ಜಿ-ನೆಕ್ಸ್ಟ್ ಮತ್ತು ಸಣ್ಣ ನಗರಗಳ ಯುವಕರಿಂದ ಆಹಾರ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆ

Upayuktha
0

ಆಹಾರ ಹಾಗೂ ಪೋಷಕಾಂಶ ವಿಭಾಗದಲ್ಲಿ 50% ಬೆಳವಣಿಗೆ ಕಂಡ ಫ್ಲಿಪ್‌ಕಾರ್ಟ್





ಮಂಗಳೂರು, ಜುಲೈ 20: ದೇಶದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ವೇದಿಕೆಯಲ್ಲಿ ಭಾರತೀಯರ ಆಹಾರ ಸೇವನೆಯ ಶೈಲಿಯಲ್ಲಿ ಭಾರಿ ಪರಿವರ್ತನೆ ಕಂಡುಬಂದಿದ್ದು, ಕಂಪನಿಯ ಆಹಾರ ಮತ್ತು ಪೋಷಕಾಂಶ ವಿಭಾಗವು ವಾರ್ಷಿಕ ಶೇ.50ರಷ್ಟು ಭರ್ಜರಿ ಬೆಳವಣಿಗೆ ದಾಖಲಿಸಿದೆ. ವಿಶೇಷವೆಂದರೆ, ಮಹಾನಗರಗಳಿಗಿಂತಲೂ ಹೆಚ್ಚಾಗಿ ಧಾರವಾಡ, ಹುಬ್ಬಳ್ಳಿ, ಉಜ್ಜಯಿನಿ, ಧೂಳಿಯಾ, ಇಂಫಾಲ ಹಾಗೂ ಲಹರ್‌ಪುರದಂತಹ ದೇಶದ ಎರಡನೇ ಮತ್ತು ಮೂರನೇ ಹಂತದ ನಗರಗಳ ಗ್ರಾಹಕರು ಹಾಗೂ ಜೆನ್ ಜೀ ಯುವಪೀಳಿಗೆ ಈ ಆನ್‌ ಲೈನ್ ಆಹಾರ ಮಾರುಕಟ್ಟೆಯ ಪ್ರಮುಖ ಚಾಲಕರಾಗಿ ಹೊರಹೊಮ್ಮಿದ್ದಾರೆ.


ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿದ ಫ್ಲಿಪ್‌ಕಾರ್ಟ್ ಫುಡ್ ಫೆಸ್ಟ್ 2026 ಆವೃತ್ತಿಯಲ್ಲಿ ಈ ನೂತನ ಗ್ರಾಹಕ ಟ್ರೆಂಡ್‌ ಗಳು ಅನಾವರಣಗೊಂಡಿವೆ. ಕ್ವಿಕ್-ಕಾಮರ್ಸ್ ಸೇವೆಯಾದ ಫ್ಲಿಪ್‌ಕಾರ್ಟ್ ಮಿನಿಟ್ಸ್ ಈ ವಿಭಾಗದ ಒಟ್ಟು ಬೇಡಿಕೆಯಲ್ಲಿ ಶೇ.25ರಷ್ಟು ಪಾಲು ಹೊಂದುವ ಮೂಲಕ ಸಣ್ಣ ನಗರಗಳಲ್ಲೂ ಇನ್‌ಸ್ಟಂಟ್ ಡೆಲಿವರಿ ಜನಪ್ರಿಯವಾಗುತ್ತಿರುವುದನ್ನು ಸಾಬೀತುಪಡಿಸಿದೆ.


ಹೆಲ್ತ್-ಫಸ್ಟ್ ಲೈಫ್‌ಸ್ಟೈಲ್: ಜಿ-ನೆಕ್ಸ್ಟ್ ಮೈಂಡ್‌ಸೆಟ್

ವರದಿಯ ಪ್ರಕಾರ, ಜೆನ್ ಝಿ ಯುವಜನತೆ ವರ್ಷದಿಂದ ವರ್ಷಕ್ಕೆ ಶೇ.60ರಷ್ಟು ಬೆಳವಣಿಗೆ ದಾಖಲಿಸಿದ್ದು, ಪ್ರೋಟೀನ್ ಓಟ್ಸ್, ಹೈ ಪ್ರೋಟೀನ್ ಪೀನಟ್ ಬಟರ್, ಗೌರ್ಮೆಟ್ ಚಾಕೊಲೇಟ್‌ ಗಳು ಹಾಗೂ ಪ್ರೋಟೀನ್ ಮ್ಯುಎಸ್ಲಿಗೆ ಭಾರಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಬೆಂಗಳೂರು ಮತ್ತು ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಕೊರಿಯನ್ ಶೈಲಿಯ ನೂಡಲ್ಸ್ ಹಾಗೂ ಚಿಪ್ಸ್‌ ಗಳು ವೇಗವಾಗಿ ಮಾರಾಟವಾಗುತ್ತಿವೆ.


