ನಾವು ನಮಗಾಗಿಯಲ್ಲ...ನಾವು ಮೊಬೈಲ್ ಗಾಗಿ

Upayuktha
0


ಮೊಬೈಲ್” ಕಣ್ಣಿಗೇ ಚಂದ, ಕಿವಿಗೆ ಇಂಪು, ಮನಸ್ಸಿಗೆ ನೆಮ್ಮದಿ ನೀಡೋ ಸಾಧನ ಎಂದು ಹಣೆಪಟ್ಟಿ ಹಾಕುವುದೊಂದು ಬಾಕಿಯಾಗಿದೆ ಈ ಪ್ರಪಂಚ. ಟಿ.ವಿಯೇ ಮೂಲೆಗೆ ಸರಿಯುತ್ತಿರೋ ದಿನವೇನು ಕಮ್ಮಿಯಲ್ಲಿ ಇಲ್ಲ. ಮೊಬೈಲ್ ಒಳ್ಳೆಯ ದಾರಿಯನ್ನು ಸಹ ತೋರಿಸುತ್ತದೆ, ಹಾಗೆಯೇ ನಮ್ಮನ್ನು ದಾರಿ ಸಹ ತಪ್ಪಿಸುತ್ತದೆ. ನಾವು ಹೇಳಿದಾಗೆ ಮನುಷ್ಯ ಕೇಳದಿದ್ದರೂ ಮೊಬೈಲ್ ನಮ್ಮ ಮಾತು ಕೇಳುತ್ತದೆ, ಇಲ್ಲದಿದ್ದರೆ ನಾವು ಕೇಳುವ ಹಾಗೆ ಮಾಡುವ ವಿಧಾನವು ಇದೇ.ಮೊಬೈಲ್ ಇಲ್ಲದೆ ದಿನವನ್ನು ಕಲ್ಪಿಸಿಕೊಳ್ಳುವುದೇ ಈಗಿನ ಕಾಲದಲ್ಲಿ ಕಷ್ಟವಾಗಿ ಹೋಗಿದೆ.


ಕೀಪ್ಯಾಡ್ ದಿನವಾಗಿದ್ದಾಗ ಈಗಿನ ಹಾಗೆ ವಾಟ್ಸಪ್, ಫೇಸ್ಬುಕ್ ಇರಲ್ಲಿಲ. ಕೀಪ್ಯಾಡ್ ಗು ಗತಿ ಇಲ್ಲದಾಗ ಯಸ್ ಟಿ ಡಿ ಬೂತ್ನಲ್ಲಿ ಹೀಗಿ ಕರೆ ಮಾಡಿ ಬರುವ ಕಲಾವಿತ್ತು. ಈಗ ಒಂದು ಸೆಕೆಂಡ್ನಲ್ಲಿ ನಮಗೆ ಬೇಕಾದವರಿಗೆ ಕರೆ ಮಾಡಿ ಮಾತನಾಡಬಹುದು.ಮೊದಲು ಜನರು ಸಂಪರ್ಕಕ್ಕೆ ಪತ್ರ ಅಥವಾ ಲ್ಯಾಂಡ್‌ಲೈನ್ ಬಳಸುತ್ತಿದ್ದರು. ಆದರೆ ಈಗ ಮೊಬೈಲ್ ಫೋನ್ ಮೂಲಕ ಯಾರನ್ನಾದರೂ ಕ್ಷಣದಲ್ಲೇ ಸಂಪರ್ಕಿಸಬಹುದು. ಇದರಿಂದ ಜನರ ಜೀವನ ಬಹಳ ಸುಲಭವಾಗಿದೆ.


ಮೊದಲು ಅಜ್ಜಿ ಇರುವಾಗ ಟಿವಿ ಇರಲ್ಲಿಲ ಆಗ ವಠಾರದಲ್ಲಿ ಒಬ್ಬರ ಮನೇಲಿ ಟಿವಿ ಇರುತಿತ್ತು. ಸಂಜೆ ಆಗುವಾಗ ಬ್ಲಾಕ್ ಆಂಡ್ ವೈಟ್ ಸಿನಿಮಾ ನೋಡಲು ಎಲ್ಲಿಲದ ಅಸೆ. ಕೆಲಸ ಬೇಗ ಬೇಗ ಮುಗಿಸಿ ಸಿನಿಮಾ ನೋಡಲು ಅಮ್ಮ ಅಜ್ಜಿ ಪಕ್ಕದ ಮನೇಲಿ ತಯಾರು ಆಗುತಿದ್ದರು.ಈಗಿನ ಹಾಗೆ ರಂಗು ರಂಗದ ಸೀರಿಯಲ್ ಬರುತ್ತಿರಲ್ಲಿಲ, ಡಿ ಡಿ ಚಂದನ ದಲ್ಲಿ ಎಲ್ಲ ರೀತಿಯ ಮಾಹಿತಿ ಪಕ್ಕನೆ ನಮಗೆ ಸಿಗುತಿತ್ತು.


