ಬೆಂಗಳೂರು: ಪ್ರಾಜೆಕ್ಟ್ ನ್ಯಾಯ ಸಂಸ್ಥೆಯು ನಾಗರಿಕ ಶಿಕ್ಷಣವನ್ನು ಇದೇ ಮೊದಲ ಬಾರಿಗೆ ಮ್ಯಾರಥಾನ್‌ಗೆ ತಂದು ಕಾನೂನು ಅರಿವು ಒಂದು ಹೆಜ್ಜೆಯೊಂದಿಗೆ ಪ್ರಾರಂಭವಾಗಬಹುದು ಎಂಬ ವಿನೂತನ ಸಂದೇಶ ಸಾರುವ ಮ್ಯಾರಥಾನ್ ಓಟ ಬೆಂಗಳೂರಿನಲ್ಲಿ ಹೊಸ ಅಧ್ಯಾಯವೊಂದಕ್ಕೆ ಸಾಕ್ಷಿಯಾಯಿತು.
ಕಾನೂನು ಶಿಕ್ಷಣವು ನ್ಯಾಯಾಲಯ ಅಥವಾ ತರಗತಿಯೊಳಗೆ ಮಾತ್ರ ಜ್ಞಾನ ನೀಡುತ್ತವೆ ಎಂಬುದನ್ನು ತೊಡೆದು ಹಾಕಿ ಮ್ಯಾರಥಾನ್ ಕೂಡ ಸಹಕಾರಿ ಯಾಗಬಲ್ಲದು ಎಂಬುದನ್ನು ಮೂಲ ಉದ್ದೇಶವಾಗಿಸಿ ವಿನೂತನ ಕಾನೂನು ಜಾಗೃತಿ ಉಪಕ್ರಮವನ್ನು ಮೂಲತಃ ಕಲಬುರಗಿಯವರಾದ ಬೆಂಗಳೂರು ಹೈಕೋರ್ಟ್ ನ್ಯಾಯವಾದಿಗಳಾದ ಶಿಲ್ಪಾ ಗೋಗಿ ಮತ್ತು ಎನ್. ಭಾರ್ಗವ್ ಅವರ ಪುತ್ರಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಯು) ಯ ಪ್ರಸ್ತುತ ವಿದ್ಯಾರ್ಥಿನಿ ಅಗ್ರತಾ ಭಾರ್ಗವ ಪ್ರಾಜೆಕ್ಟ್ ನ್ಯಾಯ ಇದರ ಮೂಲಕ ಸಾಧಿಸಿ ತೋರಿಸಿದ್ದಾರೆ.
ಕಾನೂನು ಶಿಕ್ಷಣವು ಪ್ರವೇಶಿಸಬಹುದಾದ ಮತ್ತು ಶಕ್ತಿಯುತವಾಗಲು ಮ್ಯಾರಥಾನ್ ಎಂಬ ಹೊಸ ಕಲ್ಪನೆಯೊಂದಿಗೆ ಜೋಡಣೆಗೊಳಿಸಿ ಹೊಸ ಸಾಧನೆ ಮೆರೆದಿದ್ದಾರೆ. ಪ್ರಾಜೆಕ್ಟ್ ನ್ಯಾಯ ಈ ಸಂಸ್ಥೆಯು ಮೊದಲ ಬಾರಿಗೆ ಫಿಟ್‌ನೆಸ್ ಸಮುದಾಯ ಮತ್ತು ನಾಗರಿಕ ಪ್ರಜ್ಞೆಯನ್ನು ಸಮಾಗಮಗೊಳಿಸಿದ ವಿಶಿಷ್ಟ ರೀತಿಯ ಪ್ರಯತ್ನವಾಗಿದೆ.
ಕಾನೂನು ಜ್ಞಾನ ಮತ್ತು ದೈನಂದಿನ ನಾಗರಿಕ ಪ್ರಜ್ಞೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಹೊಸ ದೃಷ್ಟಿಕೋನವನ್ನು ಅಗ್ರತಾ ಭಾರ್ಗವ್ ಸ್ಥಾಪಿಸಿದ ಪ್ರಾಜೆಕ್ಟ್ ನ್ಯಾಯದಿಂದ ಹೊಸ ಬದಲಾವಣೆ ಸಾಧ್ಯ ಎಂಬುದನ್ನು ಸಾಬೀತುಗೊಳಿಸಿ ಮನ್ನಣೆಯನ್ನು ಗಳಿಸುತ್ತಿದೆ. ಕಾನೂನು ಪ್ರಜ್ಞೆಯಿಂದ ದೂರ ಇರುವ ಬದಲಿಗೆ ಜನರು ತಮ್ಮ ದೈನಂದಿನ ಜೀವನದಲ್ಲಿ ಕಾನೂನಿನಡಿ ಪ್ರಶ್ನಿಸಬಹುದು ಮತ್ತು ಅದನ್ನು ಬಳಸಬಹುದು ಎಂಬುದನ್ನು ಸಾರುವಲ್ಲಿ ಯಶಸ್ವಿಯಾಗಿದೆ.
