ಆ.17ರಂದು ಹಂಸ ಜ್ಯೋತಿ ಟ್ರಸ್ಟ್‌ ಸುವರ್ಣ ಸಂಭ್ರಮ, ‘ಹಂಸ ಸಮ್ಮಾನ್–2026’ ಪ್ರದಾನ

Upayuktha
0

‘ಹಂಸ ಜಾನಪದ ಸಂಭ್ರಮ’- ಜಾನಪದ ಗಾಯನ–ಕುಣಿತದ ವೈಭವ;



ಬೆಂಗಳೂರು: ನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ಹಂಸ ಜ್ಯೋತಿ ಟ್ರಸ್ಟ್‌ (ರಿ.) ತನ್ನ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ‘ಹಂಸ ಜಾನಪದ ಸಂಭ್ರಮ’, ಜಾನಪದ ಗಾಯನ–ಜಾನಪದ ಕುಣಿತಗಳ ವೈಭವದ ಪ್ರದರ್ಶನ ಹಾಗೂ ‘ಹಂಸ ಸಮ್ಮಾನ್–2026’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.17ರಂದು ಸೋಮವಾರ ಸಂಜೆ 4.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಆಯೋಜಿಸಿದೆ. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ನಗರ ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ ಶ್ರೀ ವಿ. ಶಂಕರ್, ಭಾ.ಆ.ಸೇ. ನೆರವೇರಿಸಲಿದ್ದಾರೆ. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ. ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೆ ಪಿ. ಕೃಷ್ಣ, ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ. ರಾಮಚಂದ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 


ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಹಿರೇಮಠ, ಶ್ರೀ ಜಾಣಗೆರೆ ವೆಂಕಟರಾಮಯ್ಯ, ಶ್ರೀ ಎಸ್. ಬಾಲರಾಜ್, ಶ್ರೀ ಎಸ್.ಟಿ. ಉದಯಕುಮಾರ್, ಶ್ರೀ ಬಿ.ಎಸ್. ಮೋಹನ್‌ಕುಮಾರ್, ಶ್ರೀ ಎನ್. ಜಗದೀಶ್, ಶ್ರೀಮತಿ ಕೆ. ಶಶಿಕಲಾ, ಶ್ರೀ ಎಲ್. ನರಸಿಂಹಮೂರ್ತಿ, ಶ್ರೀಮತಿ ಆರ್. ಗೀತಾ, ಶ್ರೀ ಶಿವಕುಮಾರ್ ಬೆಳ್ಳಿತಟ್ಟೆ, ಶ್ರೀ ಕೆ.ಸಿ. ವೇದಮೂರ್ತಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.


ಹತ್ತು ಸಾಧಕೋತ್ತಮರಿಗೆ ‘ಹಂಸ ಸಮ್ಮಾನ್–2026’

ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಕಲಾ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಹತ್ತು ಸಾಧಕರಿಗೆ ‘ಹಂಸ ಸಮ್ಮಾನ್–2026’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.


ಈ ಸಾಲಿನ ಪ್ರಶಸ್ತಿಗೆ ಶ್ರೀ ಎಸ್. ಸರವಣನ್, ಶ್ರೀ ಕಂನಾಡಿಗ ನಾರಾಯಣ, ಶ್ರೀ ವಿನೋದ್ ಬಿ. ಧಾಂಗೆ, ಶ್ರೀ ಬಿ.ಎಸ್. ವೆಂಕಟಾಚಲಪತಿ, ಶ್ರೀ ವೈ.ಬಿ.ಎಚ್. ಜಯದೇವ್, ಡಾ. ಬಿ.ಎಂ. ಪಟೇಲ್‌ಪಾಂಡು, ಶ್ರೀ ಶ್ರೀನಿವಾಸ ಗೌಡ, ಶ್ರೀ ಶ್ರೀನಿವಾಸ, ಶ್ರೀಮತಿ ಸವಿತಾ ಗಣೇಶ್‌ಪ್ರಸಾದ್ ಹಾಗೂ ಡಾ. ಮಧುರಾಣಿ ಗೌಡ ಅವರು ಆಯ್ಕೆಯಾಗಿದ್ದಾರೆ.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top