"ಮನಸ್ಸಿನ ಮಾತುಗಳು"

Upayuktha
0


           AI ಚಿತ್ರ

ಮ್ಮ ಆಸೆಗಳು ಚಿಕ್ಕದಾಗಿದ್ದರೂ ನಮ್ಮ ಪ್ರಯತ್ನಗಳು ದೊಡ್ಡದಾಗಿರಬೇಕು. ನಡೆ-ನುಡಿಯಲ್ಲಿ ಒಳ್ಳೆಯತನವಿರಬಹುದು, ಆದರೆ ಮಾತಿನಲ್ಲಿಯೂ ಪ್ರೀತಿ ಇರಲು ಸಾಧ್ಯವೇ? ಎಂಬುದು ನನ್ನ ಮನಸ್ಸಿನಲ್ಲಿ ಮೂಡುವ ಪ್ರಶ್ನೆ.


ಮನುಷ್ಯನಿಗೆ ಸಾವಿರಾರು ಆಸೆಗಳಿರುತ್ತವೆ. ಅವುಗಳನ್ನು ನೆರವೇರಿಸಿಕೊಳ್ಳಲು ನಾವು ಬಹಳಷ್ಟು ಕಷ್ಟಪಡುತ್ತೇವೆ. ದೇವರು ನಮಗೆ ಅಮೂಲ್ಯವಾದ ಸಮಯವನ್ನು ನೀಡಿದ್ದರೂ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಿಲ್ಲ. ಸಮಯ ಕೈಜಾರಿ ಹೋದ ನಂತರವೇ ಅದರ ಬೆಲೆ ನಮಗೆ ತಿಳಿಯುತ್ತದೆ.


ಇಂದಿನ ನಮ್ಮ ಸಣ್ಣ ಪ್ರಯತ್ನವೇ ನಾಳೆಯ ದೊಡ್ಡ ಯಶಸ್ಸಿಗೆ ಅಡಿಪಾಯ. ಶಿಸ್ತು ಮತ್ತು ಪರಿಶ್ರಮವೇ ವಿದ್ಯಾರ್ಥಿಯನ್ನು ಯಶಸ್ವಿಯನ್ನಾಗಿ ಮಾಡುತ್ತದೆ. ಪ್ರತಿದಿನವೂ ನಮ್ಮ ಮನಸ್ಸಿಗೆ ಹೊಸ ಹೊಸ ಆಲೋಚನೆಗಳು ಬರುತ್ತಲೇ ಇರುತ್ತವೆ. ಸಮಯ ಎಂಬುದು ಬಹಳ ಅಮೂಲ್ಯವಾದುದು. ಅದನ್ನು ಕಲಿಕೆಗಾಗಿ ಮತ್ತು ಒಳ್ಳೆಯ ಕೆಲಸಗಳಿಗಾಗಿ ಬಳಸುವುದು ಉತ್ತಮ.


ನಾವು ಹೆಚ್ಚಾಗಿ ನಮ್ಮ ಮನಸ್ಸಿನ ಮಾತನ್ನು ಕೇಳಿ ಮುಂದಿನ ಹೆಜ್ಜೆ ಇಡುತ್ತೇವೆ. ಕೆಲವೊಮ್ಮೆ ಗೆಳತಿಯರ ಮನಸ್ಸಿನ ಮಾತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಎಲ್ಲಾ ಸಮಯದಲ್ಲೂ ಅದರಲ್ಲಿ ಸಫಲರಾಗುವುದಿಲ್ಲ. ಯಾಕೆಂದರೆ ಪ್ರತಿಯೊಬ್ಬರ ಮನಸ್ಸು ಒಂದು ಕನ್ನಡಿಯಂತೆ ಸೂಕ್ಷ್ಮವಾಗಿರುತ್ತದೆ.


ನಮ್ಮ ಜೀವನದಲ್ಲಿ ನಾವೇ ನಗುನಗುತ್ತಾ ಬಾಳುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಸಾಧ್ಯವಾದರೆ ಇನ್ನೊಬ್ಬರ ಮುಖದಲ್ಲಿಯೂ ನಗು ತರಲು ಪ್ರಯತ್ನಿಸಬೇಕು. ಅಳಿಸುವುದಲ್ಲ, ಸೇರಿಸುವ ಕೆಲಸ ಮಾಡಬೇಕು. ಏಕೆಂದರೆ ಇನ್ನೊಬ್ಬರ ಮನಸ್ಸಿನ ಆಳವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.


ಆದ್ದರಿಂದ ಮಾತಿನಲ್ಲಿ ಮೃದುತ್ವ, ನಡೆಯಲ್ಲಿ ಪ್ರಾಮಾಣಿಕತೆ ಮತ್ತು ಮನಸ್ಸಿನಲ್ಲಿ ಪ್ರೀತಿ ಇಟ್ಟುಕೊಂಡರೆ ನಮ್ಮ ಜೀವನವೂ ಸುಂದರವಾಗುತ್ತದೆ.


- ಶಿವಾನಿ ಕೊಡಂಗಾಯಿ  

ದ್ವಿತೀಯ ಬಿ.ಎ. ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top