ಎಡನೀರು ಮಠದಲ್ಲಿ ನಾಳೆಯಿಂದ ಚಾತುರ್ಮಾಸ್ಯ

Upayuktha
0

ಸೆ. 6 ಕ್ಕೆ ಬಂಟ್ವಾಳದಿಂದ ಹೊರೆಕಾಣಿಕೆ ಸಮರ್ಪಣೆ 


ಬಂಟ್ವಾಳ: ಎಡನೀರು ಸಂಸ್ಥಾನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ 6 ನೆಯ ಚಾತುರ್ಮಾಸ್ಯ  ಜು. 29 ರಿಂದ ಸೆ. 26 ರವರೆಗೆ ಎಡನೀರು ಶ್ರೀ ಮಠದಲ್ಲಿ ಜರಗಲಿದೆ. ಆ ಪ್ರಯುಕ್ತ ಬಂಟ್ವಾಳ ತಾಲೂಕಿನಿಂದ ಹೊರೆಕಾಣಿಕೆ ಸೇವೆಯನ್ನು ಸೆ. 6 ರಂದು ಸಮರ್ಪಿಸಲಾಗುವುದು ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಟಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಹೇಳಿದರು. 


ಅವರು ಬಿ.ಸಿ.ರೋಡು ಕನ್ನಡ ಭವನದಲ್ಲಿ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ದೇವಪ್ಪ ಕುಲಾಲ್ ಎಲ್ಲರ ಸಹಕಾರವನ್ನು ಯಾಚಿಸಿದರು. ಸಭೆಯಲ್ಲಿ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಪ್ರೊ. ಸುಬ್ರಾಯ ಮಡಿವಾಳ, ಕಾರ್ಯಾಧ್ಯಕ್ಷ ರಾಮ್‌ಗಣೇಶ್ ಕೈಕುಂಜೆ , ಕಾರ್ಯದರ್ಶಿ ರಾಜಾರಾಮ ಐತಾಳ್ ಕಂದೂರು, ಕೋಶಾಧಿಕಾರಿ ಅನಾರು ಕೃಷ್ಣ ಶರ್ಮ , ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಆಗಸ್ಟ್. 9 ರಂದು ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ನಡೆಯಲಿರುವ ಹಿರಿಯರ ಚಿಂತನಾ ಸಮಾವೇಶದ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ರಾಕೋಡಿ ಈಶ್ವರ ಭಟ್ , ಬೆತ್ತಸರವು ನಾರಾಯಣ ಭಟ್, ಪ್ರೊ.ರಾಜಮಣಿ ರಾಮಕುಂಜ ,ಜಗದೀಶ ಹೊಳ್ಳ ಮೊದಲಾದವರು ಚರ್ಚಿಸಿ ಸಲಹೆ ಸೂಚನೆಗಳನಿತ್ತರು. ಜಯಾನಂದ ಪೆರಾಜೆ ನಿರೂಪಿಸಿ ವಂದಿಸಿದರು.


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top