ಮಂಗಳೂರು: ಯಕ್ಷಗಾನದ ಹಿರಿಯ ಸಂಘಟಕ ದಿ.ಬೋಳೂರು ದೋಗ್ರ ಪೂಜಾರಿ ಅವರ ಮಗ, ಖ್ಯಾತ ಸಾಹಿತಿ ದಿ.ವಿಶು ಕುಮಾರ್ ಹಾಗೂ ಸಂಘಟಕ ದಿ. ದಾಮೋದರ ನಿಸರ್ಗ ಅವರ ಸಹೋದರ ಬೋಳೂರು ಮಧು ಕುಮಾರ್ (86) ಇಂದು ಸಂಜೆ ಬಂಟ್ವಾಳ ನರಿಕೊಂಬಿ ನಲ್ಲಿ ಪುತ್ರ ನ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯ ದಿಂದ ನಿಧನ ರಾದರು.
ಮಧುಕುಮಾರ್ ಅವರು ತುಳು, ಕನ್ನಡ ಪ್ರಸಂಗ ಕರ್ತರಾಗಿ ಜನಪ್ರಿಯತೆ ಗಳಿಸಿದವರು. ಅವರು ರಚಿಸಿದ "ಸುದರ್ಶನ ವಿಜಯ" ಪ್ರಸಂಗ ವು ಕಳೆದ ಐದು ದಶಕ ಗಳಿಂದ ವೃತ್ತಿ ಮೇಳ ಹಾಗೂ ಹವ್ಯಾಸಿ ವಲಯದಲ್ಲಿ ಪ್ರಸಿದ್ದಿ ಪಡೆದಿದೆ. ಕಡುಗಲಿ ಕುಮಾರ ರಾಮ, ಏಕಾದಶಿ ದೇವಿ ಮಹಾತ್ಮೇ, ಬಾಲೆ ನಾಗಮ್ಮ, ಶ್ರೀ ಸತ್ಯ ನಾರಾಯಣ ವ್ರತ ಮಹಾತ್ಮೆ, ತುಳು ಕೋಟಿ ಚೆನ್ನಯ ಪ್ರಸಂಗ ಗಳು ನಿತ್ಯ ನೂತನ ಪ್ರಸಂಗ ಗಳಾಗಿವೆ.
ಅವರು ಭಾಗವತರಾಗಿಯೂ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಯಕ್ಷಗಾನ ವೇಷ ಭೂಷಣ ವ್ಯವಸ್ಥೆಯನ್ನೂ ಹೊಂದಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಖ್ಯಾತ ಯಕ್ಷಗಾನ ಪ್ರಸಂಗ ಕರ್ತ, ಭಾಗವತ ಬೋಳೂರು ಮಧುಕುಮಾರ್ ವಿಧಿವಶ
ಮಂಗಳೂರು: ಯಕ್ಷಗಾನದ ಹಿರಿಯ ಸಂಘಟಕ ದಿ.ಬೋಳೂರು ದೋಗ್ರ ಪೂಜಾರಿ ಅವರ ಮಗ, ಖ್ಯಾತ ಸಾಹಿತಿ ದಿ.ವಿಶು ಕುಮಾರ್ ಹಾಗೂ ಸಂಘಟಕ ದಿ. ದಾಮೋದರ ನಿಸರ್ಗ ಅವರ ಸಹೋದರ ಬೋಳೂರು ಮಧು ಕುಮಾರ್ (86) ಇಂದು ಸಂಜೆ ಬಂಟ್ವಾಳ ನರಿಕೊಂಬಿ ನಲ್ಲಿ ಪುತ್ರ ನ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯ ದಿಂದ ನಿಧನ ರಾದರು.
ಮಧುಕುಮಾರ್ ಅವರು ತುಳು, ಕನ್ನಡ ಪ್ರಸಂಗ ಕರ್ತರಾಗಿ ಜನಪ್ರಿಯತೆ ಗಳಿಸಿದವರು. ಅವರು ರಚಿಸಿದ "ಸುದರ್ಶನ ವಿಜಯ" ಪ್ರಸಂಗ ವು ಕಳೆದ ಐದು ದಶಕ ಗಳಿಂದ ವೃತ್ತಿ ಮೇಳ ಹಾಗೂ ಹವ್ಯಾಸಿ ವಲಯದಲ್ಲಿ ಪ್ರಸಿದ್ದಿ ಪಡೆದಿದೆ. ಕಡುಗಲಿ ಕುಮಾರ ರಾಮ, ಏಕಾದಶಿ ದೇವಿ ಮಹಾತ್ಮೇ, ಬಾಲೆ ನಾಗಮ್ಮ, ಶ್ರೀ ಸತ್ಯ ನಾರಾಯಣ ವ್ರತ ಮಹಾತ್ಮೆ, ತುಳು ಕೋಟಿ ಚೆನ್ನಯ ಪ್ರಸಂಗ ಗಳು ನಿತ್ಯ ನೂತನ ಪ್ರಸಂಗ ಗಳಾಗಿವೆ.
ಅವರು ಭಾಗವತರಾಗಿಯೂ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಯಕ್ಷಗಾನ ವೇಷ ಭೂಷಣ ವ್ಯವಸ್ಥೆಯನ್ನೂ ಹೊಂದಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.