ಮಂಗಳೂರು: ತುಳುವಿನ ಮೊದಲ ನಾಟಕಕಾರ ಎಂದು ಗುರುತಿಸಿಕೊಳ್ಳುವ ಮಾಧವ ತಿಂಗಳಾಯರು ತುಳುನಾಡು, ತುಳು ಭಾಷೆ, ಸಂಸ್ಕೃತಿಗಾಗಿ ತನ್ನನ್ನು ಮುಡಿಪಾಗಿಟ್ಟು, ಬ್ರಿಟಿಷರ ವಿರುದ್ಧ ಸಿಡಿದೆದ್ದು ನಾಡಿನ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು, ಸಾಮಾಜಿಕ ಪಿಡುಗುಗಳನ್ನು ಹೊಡೆದೊದೋಡಿಸುವ ಕ್ರಾಂತಿಕಾರಿ ಹೆಜ್ಜೆಗಳನಿರಿಸಿದ ಮಹನೀಯರು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡು ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಆಯೋಜಿಸಿದ್ದ ಮಾಧವ ತಿಂಗಳಾಯರ 113ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಪಿ ಕೃಷ್ಣಮೂರ್ತಿಯ ಮಾತನಾಡಿ ತಿಂಗಳಾಯರ ತುಳು ನಾಟಕಗಳು ವೈಚಾರಿಕ ಪ್ರಖರತೆಗಳಿಂದ ಕೂಡಿ, ಕನ್ನಡ ಸಾಹಿತ್ಯದ ಪ್ರಗತಿಶೀಲ ಚಿಂತನೆಯ ಕಾಲದಲ್ಲಿ ಹುಟ್ಟಿಕೊಂಡದ್ದಾದರೂ ಅದು ಗುರುತಿಸಿಕೊಳ್ಳದೆ ಇರುವುದು ವಿಪರ್ಯಾಸ, ಮುಂದಕ್ಕಾದರೂ ಅವರ ಚಿಂತನೆಗಳ ಹಾದಿಯನ್ನು ಸಮಾಜದಲ್ಲಿ ಬಿತ್ತಬೇಕಾಗಿದೆ ಎಂದರು.
ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ರವರು ಮಾತನಾಡಿ ತಿಂಗಳಾಯರು ಸ್ವಾತಂತ್ರ್ಯ ಹೋರಾಟಗಾರರಾಗಿ, ನಾಟಕಕಾರರಾಗಿ, ಸಮಾಜ ಸುಧಾರಕರಾಗಿ ಆ ಕಾಲದಲ್ಲಿ ಮಾಡಿದ ಕೆಲಸ ಕಾರ್ಯಗಳು ಅನನ್ಯವಾದುದು ಎಂದು ನುಡಿದರು.
ರಂಗ ನಿರ್ದೇಶಕ ತಮ್ಮ ಲಕ್ಷ್ಮಣರು ಮಾತನಾಡಿ ತುಳು ನಾಟಕ ಕ್ಷೇತ್ರದವರೆಲ್ಲ ತುಳು ರಂಗಭೂಮಿ ದಿನಾಚರಣೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಿಂಗಳಾಯರ ಕುಟುಂಬಸ್ಥರಾದ ಪ್ರೇಮಚಂದ್ರ ತಿಂಗಳಾಯರು ಉಪಸ್ಥಿತರಿದ್ದು ಮಾಧವ ತಿಂಗಳಾಯರ ಸಾಮಾಜಿಕ ಮತ್ತು ಸಾಹಿತ್ಯಿಕ ಕೆಲಸಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ತುಳು ಪರಿಷತ್ತಿನ ಅಧ್ಯಕ್ಷ ಶುಭೋದಯ ಆಳ್ವ, ದುರ್ಗಾ ಪ್ರಸಾದ್, ಟಿವಿ ನಿರೂಪಕರ ಪ್ರಕಾಶ್ ಪುತ್ತೂರು, ರತ್ನಾವತಿ ಜೆ ಬೈಕಾಡಿ, ರೂಪಕಲ ಆಳ್ವ, ನಾದ ಮಣಿನಾಲ್ಕೂರು, ಸಂಕೇತದ ಅಧ್ಯಕ್ಷ ಹರೀಶ್ ಶಕ್ತಿ ನಗರ, ಹೊನ್ನಯ್ಯ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ಸಾಹಿತಿ ರಘು ಇಡ್ಕಿದು ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