ಆಹಾರದಲ್ಲಿ ಪುರುಷರು ಡ್ರೈ ಫ್ರೂಟ್ಸ್, ಚಾಕೊಲೇಟ್ ಮತ್ತು ಜಾಮ್‌ಗಳಿಗೆ ಆದ್ಯತೆ ನೀಡುತ್ತಿದ್ದರೆ, ಮಹಿಳೆಯರು ಮೌಲ್ಯವರ್ಧಿತ ಚಹಾ, ಕಾಫಿಗಳನ್ನು ತಮ್ಮ ವಿಶ್-ಲಿಸ್ಟ್‌ ಗೆ ಸೇರಿಸುತ್ತಿದ್ದಾರೆ. ಇನ್ನು ಭಾರತದ ಸಣ್ಣ ನಗರಗಳಲ್ಲಿ ಗಾಣದ ಎಣ್ಣೆ, ಆಲೀವ್ ಆಯಿಲ್, ಪ್ರೀಮಿಯಂ ಖರ್ಜೂರ ಹಾಗೂ ನೈಸರ್ಗಿಕ ತುಪ್ಪದ ಹುಡುಕಾಟ ಶೇ.80ರಷ್ಟು ಹೆಚ್ಚಾಗಿದೆ.


ಈ ಕುರಿತು ಫ್ಲಿಪ್‌ಕಾರ್ಟ್ ಉಪಾಧ್ಯಕ್ಷರಾದ (ಕನ್ಸ್ಯೂಮೇಬಲ್ಸ್ ವಿಭಾಗ), ನಿಶಾಂತ್ ದಲಾಲ್ ಅವರು, "ಆಹಾರ ಎನ್ನುವುದು ಈಗ ಕೇವಲ ಹಸಿವು ನೀಗಿಸಿಕೊಳ್ಳುವ ಮಾಧ್ಯಮವಾಗಿ ಉಳಿದಿಲ್ಲ, ಬದಲಿಗೆ ಅದು ಆರೋಗ್ಯ, ಅಸ್ಮಿತೆ ಮತ್ತು ಹೊಸತನದ ಭಾಗವಾಗಿದೆ. ಮಹಾನಗರಗಳು ಮಾತ್ರವಲ್ಲದೆ ದೇಶದ ಮೂಲೆ ಮೂಲೆಯ ಕುಟುಂಬಗಳಿಗೂ ಉತ್ತಮ, ಆರೋಗ್ಯಕರ ಆಹಾರ ಉತ್ಪನ್ನಗಳನ್ನು ತಲುಪಿಸುವಲ್ಲಿ ಡಿಜಿಟಲ್ ಕಾಮರ್ಸ್ ಯಶಸ್ವಿಯಾಗಿದೆ" ಎಂದರು.


ಆಹಾರ ಕ್ರಾಂತಿಗೆ ಬೆಂಬಲವಾಗಿ ಫುಡ್ ಫೆಸ್ಟ್ 3.0:

ದೇಶದ ಬದಲಾಗುತ್ತಿರುವ ಆಹಾರ ಶೈಲಿಯನ್ನು ಸಂಭ್ರಮಿಸಲು ಆಯೋಜಿಸಲಾಗಿದ್ದ ಫುಡ್ ಫೆಸ್ಟ್ 3.0 ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು, 1000ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಕ್ರಿಯೇಟರ್‌ಗಳು ಹಾಗೂ ಖ್ಯಾತ ಶೆಫ್ ಗಳಾದ ಕುನಾಲ್ ಕಪೂರ್, ರಣವೀರ್ ಬ್ರಾರ್, ಫರಾ ಖಾನ್, ಸುನಿಲ್ ಗ್ರೋವರ್ ಭಾಗವಹಿಸಿದ್ದರು.


ಈ ಉತ್ಸವದಲ್ಲಿ ಹ್ಯಾಪಿಲೊ, ಅನ್ವೇಷಣ್, ಐಟಿಸಿ ರೈಟ್ ಶಿಫ್ಟ್, ಯೋಗಾಬಾರ್, ನೆಸ್ಲೆ, ಡಾಬರ್, ಮಾಂಡೆಲೇಜ್‌ ನಂತಹ ಬ್ರ್ಯಾಂಡ್‌ ಗಳು 10ಕ್ಕೂ ಹೆಚ್ಚು ನೂತನ ಹೆಲ್ತ್ ಪ್ರೊಡಕ್ಟ್‌ ಗಳನ್ನು ಬಿಡುಗಡೆ ಮಾಡಿದವು. ಕೇವಲ ಬೆಂಗಳೂರು-ಮುಂಬೈಗೆ ಸೀಮಿತವಾಗಿದ್ದ ಆಧುನಿಕ ಪೋಷಕಾಂಶಯುಕ್ತ ಆಹಾರ ಉತ್ಪನ್ನಗಳು ಇಂದು ದೇಶದ ಶೇ.65ರಷ್ಟು ಸಣ್ಣ ನಗರಗಳ ಮನೆಗಳನ್ನು ತಲುಪುತ್ತಿರುವುದು ಇ-ಕಾಮರ್ಸ್ ಕ್ಷೇತ್ರದಲ್ಲಾಗಿರುವ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top