ಈಗ 24 ಗಂಟೆ ನಮಗೆ ಟೈಮ್ ಪಾಸ್ ಮಾಡಲು ಎಲ್ಲ ರೀತಿಯ ಕಾರ್ಯಕ್ರಮಗಳು ಇವೆ. ಬೆಳಿಗ್ಗೆ ಟಿವಿ ಒನ್ ಆದರೆ ರಾತ್ರಿ ಮಲಗುವ ತನಕ ಟಿವಿ ಓಡುತ್ತಾನೆ ಇರುತ್ತದೆ. ಶನಿವಾರ ಆದಿತ್ಯವಾರ ಜನರ ಆಸಕ್ತಿಯನ್ನು ಇನ್ನು ಹೆಚ್ಚು ಮಾಡಲು ರಿಯಾಲಿಟಿ ಶೋಗಳು ಲಭ್ಯ. ಟಿವಿ ಅಲ್ಲಿ ನೋಡಲು ಸಾಧ್ಯವಾಗದಿದ್ದರೆ, ಮೊಬೈಲ್ನಲ್ಲಿ ಸಹ ಲಭ್ಯ ಇದೇ. ಎಲ್ಲಿ ಹೋದರು ಸಹ ಮೊಬೈಲ್ ನಮ್ಮ ಕೈ ಬಿಡಲು ಸಿದ್ದವಿಲ್ಲ.


ಈಗಿನ ಕಾಲ ಹೇಗೆ ಆಗಿದೆ ಅಂದರೆ,ಚಿಕ್ಕ ಮಕ್ಕಳು ಸಹ ಮೊಬೈಲ್ ಪ್ರೇಮಿಗಳಾಗಿದ್ದಾರೆ.ಮೊದಲು ಮಕ್ಕಳನ್ನು ಊಟ ಮಾಡಿಸಲು ಅಮ್ಮ ಚಂದ ಮಾಮನನ್ನು ತೋರುಸುತಿದ್ದರು, ಆದರೆ ಈಗ ಮೊಬೈಲ್ ಯನ್ನು ತೋರಿಸಿ ಊಟ ಮಾಡಿಸುವ ಪರಿಸ್ಥಿತಿ ಬಂದಿದೆ. ಒಂದು ತುತ್ತು ತಿನ್ನಬೇಕಾದರೂ ಮೊಬೈಲ್ ಬೇಕೇ ಬೇಕು.ಈಗಿನ ತಂತ್ರಜ್ಞಾನ ವಂತೂ ಕೇಳುವುದೇ ಬೇಡ, ಮನುಷ್ಯನ ಕೆಲಸವನ್ನು ಇನ್ನು ಸುಲಭ ಮಾಡುತ್ತಿದೆ.


ಏಐ,  ಚಾಟ್ಜಿಪ್ಟ್ ಯಂತಹ ತಂತ್ರಜ್ಞಾನ ಇಡೀ ವ್ಯವಸ್ಥೆಯನ್ನೇ  ಬದಲು  ಮಾಡಿದೆ. ವಾರ್ತೆ ಬೇಕಾದರೂ ಸಹ ಮೊಬೈಲ್ ನಲ್ಲಿ ಕ್ಷಣ ಮಾತ್ರದಲ್ಲಿ ಸಿಗುತ್ತದೆ. ಅಪ್ಪ ಅಮ್ಮ ನನ್ನು ಬಿಟ್ಟು ಬೇರೆಲ್ಲ ಸೌಲಭ್ಯ ನಮಗೆ ಮೊಬೈಲ್ ನಲ್ಲೆ ಇದೇ. ನಮ್ಮ ಜೀವನ ಈಗ ಮೊಬೈಲ್ ಲೆ ಆಡಳಿತ ಮಾಡುವ ಯುಗವು ಬರುವ ರೀತಿ ಇದೇ. ನಮ್ಮ ಮೊಬೈಲ್ ಬಂದ್ ಆಗುವುದೇ ರಾತ್ರಿ ಮಲಗಲು ಹೋಗುವಾಗ.ಹಾಗಾಗಿ ಮೊಬೈಲ್ ನಮ್ಮ ಜೀವನಕ್ಕೆ ಎಷ್ಟು ಮುಖ್ಯವೋ ಅಷ್ಟೇ ಹಾನಿಯಾಗುವ ಸಾಧ್ಯತೆ ಸಹ ಇದೇ. ಮಿತಿ ಇದ್ದರೆ ಎಲ್ಲವೂ ಸಹ ಉತ್ತಮ ದಾರಿಯಲ್ಲೇ ಇರುತ್ತದೆ.


- ಅಂಜಲಿ ಮುಂಡಾಜೆ
ಎಸ್ ಡಿ ಯಂ ಕಾಲೇಜು ಉಜಿರೆ 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top