ಅಂಬಿಕಾ ಸಿಬಿಎಸ್‍ಇ ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬಹುಮಾನ - ಪ್ರಾಂತ ಮಟ್ಟಕ್ಕೆ ಆಯ್ಕೆ

Upayuktha
0

 


ಪುತ್ತೂರು: ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿಗಳು ಪುಣಚ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು  ತಮ್ಮದಾಗಿಸಿಕೊಂಡಿದ್ದಾರೆ. 


17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಬೆಟ್ಟಂಪಾಡಿ ನಿವಾಸಿ ಸುರೇಶ್ ಗೌಡ ಸರಳಿಕಾನ ಮತ್ತು ವಿದ್ಯಾಶ್ರೀ ದಂಪತಿಯ ಪುತ್ರಿ 10ನೇ ತರಗತಿಯ ದೃಶಾನ ಎಸ್ ಸರಳಿಕಾನ -52 ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ವಿಟ್ಲ ನೀರಕಣಿ ನಿವಾಸಿ ಸುನಿಲ್ ರಾಜ್ ಮತ್ತು ಬಿ ಬಿ ವಿದ್ಯಾ ದಂಪತಿಯ ಪುತ್ರಿ 9ನೇ ತರಗತಿಯ ನಿಹಾರಿಕಾ ಕೆ ಎಸ್ -56 ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪುತ್ತೂರಿನ ಹೆಬ್ಬಾರಬೈಲು ನಿವಾಸಿ ವಿಶಾಲ್ ಮತ್ತು ಭೂಮಿ ದಂಪತಿಯ ಪುತ್ರಿ 8ನೇ ತರಗತಿಯ ಪ್ರಾರ್ಥನಾ - 46 ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು,ಈ ಮೂವರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯಲಿರುವ ಪ್ರಾಂತ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


14ರ ವಯೋಮಾನದ   ಬಾಲಕಿಯರ ವಿಭಾಗದಲ್ಲಿ ಪುಣಚ ನಿವಾಸಿ ವಿಜಯಕುಮಾರ್ ಮತ್ತು ಪ್ರತಿಭಾ ಕುಮಾರಿ ದಂಪತಿಯ ಪುತ್ರಿ 7ನೇ ತರಗತಿಯ ರೋಚನಾ ಎ  -38 ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,  ಮುಕ್ರಂಪಾಡಿ ನಿವಾಸಿ ಕೃಷ್ಣ ಪ್ರಶಾಂತ ಎಸ್ ಮತ್ತು ಶ್ರುತಿ ದಂಪತಿಯ ಪುತ್ರಿ 6ನೇ ತರಗತಿಯ ಅಭಿಜ್ಞಾ -30 ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪುತ್ತೂರಿನ ನಗರ ನಿವಾಸಿ ಬಿ ವಸಂತ ಗೌಡ ಮತ್ತು ಮೀನಾಕ್ಷಿ ದಂಪತಿಯ ಪುತ್ರಿ 7ನೇ ತರಗತಿಯ ಶ್ರೀಯಾ ವಿ ಎಂ -50 ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


14ರ ವಯೋಮಾನದ ಬಾಲಕರ ವಿಭಾಗದಲ್ಲಿ ಪುತ್ತೂರಿನ ಬೊಳುವಾರು ನಿವಾಸಿ ಸುಧೀರ್ ಕೆ ವೈ ಮತ್ತು ಅಶ್ವಿನಿ ಎಸ್ ದಂಪತಿಯ ಪುತ್ರ 6ನೇ ತರಗತಿಯ ಶ್ರೀಯಂ ಕೆ ಎಸ್ -50 ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top