ವಿದ್ಯಾಭಾರತಿ ಚದುರಂಗ ಪಂದ್ಯಾಟ: ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಬಹುಮಾನ

Upayuktha
0

 


ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ  ಸಂಸ್ಥೆಯ ವಿದ್ಯಾರ್ಥಿಗಳು ಕಡಬದ ಸರಸ್ವತಿ ವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುತ್ತಾರೆ. 


ಬಾಲಕರ ವಿಭಾಗದ ಕಿಶೋರ ವರ್ಗದಲ್ಲಿ ೧೦ನೇ ತರಗತಿಯ ಸಾತ್ವಿಕ್ ಜಿ. ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ ವಿಭಾಗದ ಬಾಲ ವರ್ಗದಲ್ಲಿ  ೭ನೇ ತರಗತಿಯ ಸಂಹಿತ್ ಜೋಸ್ಸಿ ಲೋಬೋ ಪ್ರಥಮ ಸ್ಥಾನ ಮತ್ತು ೭ನೇ ತರಗತಿಯ ತ್ರಿನಯ್ ರೈ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದ ಬಾಲ ವರ್ಗದಲ್ಲಿ ೮ನೇ ತರಗತಿಯ ಶಾಂಭವಿ ರಂಜನ್ ೨ನೇ ಸ್ಥಾನವನ್ನು,  ಸಾನ್ವಿ ಜಿ. ರವರು ೪ನೇ  ಸ್ಥಾನ ಹಾಗೂ ಕೆ.ಎಂ.ಶಮಿತಾ ಭಟ್  ೫ನೇ ಸ್ಥಾನವನ್ನು  ಪಡೆದಿದ್ದಾರೆ. ಬಾಲಕರ ವಿಭಾಗದ ಬಾಲವರ್ಗದ ತಂಡ ಪಂದ್ಯಾಟದಲ್ಲಿ ೭ನೇ ತರಗತಿಯ ವಿದ್ಯಾರ್ಥಿಗಳಾದ ಸಂಹಿತ್ ಜೋಸ್ಸಿ ಲೋಬೋ, ಮಯೂರ್ ಎಸ್.ಮಯ್ಯ, ತ್ರಿನಯ್ ರೈ, ರತುಲ್ ಅದೈತ್ ಮತ್ತು ೬ನೇ ತರಗತಿಯ ಹಿಮನೀಶ್ ಗೌಡ ಕೆ. ಮತ್ತು  ಬಾಲಕಿಯರ ವಿಭಾಗದ ಬಾಲವರ್ಗದಲ್ಲಿ ೮ನೇ ತರಗತಿಯ ಶಾಂಭವಿ ರಂಜನ್, ಸಾನ್ವಿ.ಜಿ, ನೈನಿಕ.ಎ.ಆರ್,  ಕೆ.ಎಂ ಶಮಿತಾ ಭಟ್ ಹಾಗೂ ಅನನ್ಯ.ಬಿ  ಇವರ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದು  ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top