ವಾತಾವರಣ ನಮ್ಮ ಕಲ್ಪನೆಗೂ ಮೀರಿದಷ್ಟು ಏರುಪೇರುಗಳಾಗುತ್ತಿದೆ. ಮೊದಲು ಹವಾಮಾನ ಕಾಲಕ್ಕೆ ತಕ್ಕಂತೆ ಬದಲಾಗುತ್ತಿತ್ತು. ಸರಿಯಾದ ಸಮಯಕ್ಕೆ ಮಳೆ, ಬೆಳೆ ಬಿಸಿಲು, ಚಳಿ ಎಲ್ಲ ಆಗುತ್ತಿತ್ತು. ಹವಾಮಾನ ಬದಲಾವಣೆಗಳು ಪ್ರಕೃತಿಯ ಸಹಜ ಭಾಗ, ಇತ್ತೀಚಿನ ವರ್ಷಗಳಲ್ಲಿ ಮಾನವನ ಚಟುವಟಿಕೆಗಳಿಂದ ಈ ಬದಲಾವಣೆಗಳು ಹೆಚ್ಚು ತೀವ್ರವಾಗಿವೆ. ವರ್ಷದಿಂದ ವರ್ಷಕೆ ವಾತಾವರಣ ತನ್ನ ವಿರೋಧ ಲಕ್ಷಣವನ್ನೇ ತೋರುತ್ತಿದೆ. ಈಗಿನ ವಾತಾವರಣವಂತೂ ಯಾವಾಗ ಮಳೆ ಯಾವಾಗ ಸೆಕೆ ಎಂದು ತಿಳಿಯುವುದೇ ಅಸಾಧ್ಯ ಸಂಗತಿ.
ಈ ವರ್ಷವಂತೂ ಹೇಳಲಾಗದಷ್ಟು ಶೇಕೆ. ಕೂತಲಿ ನಿಂತಲ್ಲಿ ಫ್ಯಾನ್ ಗಾಳಿ ಬೇಕೇ ಬೇಕು. ನಮ್ಮ ದೇಹ ತಂಪು ಮಾಡಲು ನೀರಾದರು ಕುಡಿಯೋಣವೆಂದರೆ ಆ ಸಮಯಕ್ಕೆ ನೀರು ಸಹ ಹದ ಬಿಸಿಯಲ್ಲೇ ಇರುತ್ತದೆ. ಫ್ರಿಡ್ಜ್ ನೀರು ಕುಡಿದರೆ ಒಮ್ಮೆ ತಂಪಾಗುತ್ತದೆ ವಿನಃ ಬಾಯಾರಿಕೆ ಇನ್ನಷ್ಟು ಹೆಚ್ಚೇ ಆಗುವುದು. ಅದರಲ್ಲೂ ಫ್ರಿಡ್ಜ್ ನೀರು ಒಮ್ಮೆ ಯಾರಾದರೂ ಕುಡಿದು ತಂಪು ಮಾಡುವ ಎಂದರೆ ಅಪ್ಪ “ಫ್ರಿಡ್ಜ್ ನೀರು ಒಳ್ಳೇದಲ್ಲ, ಅರೋಗ್ಯ ಹಾಳೇ ಮಾಡೋದು” ಎಂದು ಹೇಳುತ್ತಾರೆ.
ಅದರ ಬದಲು ಎಳ್ಳು ಜ್ಯೂಸು ಮಾಡಿ ಕುಡಿ, ನಮ್ಮ ದೇಹಕೆ ಒಳ್ಳೇದು ಎಂದು ಅಪ್ಪನ ಕಿವಿ ಮಾತು.
ಮನುಷ್ಯರು ಹೇಗೆಂದರೆ, ಚಳಿಗಾಲ ಬಂದರೆ, ಅಯ್ಯೋ ಚಳಿ ಹೊದ್ದು ಮಲಗುವ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಮಳೆಗಾಲ ಬಂದರೆ ಅಯ್ಯೋ ಮಳೆ ಕರೆಂಟ್ ಇರೋದಿಲ್ಲ, ಬಟ್ಟೆ ಒಣಗಲ್ಲ ಅನ್ನೋ ಮಾತು ಇನ್ನೊಂದು ಕಡೆ ಬೇಸಿಗೆ ಅಯ್ಯೋ ಉರಿ ಬಿಸಿಲು ಸೆಕೆ ಎಂದು ಬೊಬ್ಬೆ. ಬಹುಶಃ ಈ ಮಾತನ್ನು ಕೇಳಿಯೇ ಇರಬೇಕು ವಾತಾವರಣ ತನ್ನ ಇಷ್ಟದಂತೆ ನಡೆಯುತ್ತಿರುವುದು.
ಕೃಷಿಕರಿಗೆ ಈಗ ನೀರಿನ ಸಮಸ್ಯೆ ಶುರುವಾಗಿದೆ.ಹೊಳೆಯಲ್ಲಿ ಸಹ ನೀರು ಕಮ್ಮಿಯಾಗುತ್ತಾ ಬರುತ್ತಿದೆ, ಹಾಗೂ ಅಡಿಕೆ ಮರಗಳಿಗೂ ಹಳದಿ ಎಲೆ ಚುಕ್ಕಿ ರೋಗ ಸಹ ಬಂದು ಬಿಟ್ಟಿದೆ. ಪ್ರಕೃತಿ ಹಿಂದೇಟು ಕೊಡುತ್ತಿರುವುದೋ ಎಂದು ತಿಳಿಯುವುದು ಅಸಾಧ್ಯ. ಬೇಸಿಗೆ ಕಾಲದಲ್ಲಿ ಎಲ್ಲ ತರಹದ ಜ್ಯೂಸುಗಳು ಮನೆಯಲ್ಲಿ ತಯಾರು ಇರುತ್ತದೆ. ತಪ್ಪಾದ ಮಜ್ಜಿಗೆ ನೀರು, ಖರ್ಬುಜ ಹಣ್ಣಿನ ಜ್ಯೂಸು ಹೀಗೆ ಹಲವರು ದೇಹಕ್ಕೆ ತಂಪು ನೀಡುವ ಪಾನೀಯಗಳು ಇರುತ್ತದೆ. ಚಳಿಗಾಲದಲ್ಲಿ ಬಿಸಿ ಬಿಸಿ ಕಾಫಿಯ ಜೊತೆ ಸಂಡಿಗೆ ಹಪ್ಪಳಗಳಂತ ತಿಂಡಿಗಳು ಸಿದ್ದವಿರುತ್ತದೆ.
ಆದರೆ ವಾತಾವರಣ ಅದರ ಇಷ್ಟದಂತೆ ನಡೆಯುತ್ತಿರುವುದು ಅಂತೂ ಸತ್ಯ. ನಾವು ಮೊದಲಿಗೆ ಪರಿಸರವನ್ನು ಕಾಪಾಡಬೇಕು ಮರಗಳನ್ನು ನೆಟ್ಟು, ಮಾಲಿನ್ಯವನ್ನು ಕಡಿಮೆ ಮಾಡಬೇಕು. ಆಗ ಮಾತ್ರ ಮತ್ತೆ ಹವಾಮಾನವನ್ನು ಸಮತೋಲನಕ್ಕೆ ತರುವುದಕ್ಕೆ ಸಾಧ್ಯ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

