ಪುತ್ತೂರು: ಇಲ್ಲಿನ ಅಕ್ಷಯ
ಪದವಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ ಪರಿಷತ್ ಚುನಾವಣೆಯು
ಇತ್ತೀಚೆಗೆ ನಡೆಯಿತು. ಇದರ ಅಂಗವಾಗಿ ವಿಜೇತ ಪ್ರತಿನಿಧಿಗಳ
ಪದಗ್ರಹಣ ಸಮಾರಂಭವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಗೋ
ಲಕ್ಷ್ಮಿ ಎಂಟರ್‌ಪ್ರೈಸಸ್‌ನ ಮಾಲಕ ಹಾಗೂ ರಾಷ್ಟ್ರೀಯ ಜೆಸಿಐ (JCI) ತರಬೇತುದಾರ ಶ್ರೀಕೃಷ್ಣ ಮೋಹನ್ ಪಿ. ಎಸ್. ದೀಪ
ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಚುನಾವಣೆಯಲ್ಲಿ ವಿಜೇತರಾದ
ಹಾಗೂ ಸ್ಪರ್ಧಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿದ್ಯಾರ್ಥಿ ನಾಯಕತ್ವದ
ಜವಾಬ್ದಾರಿ, ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ತಿಳಿಸಿದರು. ಪ್ರತಿಯೊಬ್ಬ
ವಿದ್ಯಾರ್ಥಿಯೂ ತನ್ನ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಅರಿತು ಶಿಸ್ತು, ಮಾನವೀಯತೆ,
ಕರುಣೆ ಹಾಗೂ ನಾಗರಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು
ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ನಾಯಕತ್ವವು ಕೇವಲ ಹುದ್ದೆಯಲ್ಲ, ಅದು ಜವಾಬ್ದಾರಿಯಾಗಿದೆ ಎಂದು
ತಿಳಿಸಿದರು. ದಾರಿ ತಿಳಿದಿರುವವನು ಮಾತ್ರವಲ್ಲ, ಇತರರಿಗೆ ದಾರಿ ತೋರಿಸುವವನೇ ನಿಜವಾದ ನಾಯಕ
ಎಂದು ಹೇಳಿದ ಅವರು, ಅಕ್ಷಯ ಕಾಲೇಜಿನ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಘಟಕಗಳು ತಮ್ಮ
ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಮುಂದೆಯೂ ಇದೇ ರೀತಿಯ ಸಂಘಟಿತ
ಕಾರ್ಯಚಟುವಟಿಕೆಗಳು ಮುಂದುವರಿಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವಿದ್ಯಾರ್ಥಿ ಜೀವನದಲ್ಲಿ
ಆಗುವ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿತ್ವದೊಂದಿಗೆ ಮುನ್ನಡೆಯುವಂತೆ
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಅಕ್ಷಯ
ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಎ., ಶೈಕ್ಷಣಿಕ ಮಾರ್ಗದರ್ಶಕ ಅಭಿಲಾಷ್ ಕ್ಷತ್ರಿಯ, ವಿದ್ಯಾರ್ಥಿ ನಾಯಕ ಸೂರ್ಯ (ತೃತೀಯ ಬಿ.ಕಾಂ.) ಹಾಗೂ ಕಾರ್ಯದರ್ಶಿ ದೇವಿಕಾ (ತೃತೀಯ ಫ್ಯಾಷನ್ ಡಿಸೈನ್) ಉಪಸ್ಥಿತರಿದ್ದರು.
ಕಾಲೇಜಿನ
ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪದಪ್ರದಾನ
ನೆರವೇರಿಸಿದರು.
ಗಣಕ ವಿಭಾಗದ ಉಪನ್ಯಾಸಕಿ ಸುಪ್ರಭ ಗಣ್ಯರನ್ನು ಪರಿಚಯಿಸಿ, ಕನ್ನಡ ಭಾಷಾ ಉಪನ್ಯಾಸಕಿ ರಶ್ಮಿತಾ ಎಸ್. ವಿಜೇತ
ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ರಶ್ಮಿ
ಸ್ವಾಗತಿಸಿ, ಕಲಾ ವಿಭಾಗದ ಮುಖ್ಯಸ್ಥ ಅಶೋಕ್ ವಂದಿಸಿದರು. ಕನ್ನಡ ಭಾಷಾ
ಉಪನ್ಯಾಸಕ ಅಮೃತ್ ರಾಜ್ ವೈ. ಆರ್. ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


