ಹಿಂದೂ ಜನಜಾಗೃತಿ ಸಮಿತಿ: ಗುರುಪೂರ್ಣಿಮೆ ಮಹೋತ್ಸವ ಸಂಪನ್ನ

Upayuktha
0


ಹಿಂದೂಗಳು ‘ಸ್ವಬೋಧ’ ಮತ್ತು ‘ಶತ್ರುಬೋಧ’ವನ್ನು ಜಾಗೃತವಾಗಿಟ್ಟುಕೊಂಡು ದೇಶ ಹಾಗೂ ಧರ್ಮದ ರಕ್ಷಣೆಗಾಗಿ ಸಂಘಟಿತರಾಗಿ ! ಶ್ರೀ. ಮೋಹನ್ ಗೌಡ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ


ಬೆಂಗಳೂರು : ಇಂದು ದೇಶ ಹಾಗೂ ಧರ್ಮದ ಮೇಲಾಗುತ್ತಿರುವ ಆಘಾತಗಳು ಕೇವಲ ಗಡಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅವು ನೇರವಾಗಿ ನಮ್ಮ ಮನೆಬಾಗಿಲಿಗೆ ಬಂದು ತಲುಪಿವೆ. ಭಯೋತ್ಪಾದನೆ ಮತ್ತು ನುಸುಳುವಿಕೆಯೊಂದಿಗೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ವಕ್ಫ್ ಬೋರ್ಡ್‌ ಮತ್ತು ಇತ್ತೀಚೆಗೆ ಬೆಳಕಿಗೆ ಬಂದಿರುವ ‘ಕಾರ್ಪೊರೇಟ್ ಜಿಹಾದ್’ ಮುಂತಾದ ವಿವಿಧ ಆಘಾತಗಳು ಹಾಗೂ ಷಡ್ಯಂತ್ರಗಳ ಮಾಧ್ಯಮದಿಂದ ಹಿಂದೂಗಳನ್ನು ಯೋಜನಾಬದ್ಧವಾಗಿ ಗುರಿಯಾಗಿಸಲಾಗುತ್ತಿದೆ. ಇದರ ಮೂಲಕ ದೇಶದ ಭೂ-ರಾಜಕೀಯ ನಕ್ಷೆ ಮತ್ತು ಜನಸಂಖ್ಯಾ ಸ್ಪೋಟದ ಗಣಿತವನ್ನು ಬದಲಾಯಿಸುವ ಭೀಕರ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ. ಹಿಂದೂ ಸಮಾಜವು ತನ್ನ ‘ಸ್ವಬೋಧ’ (ಸಾಮರ್ಥ್ಯ ಮತ್ತು ಧರ್ಮಜ್ಞಾನ) ಹಾಗೂ ‘ಶತ್ರುಬೋಧ’ (ಶತ್ರುವಿನ ಗುಪ್ತ ರಣನೀತಿ)ವನ್ನು ಜಾಗೃತಗೊಳಿಸದ ಹೊರತು, ಈ ಎಲ್ಲಾ ದಿಕ್ಕುಗಳಿಂದ ಆಗುತ್ತಿರುವ ಆಘಾತಗಳನ್ನು ಪ್ರತಿರೋಧಿಸುವುದು ಅಸಾಧ್ಯ. ಆದ್ದರಿಂದ ಹಿಂದೂಗಳು ಇನ್ನು ಮುಂದೆ ಕೇವಲ ಮೂಕಪ್ರೇಕ್ಷಕರಾಗಿರದೆ, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಸಕ್ರಿಯವಾಗಿ ಮುಂದಾಗಬೇಕು,’’ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಅವರು ಸ್ಪಷ್ಟ ಮತ್ತು ಪ್ರಖರ ವಿಚಾರಗಳನ್ನು ವ್ಯಕ್ತಪಡಿಸಿದರು.



ಅವರು ಬೆಂಗಳೂರಿನಲ್ಲಿನ ರಾಜಹಂಸ ಕಲ್ಯಾಣ ಮಂಟಪ ರಾಜಾಜಿನಗರದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆಯಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘರ್ಷ ಮತ್ತು ಸಾಧನೆಯ ದಿಶೆ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. 


ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ 29 ರಂದು ದೇಶಾದ್ಯಂತ 64 ಸ್ಥಳಗಳಲ್ಲಿ 'ಗುರುಪೂರ್ಣಿಮಾ ಮಹೋತ್ಸವ'ಗಳನ್ನು ಆಯೋಜನೆ ಮಾಡಲಾಯಿತು. 


ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಆರ್ಯ ವೈಶ್ಯ ಕಮ್ಯುನಿಟಿಯ ಅಧ್ಯಕ್ಷರಾದ ಶ್ರೀ. ರವಿ ಕುಮಾರ್, ಶ್ರೀರಾಮ ಸೇನೆಯ ಶ್ರೀ. ಸುಂದ್ರೇಶ್ ನರ್ಗಲ್, ಸಂಗೀತ ಮೊಬೈಲ್ಸ್ ನ ಸಂಸ್ಥಾಪಕರಾದ ಶ್ರೀ. ಸುಭಾಶ್, ವಕೀಲರಾದ ಸೌ. ಜ್ಯೋತಿ ಸೇರಿದಂತೆ ಬೆಂಗಳೂರಿನ ಬಸವನ ಗುಡಿಯ ಶ್ರೀ ಭವಾನಿ ಕಲ್ಯಾಣ ಮಂಟಪ, ರಾಜಾಜಿನಗರದ ರಾಜಹಂಸ ಕಲ್ಯಾಣ ಮಂಟಪ , ಹಾಗೂ ಯಲಹಂಕದ ಆರ್ . ವಿ.ಕಲ್ಯಾಣ ಮಂಟಪದಲ್ಲಿ ನಡೆದ ಗುರು ಪೂರ್ಣಿಮಾ ಮಹೋತ್ಸವದಲ್ಲಿ 500ಕ್ಕೂ ಅಧಿಕ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು. 


ಈ ಸಂಧರ್ಭದಲ್ಲಿ '' ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ " ಎನ್ನುವ ಈ - ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.


ಮುಂಬರುವ ವಿಶ್ವಯುದ್ಧ ಮತ್ತು ತುರ್ತು ಪರಿಸ್ಥಿತಿಯ ಆತಂಕವನ್ನು ಗಮನದಲ್ಲಿಟ್ಟುಕೊಂಡು, ಸಮಿತಿಯ ವತಿಯಿಂದ ಹಿಂದೂಗಳಿಗೆ ಪ್ರಥಮ ಚಿಕಿತ್ಸೆ (ಫಸ್ಟ್ ಏಡ್), ಅಗ್ನಿಶಾಮಕ ಮತ್ತು ಸ್ವರಕ್ಷಣಾ ತರಬೇತಿಯನ್ನು ಪಡೆದುಕೊಳ್ಳುವಂತೆ ಆವಾಹನೆ ಮಾಡಲಾಯಿತು.


ಈ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ (ಗುರುಪೂಜೆ), ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ವಾಚನ, ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸತ್ಕಾರ, ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯರ ಮಾರ್ಗದರ್ಶನ, ಸ್ವರಕ್ಷಣೆಯ ಸುಲಭ ಪದ್ಧತಿಗಳ ಪ್ರತ್ಯಕ್ಷ ಪ್ರದರ್ಶನ , ಹಾಗೂ ‘ಸಮಿತಿ’ಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕಾರ್ಯವನ್ನಾಧರಿಸಿದ ಕಿರುಚಿತ್ರ ಪ್ರದರ್ಶಿಸಲಾಯಿತು. 


ಈ ಮಹೋತ್ಸವದಲ್ಲಿ ವಿವಿಧ ವಿಷಯಗಳ ಮೇಲಿನ ಗ್ರಂಥ-ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮ ವಿಷಯದ ಫಲಕ-ಪ್ರದರ್ಶನ (ಫ್ಲೆಕ್ಸ್ ಬೋರ್ಡ್) ಕೂಡ ಏರ್ಪಡಿಸಲಾಗಿತ್ತು. ಅನೇಕ ಜನರು ಇದರ ಲಾಭ ಪಡೆದುಕೊಂಡರು.



ಶ್ರೀ. ಮೋಹನ್ ಗೌಡ,
ರಾಜ್ಯ ವಕ್ತಾರರು ಹಿಂದೂ ಜನಜಾಗೃತಿ ಸಮಿತಿ
(ಸಂಪರ್ಕ : 7204082609


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top