ಹೆಚ್ಚಿನ ಜನರಿಗೆ ಹಕ್ಕುಗಳ ಬಗ್ಗೆ ತಿಳಿದಿಲ್ಲ ಮತ್ತು ಅದೇ ದೊಡ್ಡ ಸಮಸ್ಯೆಯಾಗಿದೆ, ಪ್ರಾಜೆಕ್ಟ್ ನ್ಯಾಯ- 3 ಕೆ ಜಾಗೃತಿ ಸಂದೇಶ ಪಸರಿಸಲು ಇತ್ತೀಚೆಗೆ ಭಾನುವಾರ ಬೆಳಿಗ್ಗೆ ಏರ್ಪಡಿಸಿದ ಮ್ಯಾರಥಾನ್ ನಿಖರವಾಗಿ ಉತ್ತರ ಕಂಡುಕೊಂಡಿದೆ.
ಬೆಳಿಗ್ಗೆ 6:30 ರಿಂದ 9:30 ರವರೆಗೆ ನಡೆದ ಈ ಮ್ಯಾರಥಾನ್ ಎಂಎಸ್ ಬಿಲ್ಡಿಂಗ್ ಪಾರ್ಕ್‌ನಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧೀನ ಕಾರ್ಯದರ್ಶಿ ನಾಗರಾಜ್ ಚಾಲನೆ ನೀಡಿದರು. ಬಸವೇಶ್ವರ ವೃತ್ತವನ್ನು ದಾಟಿ ಬಿ ಆರ್ ಅಂಬೇಡ್ಕರ್ ರಸ್ತೆಯ ಮೂಲಕ 3 ಕಿ.ಮೀ ಮಾರ್ಗವನ್ನು ಕ್ರಮಿಸಿತು. ವಿಧಾನಸೌಧದ ಸುತ್ತಲಿನ ಸುಮಾರು 50 ಕ್ಕೂ ಹೆಚ್ಚು ಮ್ಯಾರಥಾನ್ ಓಟಗಾರರು ಉತ್ಸಾಹ ಮತ್ತು ಖಚಿತ ಉದ್ದೇಶದೊಂದಿಗೆ ಒಟ್ಟುಗೂಡಿ, ಅಂತಿಮ ಗೆರೆಯನ್ನು ಮೀರಿ ಉದಾತ್ತ ಸಂದೇಶ ಸಾರುವಲ್ಲಿ ಯಶಸ್ವಿಯಾದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಕುಟುಂಬಗಳು, ವೃತ್ತಿಪರರು, ಫಿಟ್‌ನೆಸ್ ಉತ್ಸಾಹಿಗಳು ಮತ್ತು ಕಾನೂನು ಸಮುದಾಯದ ಸದಸ್ಯರ ಸ್ಪೂರ್ತಿದಾಯಕ ಒಗ್ಗೂಡುವಿಕೆಯನ್ನು ಪ್ರದರ್ಶಿಸಿತು, ಎಲ್ಲರೂ ಸಂತಸ ಹಂಚಿಕೊಂಡರು, ಓಟವು ಮುಕ್ತಾಯದ ಗೆರೆಯಲ್ಲಿ 3 ನಿಶ್ಚಿತಾರ್ಥದ ಗುರಿಗಳೊಂದಿಗೆ ಸಾಂವಿಧಾನಿಕ ಮೌಲ್ಯಗಳು, ಕಾನೂನು ಹಕ್ಕುಗಳು ಮತ್ತು ನಾಗರಿಕ ಜವಾಬ್ದಾರಿಗಳ ವಿಷಯದ ಕುರಿತು ಸ್ವಯಂಸೇವಕರೊಂದಿಗೆ ನೇರವಾಗಿ ಸಂವಾದ ನಡೆಸಲು ಅವಕಾಶವನ್ನು ನೀಡಿತು.
ಮ್ಯಾರಥಾನ್ ಓಟದ ಆಶಯ ಕಾನೂನು ಅರಿವು ಕೇವಲ ವಕೀಲರು ಅಥವಾ ಕಾನೂನು ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿಲ್ಲ, ಇದು ಪ್ರತಿಯೊಬ್ಬ ನಾಗರಿಕರಿಗೂ ಒಂದು ವರ್ಚುವಲ್ ಸಾಧನವಾಗಿದೆ. ಕಾನೂನು ಅರಿವು ವ್ಯಾಪಕಗೊಳಿಸಲು ಸಾಮಾಜಿಕ ಜಾಲತಾಣಗಳ ಹಾಗೂ ಸಂಭಾವ್ಯ ಇತರ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಮುಂದೆ ಬಳಸಿಕೊಳ್ಳುವ ಯೋಚನೆ ಇದೆ.
- ಅಗ್ರತಾ ಭಾರ್ಗವ್
ಪ್ರಾಜೆಕ್ಟ್ ನ್ಯಾಯ ಸಂಸ್ಥಾಪಕಿ, ಬೆಂಗಳೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


