ಪುತ್ತೂರು : ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು (ಸ್ವಾಯತ್ತ), ಪುತ್ತೂರು ಮತ್ತು ಬಾಬಿ ಫಿಷರ್ಸ್ ಚೆಸ್ ಅಸೋಸಿಯೇಷನ್, ಸುಳ್ಯ, ಕಲ್ಮಡ್ಕ, ಇವರ ಸಂಯುಕ್ತ ಆಶ್ರಯದಲ್ಲಿ 3ನೇ ಜಿಲ್ಲಾ ಮಟ್ಟದ ವಿವೇಕಾನಂದ ಜೂನಿಯರ್ ಚೆಸ್ ಟೂರ್ನಮೆಂಟ್ ಆಗಸ್ಟ್ 14 ರಂದು ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸಲು ಅವಕಾಶವಿದೆ.
ಸ್ಪರ್ಧೆಯು ಸ್ವಿಸ್ ರಾಪಿಡ್ ಚೆಸ್ ಮಾದರಿಯಲ್ಲಿ 4 ವಿಭಾಗಗಳಲ್ಲಿ ನಡೆಯಲಿದೆ. 1 ರಿಂದ 3 ನೇ ತರಗತಿ (ಪ್ರಾಥಮಿಕ ವಿಭಾಗ ), 4 ರಿಂದ 6 ನೇ ತರಗತಿ(ಪ್ರಾಥಮಿಕ ವಿಭಾಗ) , 7ರಿಂದ 9ನೇ ತರಗತಿ (ಪ್ರಾಥಮಿಕ ಮತ್ತು ಹೈಸ್ಕೂಲ್ ವಿಭಾಗ) ಮತ್ತು 10ರಿಂದ 12ನೇ ತರಗತಿ (ಹೈಸ್ಕೂಲ್ ಮತ್ತು ಪದವಿ ಪೂರ್ವ ವಿಭಾಗ). ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಮತ್ತು ಟ್ರೋಫಿಯನ್ನ ನೀಡಲಾಗುವುದು. ಅಲ್ಲದೆ ನಾಲ್ಕರಿಂದ ಹತ್ತನೇ ಸ್ಥಾನ ಪಡೆದವರಿಗೆ ಟ್ರೋಫಿಯನ್ನ ನೀಡಲಾಗುವುದು. ಎಲ್ಲಾ ಸ್ಪರ್ಧಿಗಳಿಗೆ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಗುತ್ತದೆ.
ಪಂದ್ಯಾಟಕ್ಕೆ ಪ್ರವೇಶ ಶುಲ್ಕವು ಇದ್ದು ಭಾಗವಹಿಸುವ ಸ್ಪರ್ಧಿಗಳು ಆಗಸ್ಟ್ 12ರ ಮೊದಲು ತಮ್ಮ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ (9480656799 ) ಇವರನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀ ಕೃಷ್ಣ ಗಣರಾಜ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


