ಕರಾಟೆ ಸ್ಪರ್ಧೆಯಲ್ಲಿ ಬಪ್ಪಳಿಗೆ ಅಂಬಿಕಾ ಪ.ಪೂ. ಕಾಲೇಜಿಗೆ ಚಾಂಪಿಯನ್‌ಶಿಪ್, ಖೋಖೋದಲ್ಲಿ ದ್ವಿತೀಯ

Upayuktha
0

 


ಪುತ್ತೂರು: ವಿದ್ಯಾಭಾರತಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾ ಘಟಕ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಶ್ರೀದೇವಿ ವಿದ್ಯಾಕೇಂದ್ರ, ದೇವಿನಗರ–ಪುಣಚ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 


19 ವರ್ಷದೊಳಗಿನ 36 ಕೆ.ಜಿ.ಗಿಂತ ಕಡಿಮೆಯ ವಿಭಾಗದಲ್ಲಿ ರಶ್ಮಿ ಆರ್. ಪ್ರಥಮ ಸ್ಥಾನ ಹಾಗೂ 19 ವರ್ಷದೊಳಗಿನ 56 ಕೆ.ಜಿಗಿಂತ ಕಡಿಮೆಯ ವಿಭಾಗದಲ್ಲಿ ಆಶಿತಾ ಕೆ.ಆರ್. ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ, 19 ವರ್ಷ ಹಾಗೂ 54 ಕೆಜಿ ಒಳಗಿನ ಸ್ಪರ್ಧೆಯಲ್ಲಿ ರಕ್ಷಿತ್ ಎಸ್.ಎಲ್. ದ್ವಿತೀಯ ಸ್ಥಾನ ಹಾಗೂ 19 ವರ್ಷ ಮತ್ತು 60 ಕೆಜಿ ಒಳಗಿನ ವಿಭಾಗದಲ್ಲಿ ದೇವಿಕಾ ಕೆ.ಡಿ. ದ್ವಿತೀಯ ಸ್ಥಾನ ಗಳಿಸಿದ್ದಾರೆ.  ವಿದ್ಯಾರ್ಥಿಗಳ ಉತ್ತಮ ಪ್ರದರ್ಶನದ ಫಲವಾಗಿ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯವು ಚಾಂಪಿಯನ್‌ಶಿಪ್ ಅನ್ನು ತನ್ನದಾಗಿಸಿಕೊಂಡಿದೆ. 


ಖೋ-ಖೋದಲ್ಲಿ ದ್ವಿತೀಯ ಸ್ಥಾನ : ಶುಕ್ರವಾರ ನಡೆದ ಖೋಖೋ ಪಂದ್ಯಾವಳಿಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಹುಡುಗಿಯರ ಖೋ ಖೋ ತಂಡವು ದ್ವಿತೀಯ ಸ್ಥಾನ ಪಡೆದು ಸಾಧನೆ ಮೆರೆದಿದೆ. ತಂಡದಲ್ಲಿ ವಿದ್ಯಾಥಿನಿಯರಾದ ಅನುಷಿಕಾ ಎಸ್., ಶ್ರಾವಣಿ ಎಚ್.ಕೆ., ದಿಯಾ ಬಿ.ಜಿ., ಚಶ್ವಿ ಶೆಟ್ಟಿ, ಧನ್ವಂತರಿ ಎಚ್.ಎಂ., ಪೂರ್ವಿಕಾ ಎಂ., ಬಿ.ಆರ್. ಅಮೂಲ್ಯ, ತಾನ್ಯಾ ಕೆ., ಹಿತೈಷಿಣಿ ಎಸ್., ಮನ್ವಿತಾ ಎಂ. ಹಾಗೂ ಇಶಿಕಾ ಅವರು ಭಾಗವಹಿಸಿದ್ದರು. 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top