ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಾಳೆ ವಿಶೇಷ ‘ಸ್ವಚ್ಛತಾ ಶ್ರಮದಾನ’: ಕೇಂದ್ರ ಸಚಿವ ಸುರೇಶ್ ಗೋಪಿ ಭಾಗಿ

Upayuktha
0


ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಹಾಗೂ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಜುಲೈ ತಿಂಗಳ ವಿಶೇಷ ‘ಸ್ವಚ್ಛತಾ ಶ್ರಮದಾನ’ ಕಾರ್ಯಕ್ರಮವನ್ನು ನಾಳೆ (ಜುಲೈ 6, ಸೋಮವಾರ) ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಪ್ರಸಿದ್ಧ ಕದ್ರಿ ಪಾರ್ಕ್ ಪರಿಸರದಲ್ಲಿ ಬೆಳಗ್ಗೆ 8:30 ರಿಂದ ಈ ಶ್ರಮದಾನ ಅಭಿಯಾನವು ಆರಂಭಗೊಳ್ಳಲಿದೆ.


ಎಂಆರ್‌ಪಿಎಲ್ (MRPL) ಸಂಸ್ಥೆಯ 'ಸ್ವಚ್ಛತಾ ಪಕ್ವಾಡ' ಆಚರಣೆಯ ಹಿನ್ನೆಲೆಯಲ್ಲಿ ಈ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಭಾರತ ಸರ್ಕಾರದ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಖಾತೆಯ ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ಸುರೇಶ್ ಗೋಪಿ ಅವರು ಈ ಶ್ರಮದಾನದಲ್ಲಿ ಪ್ರಮುಖವಾಗಿ ಭಾಗವಹಿಸಿ, ಸ್ವತಃ ಕೈಜೋಡಿಸಲಿದ್ದಾರೆ.


‘ಸ್ವಚ್ಛ ಮಂಗಳೂರು, ಹಸಿರು ಮಂಗಳೂರು’ ಎಂಬ ಉದಾತ್ತ ಧೇಯದೊಂದಿಗೆ, ಸ್ವಚ್ಛ ಹಾಗೂ ಸುಸ್ಥಿರ ನಾಳೆಗಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಒಎನ್‌ಜಿಸಿ (ONGC) ಮತ್ತು ಎಂಆರ್‌ಪಿಎಲ್ (MRPL) ಸಂಸ್ಥೆಗಳು ಈ ಅಭಿಯಾನಕ್ಕೆ ಸಹಯೋಗ ನೀಡಿದ್ದು, 'ಹರಿತ್ ಭವಿಷ್ಯ ಕೆ ಲಿಯೇ ಎಂಆರ್‌ಪಿಎಲ್ ಕೆ ಸಾಥ್' ಎಂಬ ಸಂಕಲ್ಪದೊಂದಿಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ.


"ಸ್ವಚ್ಛತೆ ಎನ್ನುವುದು ಕೇವಲ ನಮ್ಮ ಕರ್ತವ್ಯವಲ್ಲ, ಅದು ನಾವು ದೇಶಕ್ಕೆ ಸಲ್ಲಿಸುವ ಭಕ್ತಿಪೂರ್ವಕ ಸಮರ್ಪಣೆಯಾಗಿದೆ" ಎಂಬ ಆಶಯದೊಂದಿಗೆ ಈ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ.


ನಗರದ ಸ್ವಚ್ಛತೆ ಮತ್ತು ಹಸಿರನ್ನು ಕಾಪಾಡುವ ಸಲುವಾಗಿ ಸಾರ್ವಜನಿಕರು, ಪರಿಸರ ಪ್ರೇಮಿಗಳು ಮತ್ತು ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶ್ರಮದಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಸಮಿತಿಯು (ಸಂಪರ್ಕ ಸಂಖ್ಯೆ: 8105356290) ಪ್ರಕಟಣೆಯಲ್ಲಿ ವಿನಂತಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top