ವಿಶ್ವ ಜನಸಂಖ್ಯಾ ದಿನ

Upayuktha
0



ನಸಂಖ್ಯೆ ಎನ್ನುವುದು ಜಾಗತಿಕ ಪರಿಕಲ್ಪನೆ ಆಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಜನಸಂಖ್ಯೆ ದಿನವನ್ನು ಜುಲೈ 11ರಂದು ಆಚರಿಸಲಾಗುತ್ತಿದೆ.


ಹೆಚ್ಚುತ್ತಿರುವ ಜನಸಂಖ್ಯೆ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ನಿರುದ್ಯೋಗ, ಬಡತನ, ಅನಕ್ಷರತೆ ಮುಂತಾದ ಸಮಸ್ಯೆಗಳು ಹೆಚ್ಚುತ್ತಿರುವ ಜನಸಂಖ್ಯೆಯ ಮೂಲದ ಪರಿಣಾಮ ಆಗಿವೆ. ನಿಸರ್ಗವು ಯಾವಾಗಲೂ ಸಮತೋಲನ ಕಾಯ್ದು ಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಮನುಷ್ಯನು ನಿಸರ್ಗಕ್ಕೆ ವಿಧೇಯನಾಗಿ ಬದುಕುವುದನ್ನು ಬಿಟ್ಟು ಅದಕ್ಕೆ ಯಜಮಾನನಾಗಿ ಆಳಲು ಹೊರಟಿದ್ದಾನೆ.


ಹೆಚ್ಚುತ್ತಿರುವ ಜನಸಂಖ್ಯೆ ಪರಿಸರವನ್ನು ಹಾಳು ಮಾಡುತ್ತದೆ. ಪ್ರವಾಹ, ಬರಗಾಲ, ಭೂ ಕುಸಿತ, ಮಾಲಿನ್ಯ ಮನುಷ್ಯನ ಅತಿಯಾದ ಹಸ್ತ ಕ್ಷೇಪಕ್ಕೆ ಉದಾಹರಣೆ ಆಗಿವೆ. ಪ್ರಾಣಿಗಳು ಹೇಗೆ ಮಿತಿಯಾದ ಸಂಖ್ಯೆಯಲ್ಲಿ ನಿಸರ್ಗಕ್ಕೆ ಹೊಂದಿಕೊಂಡು ಬದುಕುತ್ತವೆಯೋ ಹಾಗೆ ನಾವು ಕೂಡ ಸಣ್ಣ ಕುಟುಂಬ ತತ್ವ ಅರಿತು ಕೊಂಡರೆ ನಮ್ಮ ಪರಿಸ್ಥಿತಿ ಮತ್ತು ದೇಶದ ಪರಿಸ್ಥಿತಿ ಕೂಡ ಚೆನ್ನಾಗಿರುತ್ತದೆ.


ಸುಮಾರು 135 ಕೋಟಿ ಜನಸಂಖ್ಯೆ ಇರುವ ನಾವು ಸಮತೋಲನ ಸಾಧಿಸುವಲ್ಲಿ ಹೆಣಗಾಡುತ್ತಿದ್ದೇವೆ. ಈ ನಿಸರ್ಗಕ್ಕೆ ನಾವಿಬ್ಬರೇ ಅಲ್ಲ. ಉಳಿದ ಜೀವಗಳಿಗೂ ಕೂಡ ಹಕ್ಕಿದೆ ಎಂದು ಅರಿತು ಕೊಂಡರೆ ನಮ್ಮ ಮತ್ತು ದೇಶಕ್ಕೂ ಒಳ್ಳೆಯದೇ.

ಅಲ್ಲವೇ?, ಏನಂತೀರಾ?


-ಗಾಯತ್ರಿ ಸಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top