ಪುತ್ತೂರು : ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಂಸ್ಥೆಯ ವಿದ್ಯಾರ್ಥಿಗಳು ಕಲಬುರ್ಗಿ ಜಿಲ್ಲಾ ಮೈದಾನದಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಲ ವರ್ಗದ ಬಾಲಕರ ವಿಭಾಗದಲ್ಲಿ ಪುತ್ತೂರು ಉರ್ಲಾಂಡಿ ನಿವಾಸಿ ಮಹೇಶ್ ಶೆಟ್ಟಿ ಮತ್ತು ಸುಕನ್ಯಾ ಕೆ ಶೆಟ್ಟಿ ದಂಪತಿಗಳ ಪುತ್ರ 8ನೇ ತರಗತಿಯ ವಿದ್ಯಾರ್ಥಿ ದೀಪಾಂಶ್ ಶೆಟ್ಟಿ 600ಮೀ ಓಟದಲ್ಲಿ ಪ್ರಥಮ ಸ್ಥಾನ, ವಿಟ್ಲ ನೀರಕಣಿ ಸುನಿಲ್ ರಾಜ್ ಮತ್ತು ಬಿ ಬಿ ವಿದ್ಯಾ ದಂಪತಿಗಳ ಪುತ್ರ 7ನೇ ತರಗತಿಯ ಆರಾಧ್ಯ ಗಣೇಶ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಪುತ್ತೂರು ತೆಂಕಿಲ ನಿವಾಸಿಗಳಾದ ಕೃಷ್ಣ ನಾಯ್ಕ್ ಮತ್ತು ರಮ್ಯಾ ಕೃಷ್ಣ ದಂಪತಿಗಳ ಪುತ್ರಿ 10ನೇ ತರಗತಿಯ ವಿದ್ಯಾರ್ಥಿನಿ ಆರುಷಿ ಎನ್ ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಈ ಮೂವರೂ ವಿದ್ಯಾರ್ಥಿಗಳು ದಕ್ಷಿಣ ಕ್ಷೇತ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.
ಪುತ್ತೂರು ನೆಲ್ಲಿಕಟ್ಟೆ ನಿವಾಸಿಗಳಾದ ಜನಾರ್ದನ ಗೌಡ ಮತ್ತು ಶಾರದಾ ದಂಪತಿಗಳ ಪುತ್ರಿ 10ನೇ ತರಗತಿಯ ಬಿ.ತ್ರಿಷಾ 400 ಮೀ ಅಡೆತಡೆ ಓಟ (ಹರ್ಲ್ಡಲ್ಸ್ )ದಲ್ಲಿ ತೃತೀಯ, 110ಮೀ ಅಡೆ ತಡೆ ಓಟದಲ್ಲಿ ತೃತೀಯ ಹಾಗೂ 4x400 ಮೀ ರಿಲೇ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪುತ್ತೂರು ನಗರ ನಿವಾಸಿಗಳಾದ ಉತ್ತಮ ಕೆ ಮತ್ತು ಶ್ರುತಿ ಕೆ ದಂಪತಿಗಳ ಪುತ್ರಿ 10ನೇ ತರಗತಿಯ ಶ್ರದ್ಧಾ ಕೆ ಕಟ್ವಾಟ್ 4x400ಮೀ ರಿಲೇಯಲ್ಲಿ ತೃತೀಯ, ನವೀನ್ ಕುಮಾರ್ ಮತ್ತು ವಿಜಯ ಎನ್ ದಂಪತಿಗಳ ಪುತ್ರಿ 10ನೇ ತರಗತಿಯ ಆದಿತಿ ಎನ್ ಶೆಟ್ಟಿ 4x400 ಮೀ ರಿಲೇಯಲ್ಲಿ ತೃತೀಯ ಹಾಗೂ ವಿಟ್ಲ ನೀರಕಣಿ ನಿವಾಸಿ ಸುನಿಲ್ ರಾಜ್ ಮತ್ತು ಬಿ ಬಿ ವಿದ್ಯಾ ದಂಪತಿಗಳ ಪುತ್ರಿ 9ನೇ ತರಗತಿಯ ನಿಹಾರಿಕಾ ಕೆ ಎಸ್ 4x400 ರಿಲೇಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಹಾಗೂ ಸುಚಿತ್ರ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಿರುತ್ತಾರೆ.


