ತಂಬಾಕು ಮುಕ್ತ ಐಕಳ ಗ್ರಾಮ ಪಂಚಾಯತ್

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮುಲ್ಕಿ ತಾಲೂಕು ಪಂಚಾಯತ್ ಮತ್ತು ಐಕಳ ಗ್ರಾಮ ಪಂಚಾಯತ್ ಇವರ ಸಹಯೋಗದೊಂದಿಗೆ ಐಕಳ ಗ್ರಾಮ ಪಂಚಾಯಿತಿಗೆ ಒಳಗೊಂಡಿರುವ ಏಳಂಜೆ, ಉಳೆಪಾಡಿ ಮತ್ತು ಐಕಳ ಹಳ್ಳಿಗಳನ್ನು ತಂಬಾಕು ಮುಕ್ತ ಹಳ್ಳಿಗಳೆಂದು ಘೋಷಿಸಲಾಯಿತು.
     
ಮುಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಂ ಎನ್ ಗುರುದತ್ ಅವರು "ತಂಬಾಕು ಮುಕ್ತ ಐಕಳ ಗ್ರಾಮ ಪಂಚಾಯತ್" ಎಂಬ ನಾಮಫಲಕವನ್ನು ಮಂಗಳವಾರ ಅನಾವರಣ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದರು.  
     
ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳಾದ  ಪುಂಡಲೀಕ ಲಕಾಟಿ, ಶ್ರುತಿ ಜೆ ಸಾಲಿಯಾನ್ ಮತ್ತು ವಿಜಯಕುಮಾರ್ ಹಾಗೂ ಐಕಳ ಗ್ರಾಮ ಪಂಚಾಯಿತಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ್, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು  ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top