ಉಜಿರೆ: ಗ್ರಂಥಪಾಲಕ ಮನೋಹರ ಶೆಟ್ಟಿಯವರಿಗೆ ಸನ್ಮಾನ

Upayuktha
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ವತಿಯಿಂದ ಗ್ರಂಥಪಾಲಕರಾಗಿ ಸುಮಾರು 18 ವರ್ಷಗಳಿಂದ ಸೇವೆ ಸಲ್ಲಿಸಿದರ ಮನೋಹರ ಶೆಟ್ಟಿಯವರನ್ನು ವಯೋನಿವೃತ್ತಿಯ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 


ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ಅವರು ಸನ್ಮಾನಿಸಿ 'ಮನೋಹರ್ ಅವರು ಕೇವಲ ಗ್ರಂಥಪಾಲಕರಾಗದೆ ವಿದ್ಯಾರ್ಥಿಗಳಿಗೆ ಅನೇಕ ವೃತ್ತಿಪರ ಅಧ್ಯಯನ ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಿದ್ದರು. ಅವರಲ್ಲಿ ಪುಸ್ತಕ ಪ್ರೀತಿ ಜೊತೆಗೆ ಬರಹಗಾರರಾಗಿಯು ಗುರುತಿಸಿಕೊಂಡಿದ್ದಾರೆ' ಎಂದು ಹೇಳಿ ಶುಭಕೋರಿದರು. 


ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಹರ ಶೆಟ್ಟಿಯವರು 'ಅನೇಕ ವರ್ಷಗಳ ಪುಸ್ತಕಗಳೊಂದಿಗೆ ಒಡನಾಡಿಯಾಗಿ ಅಲ್ಲದೇ ಅನೇಕ ವಿದ್ಯಾರ್ಥಿಗಳಿಗೆ  ವೃತ್ತಿಪರ ಅಧ್ಯಯನ, ಮಾರ್ಗದರ್ಶನ ನೀಡಿದ ಸಾರ್ಥಕತೆ ಇದೆ. ಹೆಚ್ಚಿನದಾಗಿ ವಿದ್ಯಾರ್ಥಿಗಳ ಪ್ರೀತಿಗಳಿಸಿದ್ದೇನೆ. ಮಾನ್ಯ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರ ಕಾರ್ಯತತ್ಪರತೆಯೇ ನನಗೆ ಆದರ್ಶ. ಅವರಿಗೂ ಹಾಗೂ ಸೇವೆಗೆ ಅವಕಾಶ ಒದಗಿಸಿದ ಆಡಳಿತ ಮಂಡಳಿಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ' ಎಂದು ನುಡಿದರು. 


ಮನೋಹರ ಶೆಟ್ಟಿಯವರ ಜೀವನಾದರ್ಶಗಳ ಬಗ್ಗೆ ಹಿಂದಿ ಭಾಷಾ ವಿಭಾಗದ ಮುಖ್ಯಸ್ಥರಾದ ನಾಗರಾಜ್ ಭಂಡಾರಿ ಹಾಗೂ ಗ್ರಂಥಾಲಯ ಸಿಬ್ಬಂದಿ ಹರೀಶ್ ಕುಲಾಲ್ ಇವರು ಅನಿಸಿಕೆ ವ್ಯಕ್ತಪಡಿಸಿದರು. 


ವೇದಿಕೆಯಲ್ಲಿ ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ. ಉಪಸ್ಥಿತರಿದ್ದರು. ಉಪನ್ಯಾಸಕರ ಸಂಘದ ಕಾರ್ಯದರ್ಶಿ ಸೀಮಾ ಸ್ವಾಗತಿಸಿ, ಸಹ ಕಾರ್ಯದರ್ಶಿ ಅಂಕಿತಾ ಎಂ. ಕೆ ನಿರೂಪಿಸಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top