ಮಂಗಳೂರು: ಕಲಾಭಿ ಥಿಯೇಟರ್ ವತಿಯಿಂದ ಬೋಂದೆಲ್‌ನ ಕಲಾಗ್ರಾಮದಲ್ಲಿ ಆಯೋಜಿಸಲಾದ ಒಂದು ದಿನದ ‘ನವರಸ’ ಮಕ್ಕಳ ರಂಗಭೂಮಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. 6 ರಿಂದ 18 ವರ್ಷದೊಳಗಿನ 22 ಮಕ್ಕಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಖ್ಯಾತ ರಂಗ ನಿರ್ದೇಶಕ ಹಾಗೂ ರಂಗಕರ್ಮಿ ಭುವನ್ ಮಣಿಪಾಲ್ ಕಾರ್ಯಾಗಾರವನ್ನು ನಡೆಸಿಕೊಟ್ಟರು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ರಂಗೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಅವರ ಅನುಭವದ ಆಧಾರದ ಮೇಲೆ ನವರಸಗಳ ಮೂಲತತ್ವ, ಭಾವನೆಗಳ ಅಭಿವ್ಯಕ್ತಿ, ರಂಗಭೂಮಿಯ ಮೂಲಭೂತ ಅಂಶಗಳು ಹಾಗೂ ದೈನಂದಿನ ಬದುಕಿನಲ್ಲಿ ಭಾವನೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ವಿವಿಧ ರಂಗಾಭ್ಯಾಸಗಳು, ಆಟಗಳು ಹಾಗೂ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಪರಿಚಯಿಸಿದರು.
ಕಾರ್ಯಾಗಾರದ ಸಮನ್ವಯವನ್ನು ಕಲಾಭಿಯ ಸಂಸ್ಥಾಪಕ ಉಜ್ವಲ್ ಯು.ವಿ. ವಹಿಸಿಕೊಂಡಿದ್ದು, ಶಿಕ್ಷಣದ ಜೊತೆಗೆ ಕಲೆಯ ಮಹತ್ವ, ಕಲೆ ಹವ್ಯಾಸವಾಗಿಯೂ ವೃತ್ತಿಯಾಗಿಯೂ ಬೆಳೆಯುವ ಸಾಧ್ಯತೆಗಳು ಹಾಗೂ ಮಕ್ಕಳ ಸೃಜನಶೀಲತೆಯನ್ನು ಬೆಳೆಸುವಲ್ಲಿ ಪೋಷಕರ ಪಾತ್ರದ ಕುರಿತು ಸಂವಾದ ನಡೆಸಿದರು.
ಕಾರ್ಯಾಗಾರದ ಸಮಾರೋಪವಾಗಿ ಕಲಾಭಿ ತಂಡವು ‘ಕಲಾಭಿ ಥಿಯೇಟರ್ ಎಕ್ಸ್‌ಪ್ರೆಸ್ – Grannies' Folk Tales in Kanglish’ ಎಂಬ ವಿಶೇಷ ರಂಗಪ್ರದರ್ಶನವನ್ನು ನೀಡಿತು. ಈ ಪ್ರದರ್ಶನಕ್ಕೆ ಮಕ್ಕಳು ಹಾಗೂ ಪೋಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಯಿತು.
ಈ ನಾಟಕವು ‘ಬೆಂಗಳೂರು ಪೊಯಟ್ರಿ ಫೆಸ್ಟಿವಲ್ – ಚಿಲ್ಡ್ರನ್ಸ್ ಫೆಸ್ಟ್ 2026’ರ 10ನೇ ಆವೃತ್ತಿಗೆ ಅಧಿಕೃತವಾಗಿ ಆಯ್ಕೆಯಾಗಿದ್ದು, ಆಗಸ್ಟ್ 1, ಶನಿವಾರ ಸಂಜೆ 4.30ಕ್ಕೆ ಬೆಂಗಳೂರಿನ ಇಂದಿರಾನಗರ ಸಂಗೀತ ಸಭಾದಲ್ಲಿ ಪ್ರದರ್ಶನಗೊಳ್ಳಲಿದೆ.
ಇದೇ ಸಂದರ್ಭದಲ್ಲಿ, ಕಲೆ ಮತ್ತು ಶಿಕ್ಷಣವನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಪ್ರತಿ ತಿಂಗಳು ಮಕ್ಕಳಿಗಾಗಿ ಇಂತಹ ಸೃಜನಾತ್ಮಕ ಕಾರ್ಯಾಗಾರಗಳನ್ನು ಆಯೋಜಿಸುವುದಾಗಿ ಕಲಾಭಿ ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

