"ಅಂದುಕೊಂಡದ್ದು ಏನೋ... ಆಗಿದ್ದು ಇನ್ನೇನೋ".!

Upayuktha
0

                                               AI ಚಿತ್ರ

ನ್ನ ಜೀವನದಲ್ಲಿ ಆದದ್ದೇ ಬರೀ ಇದೆ, ಏನೂ ಅಂತ ಕೇಳ್ತೀರಾ, ನಾನು ಅಂದುಕೊಂಡಿದ್ದೆ ಬೇರೆ ಅದು ಆಗಿ ಹೋಗೋದೇ ಬೇರೆ. ನನ್ನಾ ದಾರಿ, ನನ್ನಾ ಯೋಚನೆ ಬೇರೆಯೇ ಇತ್ತು, ಆದು ನಾನು ಅಂದು ಕೊಂಡಿದ್ದೆ ಆಗಬೇಕು ಎಂದು ಯೋಚನೆ ಮಾಡುತ್ತಿದ್ದೆ ಆದರೆ... ನಾನು ಅಂದುಕೊಂಡಿದ ಕೆಲಸ ಯಾವುದು ಆಗ್ತಾನೆ ಇರ್ಲಿಲ್ಲ.



ಇದು ನನ್ನಾ ಒಬ್ಬಳ ಸಮಸ್ಯೆ ಅಂತು ಅಲ್ಲ. ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಯಾವುದಾದರು ಒಂದು ಕೆಲಸ ಈ ರೀತಿ ಹಾಗೆಯೇ ಇರುತ್ತದೆ. ಇದು ಒಳ್ಳೇದು, ಅಥವಾ ಕೆಟ್ಟದ್ದೋ ಅಂತ ಗೊತ್ತಿಲ ಆದರೆ... "ಏನೂ ಮಾಡಲು ಸಾಧ್ಯವಿಲ್ಲದಿದ್ದಾಗ, "ಆಗುದೆಲ್ಲ ಒಳ್ಳೇದಕ್ಕೆ " ಅಂತ ಬಂದ ದಾರಿಯಲ್ಲಿ ಮುನ್ನುಗುತ್ತಾ ಸಾಗುತ್ತಾ ಇರಬೇಕು. ಇಲ್ಲದಿದ್ರೆ ನಾನು ಅಂದುಕೊಂಡದ್ದು ಏನೋ .... ಆಗಿದ್ದು ಇನ್ನೇನೋ ಎಂಬ ಯೋಚನೆಯಲ್ಲೇ ಅರ್ಧ ಜೀವನ ಮುಗಿದು ಹೋಗಿ ಇರುತ್ತದೆ.


ಕೆಲವೊಂದು ಸಲ ಅಚಾನಕವಾಗಿ ಆಗುವುದು ಕೂಡ ಕೆಲವೊಂದು ಕಡೆ ನಮ್ಮ ಜೀವನದ ದಿಕ್ಕನ್ನೇ ಬದಲಿಸುವ ತರ ನಡೆಯುತ್ತದೆ, ಎಲ್ಲವೂ ಒಳ್ಳೇದೇ ಆಗುತ್ತದೆ. ಹಾಗಾಗಿ ಆಗುವುದೆಲ್ಲವೂ ಕೆಟ್ಟದಲ್ಲ, ಬಂದ ಪರಿಸ್ಥಿತಿಯನ್ನು ನಾನು ಅನುಸರಿಸಿಕೊಂಡು ಹೋದರೆ ಎಲ್ಲವೂ ಒಳ್ಳೇದೆ. ಎಷ್ಟೋ ಸಲ ಅಂದುಕೊಳ್ಳದ ಕೆಲಸ ಆದಾಗ ದೇವರ ಆಶೀರ್ವಾದ ಎಂದು ಮುಂದುವರಿಯ ಬೇಕೇ ಹೊರತು ಪಶ್ಚಾತಾಪ ಪಟ್ಟು ಪ್ರಯೋಜನೆ ಇಲ್ಲ. ಹಾಗಾಗಿ "ಆಗುವುದೆಲ್ಲ ಒಳ್ಳೇದಕ್ಕೆ." ಮನದಲ್ಲಿಯೇ ಎಂದುಕೊಳ್ಳುತ್ತ ಜೀವನ ಸಾಗಿಸೋಣ.


    - ಸಹನಾ 
 ಪತ್ರಿಕೋದ್ಯಮ ವಿದ್ಯಾರ್ಥಿನಿ 
ಎಸ್. ಡಿ ಎಮ್. ಉಜಿರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top