ಗುಲ್ಬರ್ಗ: ಸಾರ್ವಜನಿಕ ಸೇವಾಕ್ಷೇತ್ರದಲ್ಲಿ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ 'ವಿಕಾಸನಮ್ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್' ಅಂಗಸಂಸ್ಥೆಯಾಗಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಯು, ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ನೆರೆಯ ಜಿಲ್ಲೆಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ 1 ಲಕ್ಷಕ್ಕೂ ಹೆಚ್ಚು ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಪೂರೈಸುವ ಮೈಲಿಗಲ್ಲನ್ನು ಅಧಿಕೃತವಾಗಿ ದಾಟಿದೆ.
ಅನುಗ್ರಹ ಕಣ್ಣಿನ ಆಸ್ಪತ್ರೆ: ಒಂದು ಲಕ್ಷ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ
أغسطس 08, 2026
0
"ಉತ್ತಮ ಗುಣಮಟ್ಟದ ಮತ್ತು ಸುಲಭವಾಗಿ ಲಭ್ಯವಿರುವ ಆರೋಗ್ಯ ಮೂಲಸೌಕರ್ಯವನ್ನು ನಿರ್ಮಿಸುವ ಅಗತ್ಯವಿದೆ. 2,00,000 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ದೃಷ್ಟಿಯನ್ನು ಮರಳಿಸಿದ ನಂತರ, ವಿಸ್ತೃತ ಪಾಲುದಾರಿಕೆಗಳು, ಮುಂದುವರಿದ ತಂತ್ರಜ್ಞಾನ ಮತ್ತು ಸ್ಥಳೀಯ ದೃಷ್ಟಿ ಆರೈಕೆ ಕೇಂದ್ರಗಳ ಮೂಲಕ ಈ ಪ್ರದೇಶದ ಪ್ರತಿಯೊಂದು ಮೂಲೆಮೂಲೆಯಲ್ಲೂ ತಡೆಗಟ್ಟಬಹುದಾದ ಅಂಧತ್ವವನ್ನು ನಿರ್ಮೂಲನೆ ಮಾಡುವುದು ಈಗ ನಮ್ಮ ಧ್ಯೇಯವಾಗಿದೆ" ಎಂದು ವಿವರಿಸಿದ್ದಾರೆ.
ದೀರ್ಘಕಾಲೀನ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು, ಟ್ರಸ್ಟ್ ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಗ್ರಾಮ ಪಂಚಾಯತ್‍ಗಳು, ಎನ್‍ಜಿಒಗಳು, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರೆಡ್‍ಕ್ರಾಸ್ ಮತ್ತು ಸ್ಥಳೀಯ ಆರೋಗ್ಯ ಕಾರ್ಯಕರ್ತರು (ಆಶಾ ಮತ್ತು ಅಂಗನವಾಡಿ ಸಿಬ್ಬಂದಿ), ಬಿಎಲ್‍ಡಿಇ ವೈದ್ಯಕೀಯ ಕಾಲೇಜು, ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ಮತ್ತು ಎನ್‍ಟಿಪಿಸಿಯಂತಹ ಕಾಪೆರ್Çರೇಟ್ ಸಿಎಸ್‍ಆರ್ ಕಾರ್ಯಕ್ರಮಗಳಂತಹ ಸಾಂಸ್ಥಿಕ ಪಾಲುದಾರರೊಂದಿಗೆ ಸಹಕರಿಸುತ್ತದೆ. ಫ್ಯಾಕೋ & ರಿಫ್ರ್ಯಾಕ್ಟಿವ್, ವಿಟ್ರಿಯೊ-ರೆಟಿನಾ, ಗ್ಲುಕೋಮಾ, ಲಸಿಕ್, ಕಾರ್ನಿಯಾ, ಆಕ್ಯುಲೋಪ್ಲ್ಯಾಸ್ಟಿ ಮತ್ತು ಪೀಡಿಯಾಟ್ರಿಕ್ ನೇತ್ರಶಾಸ್ತ್ರವನ್ನು ಒಳಗೊಂಡ ವಿಶೇಷ ಚಿಕಿತ್ಸಾಲಯಗಳು, ನೇತ್ರ ಆಘಾತ, ಅರಿವಳಿಕೆ, ಕಂಪ್ಯೂಟರ್ ದೃಷ್ಟಿ ಮತ್ತು ಸಾಮಾನ್ಯ ನೇತ್ರಶಾಸ್ತ್ರವನ್ನೊಳಗೊಂಡ ತುರ್ತು ಮತ್ತು ಆಘಾತ ಘಟಕವನ್ನು ಒಳಗೊಂಡಿದ್ದು, ಆನ್-ಸೈಟ್ ಆಪ್ಟಿಕಲ್, ಫಾರ್ಮಸಿ ಮತ್ತು ಆಪೆÇ್ಟೀಮೆಟ್ರಿ/ಕಾಂಟ್ಯಾಕ್ಟ್ ಲೆನ್ಸ್ ಘಟಕದಂಥ ಮೂಲಸೌಲಭ್ಯಗಳನ್ನು ಒಳಗಂಡಿದೆ ಎಂದು ಹೇಳಿದ್ದಾರೆ.
ವಿಜಯಪುರ, ಕಲಬುರಗಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶಾಶ್ವತ ದೃಷ್ಟಿ ಆರೈಕೆ ಕೇಂದ್ರಗಳು ಮತ್ತು ಮೊಬೈಲ್ ಘಟಕಗಳ ಸ್ಥಾಪನೆ, ಸಮಗ್ರ ಶಾಲಾ ಸ್ಕ್ರೀನಿಂಗ್ ಕಾರ್ಯಕ್ರಮಗಳ ವಿಸ್ತರಣೆ ಮತ್ತು ಮೂಲ ಆಸ್ಪತ್ರೆಗಳಲ್ಲಿ ಸರಿಪಡಿಸುವ ಕಾರ್ಯವಿಧಾನಗಳನ್ನು ಒದಗಿಸುವುದು, ಪ್ರಾಥಮಿಕ ನೇತ್ರ ಚಿಕಿತ್ಸಾ ಕಾರ್ಯಕರ್ತರು, ವೈದ್ಯಕೀಯ ವೃತ್ತಿಪರರು ಮತ್ತು ಗ್ರಾಮೀಣ ಯುವಕರಿಗೆ ತರಬೇತಿ ನೀಡುವ ಜತೆಗೆ ದುರ್ಬಲ ವರ್ಗಗಳ ಅಂಗವಿಕಲ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ವಿವರಿಸಿದ್ದಾರೆ. ದುರ್ಬಲ ಜನರಿಗೆ ಕಡಿಮೆ ಅಥವಾ ಉಚಿತ ವೆಚ್ಚದಲ್ಲಿ ಸೂಪರ್-ಸ್ಪೆಷಾಲಿಟಿ ನೇತ್ರ ಸೇವೆಗಳನ್ನು ಒದಗಿಸುತ್ತದೆ ಎಂದು ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ವಿಶ್ವನಾಥ್ ಪಲ್ಲೇದ್ ಹೇಳಿದ್ದಾರೆ.
مشاركة في التطبيقات الأخرى


