ಪುತ್ತೂರು: ಇಲ್ಲಿನ ಅಕ್ಷಯ ಕಾಲೇಜಿನ ಆತಿಥ್ಯ ವಿಜ್ಞಾನ ವಿಭಾಗದ 'ಕಾಯು'
(KAYU) ಅಸೋಸಿಯೇಷನ್ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC) ಜಂಟಿ ಆಶ್ರಯದಲ್ಲಿ "Dress the Dish – Culinary Arts" ಎಂಬ ವಿಶೇಷ
ಓರಿಯಂಟೇಶನ್ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆತಿಥ್ಯ ವಿಜ್ಞಾನ ವಿಭಾಗದ ಮುಖ್ಯಸ್ಥ ಅವಿನಾಶ್ ಕೆ. ಆರ್. ವಹಿಸಿದ್ದರು. ಐಕ್ಯೂಎಸಿ (IQAC) ಸಂಯೋಜಕಿ ರಶ್ಮಿ ಗೌರವ ಅತಿಥಿಯಾಗಿ ಭಾಗವಹಿಸಿ, "ವಿದ್ಯಾರ್ಥಿಗಳು ನವೀನ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಆತಿಥ್ಯ (Hospitality) ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು" ಎಂದು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ
ಮುಖ್ಯ ಆಕರ್ಷಣೆಯಾಗಿ 'Gaia Café' ಹಾಗೂ 'Alupa' ಸಂಸ್ಥೆಗಳ ಸಂಸ್ಥಾಪಕ ಶೆಫ್
ಪ್ರಜ್ವಲ್ ಆಲ್ಬರ್ಟ್ ಡಿ'ಸೋಜಾ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತಮ್ಮ ವೃತ್ತಿ ಜೀವನದ ಅನುಭವಗಳನ್ನು
ಹಂಚಿಕೊಂಡ ಅವರು, "ಇಂದಿನ ಆತಿಥ್ಯ
ಉದ್ಯಮದಲ್ಲಿ ಆಹಾರದ ರುಚಿಯಷ್ಟೇ ಅದರ ಪ್ರಸ್ತುತಿ (Presentation) ಕೂಡ ಅತ್ಯಂತ ಮಹತ್ವದ್ದಾಗಿದೆ" ಎಂದು ಹೇಳಿದರು.
ಆಹಾರದ ಅಲಂಕಾರ (Garnishing), ವೃತ್ತಿಪರ ಆಹಾರ ಪ್ಲೇಟಿಂಗ್
ತಂತ್ರಗಳು (Food Plating
Techniques), ಬಣ್ಣಗಳ ಸಮತೋಲನ, ವಿನ್ಯಾಸ ಹಾಗೂ ಸೃಜನಶೀಲತೆಯಿಂದ ಆಹಾರವನ್ನು ಆಕರ್ಷಕವಾಗಿ
ಪ್ರಸ್ತುತಪಡಿಸುವ ವಿವಿಧ ವಿಧಾನಗಳನ್ನು ಅವರು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಇದರ ಜೊತೆಗೆ ಆಹಾರದ ಗುಣಮಟ್ಟ
ಕಾಪಾಡಲು ಅಗತ್ಯವಿರುವ ತಾಪಮಾನ ನಿಯಂತ್ರಣ, ಆಹಾರ ಸುರಕ್ಷತಾ ಕ್ರಮಗಳು ಹಾಗೂ ಆಧುನಿಕ ಅಡುಗೆ ವಿಧಾನಗಳಾದ
ಸೂಸ್-ವೀಡ್ (Sous-vide), ಮೊಲಿಕ್ಯುಲರ್
ಗ್ಯಾಸ್ಟ್ರೋನಮಿ (Molecular
Gastronomy), ವ್ಯಾಕ್ಯೂಮ್ ಫ್ರೈಯಿಂಗ್ (Vacuum Frying) ಮತ್ತು ಎಐ-ಆಧಾರಿತ ಅಡುಗೆ
ತಂತ್ರಗಳ (AI-assisted Precision
Cooking) ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವೃತ್ತಿಪರ ಶೆಫ್‌ಗಳು
ಬಳಸುವ ಪ್ಲೇಟಿಂಗ್ ಉಪಕರಣಗಳ ಬಳಕೆ ಹಾಗೂ ಆಹಾರದ ದೃಶ್ಯ ಸೌಂದರ್ಯ, ರುಚಿ, ಸುವಾಸನೆ ಹೆಚ್ಚಿಸುವ ಕೌಶಲ್ಯಗಳನ್ನು ವಿವರಿಸಲಾಯಿತು.
ಚಂದನ್ ಅವರ ಪ್ರಾರ್ಥಿಸಿ, ಆತಿಥ್ಯ ವಿಜ್ಞಾನ ವಿಭಾಗದ ಉಪನ್ಯಾಸಕಿ ಶ್ರಥಾ ನಿರೂಪಿಸಿದರು. ಕಾಯು ಅಸೋಸಿಯೇಷನ್ ವಿದ್ಯಾರ್ಥಿ ಕಾರ್ಯದರ್ಶಿ ಗಗನ್ ವಂದಿಸಿ, ಉಪಸ್ಥಿತರಿದ್ದ ಗಣ್ಯರು, ಸಂಘಟಕರು ಹಾಗೂ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)
