಅಶೋಕ್ ಸನ್ನತಿಗೆ ಅಭಿನಂದನೆ

Upayuktha
0

 



ಕಲಬುರಗಿ :  ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಉತ್ಸವದ ಕಲಬುರಗಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿದ ನಿವೃತ್ತ ಇಂಜಿನಿಯರ್ ಅಶೋಕ್ ಕಲಾಲ್ ಸನ್ನತಿ ಅವರಿಗೆ ಹಾರ್ದಿಕವಾಗಿ ಅಭಿನಂದಿಸಲಾಯಿತು.

   

ಕಲಬುರಗಿಯ ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ವತಿಯಿಂದ ಶುಕ್ರವಾರ ಮುಖ್ಯ ಟ್ರಸ್ಟಿ ವೆಂಕಟೇಶ ಕಡೇಚೂರ್ ಅವರ ನೇತೃತ್ವದಲ್ಲಿ ಅಶೋಕ ಕಲಾಲ್ ಸನ್ನತಿ ಅವರನ್ನು  ಸನ್ಮಾನಿಸಲಾಯಿತು.


ಗುರುಗಳ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಮನೆ ಮನೆಗೂ ಗುರು ಸಂದೇಶ ಮುಟ್ಟಿಸಲು ಪ್ರಯತ್ನಿಸಬೇಕು. ಕಲಬುರಗಿ ಜಿಲ್ಲೆಯಲ್ಲಿ  ಬರ ಪರಿಸ್ಥಿತಿ ಎದುರಾಗಿರುವುದರಿಂದ ಜಯಂತಿ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಿ ಮಾದರಿಯಾಗಬೇಕು ಎಂದು ವೆಂಕಟೇಶ್ ಕಡೇಚೂರ್ ಹೇಳಿದರು. 

 

ಅಭಿನಂದನಾ ಕಾರ್ಯಕ್ರಮದಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಸದಾನಂದ ಪೆರ್ಲ, ಉದ್ಯಮಿ ರಾಜೇಶ್ ದತ್ತು ಗುತ್ತೇದಾರ್, ಮಲ್ಲಯ್ಯ  ಗುತ್ತೇದಾರ್, ಜೀವಣಗಿ, ಜನತಾ ಬಜಾರ್ ನ ಮಾಜಿ ಅಧ್ಯಕ್ಷ ಗುಂಡಪ್ಪ ಲಂಡನಕರ್, ವಿಜಯ ಕುಮಾರ್ ಅಬಕಾರಿ ಶಹಾಬಾದ್ ಇದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top