ತುಳುನಾಡ ವಿಶೇಷ ಆಚರಣೆ "ಆಟಿ"

Upayuktha
0

 



ರಾವಳಿ ತೀರದ ತುಳುನಾಡಿನಲ್ಲಿ ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸವನ್ನು ತುಳುನಾಡಿನಲ್ಲಿ "ಆಟಿ" ಎಂದು ಕರೆಯಲಾಗುತ್ತದೆ. ಆಟಿಯು  ತುಳು ಕ್ಯಾಲೆಂಡರಿನ ನಾಲ್ಕನೇ ತಿಂಗಳಾಗಿದ್ದು ಈ ತಿಂಗಳು ತುಳುನಾಡಿನ ಜನರಿಗೆ ತುಂಬಾ ಕಷ್ಟದ ತಿಂಗಳು ಎಂದು ಹಿನ್ನೆಲೆ ಇದೆ. 


ಈ ತಿಂಗಳಲ್ಲಿ ಗದ್ದೆ ವ್ಯವಸಾಯ ಮುಗಿಸಿ, ಕಾಡು-ಮೇಡುಗಳಲ್ಲಿ ಸಿಗುವಂತ ಆಹಾರಗಳು ಸೇವಿಸುವ ಸಮಯವಾಗಿದೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ಗುಳಿಗೆ ದೈವಕ್ಕೆ ಅಗೆಲು ಸೇವೆ ನೀಡುವ ಸಂಪ್ರದಾಯವಿದೆ. 


ಹಾಗೆಯೇ ಈ ಸಮಯದಲ್ಲಿ ಹಿರಿಯರನ್ನು ನೆನಪು ಮಾಡುವ ಕಾರ್ಯವನ್ನು ಮಾಡುತ್ತಾರೆ. ಈ ತಿಂಗಳಲ್ಲಿ ಆಟಿ ಅಮಾವಾಸ್ಯೆಯಂದು ಹಾಳೆಯ ಮರದ ಕಷಾಯವನ್ನು ಕುಡಿಯುವುದು ತುಳುನಾಡಿನ ಸಂಪ್ರದಾಯವಾಗಿದೆ.


ಈ ಸಮಯದಲ್ಲಿ ದೊರೆಯುವಂತಹ ಮರಕೆಸುವಿನ ಎಲೆಯಿಂದ ಪತ್ರೊಡೆಯನ್ನು ತಯಾರಿಸಲಾಗುತ್ತದೆ. ಇದರ ಜೊತೆಗೆ ಬಿದಿರಿನ ಚಿಗುರಾದ (ಕಣಿಲೆ) ಇವುಗಳು ಪ್ರಕೃತಿಯಿಂದ ದೊರೆಯುವಂತ ವಿಶೇಷವಾದ ಆಹಾರ ಉತ್ಪನ್ನವಾಗಿದೆ. 


ಆಟಿ ತಿಂಗಳಲ್ಲಿ ವಿಶೇಷವಾದ ಸಂಪ್ರದಾಯ ಎಂದರೆ 'ಆಟಿ ಕುಲ್ಲುನ' ಹೊಸದಾಗಿ ಮದುವೆಯಾಗಿ ಬಂದ ಹೆಣ್ಣು ತನ್ನ ತವರು ಮನೆಗೆ ಹಿಂದಿರುಗಿ ಒಂದು ತಿಂಗಳುಗಳ ಕಾಲ ತವರು ಮನೆಯಲ್ಲಿ ಇರುವುದು ಒಂದು ಸಾಂಪ್ರದಾಯಿಕ ಪದ್ಧತಿಯಾಗಿದೆ. 

 

ತುಳುನಾಡಿನ ಭಾಗದಲ್ಲಿ ವಿಶೇಷವಾಗಿ ಕಂಡುಬರುವ ಆಟ 'ಚೆನ್ನಮಣೆ' 'ಕೆಸರ್ಡೊಂಜಿ ದಿನ' ಎಂಬ ಗ್ರಾಮೀಣ ಆಟವನ್ನು ನಡೆಸುತ್ತದೆ. ಇದು ತುಳುನಾಡಿನ ಒಂದು ವಿಶೇಷ ಆಚರಣೆಯಾಗಿದೆ. ಈ ತಿಂಗಳಲ್ಲಿ ಮದುವೆ, ಹಬ್ಬ ,ಉತ್ಸವ, ಜಾತ್ರೆ ಇತ್ಯಾದಿ ಶುಭ ಕಾರ್ಯಗಳು ನಡೆಯುವುದಿಲ್ಲ. 


ಆಟಿ ತಿಂಗಳನ್ನು ಕಷ್ಟಕರವಾದ ತಿಂಗಳು ಎಂದು ಹೇಳುತ್ತೇವೆ. ವಿಶೇಷವಾಗಿ ಆರ್ಟಿಕಳೆಂಜ ಎಂಬ ವೇಷವನ್ನು ನಲಿಕೆ & ಪರವ ಜನಾಂಗದವರು ಧರಿಸುತ್ತಾರೆ. ತುಳುನಾಡಿನಲ್ಲಿ ಆಟಿಕಳೆಂಜ ದೈವವು ನಮ್ಮ ಮನೆಯ ಮಾರಿಯನ್ನು ಕಳೆಯಲು ಬರುತ್ತಾರೆ ಎಂಬುದು ನಂಬಿಕೆಯಾಗಿದೆ. ಈ ದೈವವು ತುಳುನಾಡಿನಲ್ಲಿ ಕೊನೆಯ ದೈವವಾಗಿದೆ.

         

 - ಹರ್ಷಲ್ ಗೌಡ

ಪ್ರಥಮ ಪತ್ರಿಕೋದ್ಯಮ ವಿಭಾಗ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top