ಸುರತ್ಕಲ್: ಇಲ್ಲಿನ ಎಂ. ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್ ಮತ್ತು ಎಂ. ಸುಮತಿ ಫೌಂಡೇಷನ್ ಕುಳಾಯಿ ಇವರ ವತಿಯಿಂದ ಮಂಗಳೂರಿನ ಮಂಗಳಾ ಸೇವಾ ಸಮಿತಿ ಟ್ರಸ್ಟಿನ ಕುತ್ತಾರ್ ಪದವು ಬಾಲ ಸಂರಕ್ಷಣಾ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮವೊಂದು ಜರುಗಿತು. ಟ್ರಸ್ಟಿನ ಅಧ್ಯಕ್ಷ ಎಂ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರದಲ್ಲಿದ್ದ ಭಾರತದ ಪೂರ್ವ, ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳ ಮಕ್ಕಳಿಗೆ ಪುಸ್ತಕ, ಬರವಣಿಗೆ ಸಾಮಗ್ರಿ ಮತ್ತು ಕೊಡೆಗಳನ್ನು (ಛತ್ರಿ) ವಿತರಿಸಲಾಯಿತು ಹಾಗೂ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀನಿವಾಸ ಕುಳಾಯಿ ಅವರು, "ಜೀವನವು ಸವಾಲುಗಳ ಆಗರವಾಗಿದೆ. ಯಾವುದೇ ಕಷ್ಟದ ಸಂದರ್ಭ ಎದುರಾದರೂ ಧೃತಿಗೆಡಬಾರದು. ಋಣಾತ್ಮಕ ಚಿಂತನೆಗಳನ್ನು ಬದಿಗಿಟ್ಟು, ಧನಾತ್ಮಕವಾಗಿ ಯೋಚಿಸಿ ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ" ಎಂದು ಮಕ್ಕಳಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬಾಲ ಸಂರಕ್ಷಣಾ ಕೇಂದ್ರದ ಮಕ್ಕಳು ಸಾಮೂಹಿಕ ಭೋಜನದ ಮೊದಲು ಮತ್ತು ನಂತರ ಭಕ್ತಿಯಿಂದ ದೇವತಾ ಶ್ಲೋಕಗಳನ್ನು ಪಠಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಆನಂದ ರಾವ್, ಬೆಂಗಳೂರಿನ ಡಾ. ಅಂಬರೀಷ್, ಶುಭಕರ, ಪ್ರವೀಣ್ ಎಂ., ಅವನೀಶ್ ಎಂ. ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರದ ವ್ಯವಸ್ಥಾಪಕರಾದ ಅನಂತಕೃಷ್ಣ ಅವರು ವಂದಿಸಿದರು. ಪವನ್ ಮೈರ್ಪಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


