ಶ್ರೀ ಕ್ಷೇತ್ರ ಶಂಕರಪುರ :ಶ್ರೀ ಸಾಯಿ ಈಶ್ವರ್ ಟಿವಿ ಪುನರ್ ಲೋಕಾರ್ಪಣೆ ಮತ್ತು ತ್ರಿಶಕ್ತಿ ಅಭಿಯಾನ

Upayuktha
0



ಕಟಪಾಡಿ:  ಶ್ರೀ ಕ್ಷೇತ್ರ ಶಂಕರ್ ಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ  ಆಟಿದ ಒಣಸ್ ಗುರೂಜಿನೊಟ್ಟೊಗು ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ಸಾಯಿ ಈಶ್ವರ್ ಟಿವಿ ಮಾಧ್ಯಮದ ಪುನರ್ ಲೋಕಾರ್ಪಣೆ ಮತ್ತು ತ್ರಿಶಕ್ತಿ ಅಭಿಯಾನ ಉದ್ಘಾಟನೆ ನಡೆಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸಾಯಿ ಈಶ್ವರ್ ಗುರೂಜಿ ಎಲ್ಲಕ್ಕಿಂತ ಮಿಗಿಲಾದದ್ದು ದೇಶಾಭಿಮಾನ ದೇಶವಿದ್ದರೆ ಮಾತ್ರ ನಾವೆಲ್ಲ ಹೀಗಾಗಿ ದೇಶದ ಹಿತಕ್ಕೆ ವಿರೋಧವಾಗಿ ನಡೆತುಕೊಳ್ಳುವುದು ಅಪರಾಧ. ಆಟಿಯ ತಿಂಗಳು ನಮ್ಮ ಪೂರ್ವಜರಿಗೆ ಬಹಳ ಕಷ್ಟದ ಸಮಯವಾಗಿತ್ತು ಈ ಸಂದರ್ಭದಲ್ಲಿ ಅವರೆಲ್ಲರೂ ಕೂಡ ಸೊಪ್ಪು ತರಕಾರಿ ಗೆಡ್ಡೆ ಗೆಣಸುಗಳನ್ನು ತಿಂದು ಜೀವನ ಸಾಗಿಸುತ್ತಿದ್ದರು ಆದರೆ ಇಂದು ಈ ಪರಿಸ್ಥಿತಿ ಇಲ್ಲ ನಮ್ಮ ಹಿರಿಯರು ನೀಡಿದ ಅಪೂರ್ವವಾದ ಜೀವನ ಪದ್ಧತಿಯನ್ನು ನಾವೆಲ್ಲರೂ ರೂಡಿಸಿಕೊಳ್ಳಬೇಕು ಎಂದು ಹೇಳಿದರು.


ಮಾಜಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ದೇಶ ಅಭಿಮಾನ ಎಲ್ಲಕ್ಕಿಂತ ಮಿಗಿಲಾದದ್ದು, ಹಿಂದೂ ಸಂಸ್ಕೃತಿಗೆ ತೊಂದರೆಯಾದಾಗ ನಾವೆಲ್ಲರೂ ಎದ್ದು ನಿಲ್ಲಬೇಕಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಗೋರಕ್ಷಾ ಅಭಿಯಾನದ ಜಿಲ್ಲಾ ಸಂಚಾಲಕ ಗಜೇಂದ್ರ ಎಸ್ ಬಿ ಬೈಂದೂರು, ನಾಗರಾಜ್, ವಿಜಯ್ ಕುಂದರ್, ರಾಮ ಟಿ ಪೂಜಾರಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ  ಮುಂತಾದವರು ಉಪಸ್ಥಿತರಿದ್ದರು ಮಠದ ಟ್ರಸ್ಟಿ ಗೀತಾಂಜಲಿ ಸುವರ್ಣ ವಂದಿಸಿದರು.

ರಾಘವೇಂದ್ರ ಪ್ರಭು ಕವಾ೯ಲು  ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top