ಬೆಳೆ ವಿಮೆ ಅನುಷ್ಠಾನಕ್ಕೆ ಟಾಟಾ ಎಐಜಿ ನೇಮಕ

Upayuktha
0

 


ಮಂಗಳೂರು: ದೇಶದ ಪ್ರಮುಖ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಒಂದಾದ "ಟಾಟಾ ಎಐಜಿ ಜನರಲ್ ಇನ್ಶುರೆನ್ಸ್", 2026ರ ಮುಂಗಾರು ಹಂಗಾಮಿಗಾಗಿ ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪುನಾರಚಿತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್‍ಡಬ್ಲ್ಯುಬಿಸಿಐಎಸ್) ಅನುಷ್ಠಾನಗೊಳಿಸುವ ವಿಮಾ ಪಾಲುದಾರನಾಗಿ ನೇಮಕಗೊಂಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಪ್ರಾಯೋಜಿಸುತ್ತಿರುವ ಈ ವಿಮಾಯೋಜನೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಇತರ ಬೆಳೆ ಸಂಬಂಧಿತ ಅಪಾಯಗಳಿಂದ ಉಂಟಾಗುವ ಬೆಳೆ ನಷ್ಟಗಳಿಗೆ ಪ್ರತಿಯಾಗಿ ರೈತರಿಗೆ ಆರ್ಥಿಕ ರಕ್ಷಣೆ ನೀಡುವ ಗುರಿ ಹೊಂದಿದೆ. ಭಾರತದ ಕೃಷಿ ಕ್ಷೇತ್ರದ ಪುನಶ್ಚೇತನ ಮತ್ತು ರೈತರಿಗೆ ಆದಾಯ ಸ್ಥಿರತೆ ಬೆಂಬಲಿಸುವ ಪ್ರಮುಖ ಉಪಕ್ರಮ ಇದಾಗಿದೆ ಎಂದು ಪ್ರಕಟಣೆ ಹೇಳಿದೆ.

ವಿಮಾ ಅನುಷ್ಠಾನ ಪಾಲುದಾರನಾಗಿ ಟಾಟಾ ಎಐಜಿ, ಅಧಿಸೂಚಿತ ಬೆಳೆಗಳನ್ನು ಬೆಳೆಯುವ ರೈತರ ನೋಂದಣಿಯನ್ನು ಸುಗಮಗೊಳಿಸುತ್ತಿದೆ. ರೈತರು ತಮ್ಮ ಜೀವನೋಪಾಯ ಕಾಪಾಡಿಕೊಳ್ಳಲು ಮತ್ತು ಹವಾಮಾನ ಸಂಬಂಧಿತ ಅಪಾಯಗಳು ಮತ್ತು ಬೆಳೆ ನಷ್ಟಗಳ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಆರ್‍ಡಬ್ಲ್ಯುಬಿಸಿಐಎಸ್ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ.

ಬ್ಯಾಂಕುಗಳು, ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‍ಸಿಗಳು), ಗ್ರಾಮ-ಒನ್, ಕರ್ನಾಟಕ ಒನ್ ಅಥವಾ ಅಧಿಕೃತ ಪ್ರಧಾನ ಮಂತ್ರಿಗಳ ಫಸಲ್ ಬಿಮಾ ಯೋಜನೆ(ಪಿಎಂಎಫ್‍ಬಿವೈ) ವೆಬ್‍ಸೈಟ್ ಮೂಲಕ ನೇರವಾಗಿ ಪೂರ್ಣಗೊಳಿಸಬಹುದು. ರೈತರು ತಮ್ಮ ಪ್ರೀಮಿಯಂ ಸಹ ಪರಿಶೀಲಿಸಬಹುದು ಮತ್ತು ಅಧಿಸೂಚಿತ ಕೊನೆಯ ದಿನಾಂಕದೊಳಗೆ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಪಿಎಂಎಫ್‍ಬಿವೈ ವೆಬ್‍ಸೈಟ್ ಲಿಂಕ್: https://pmfby.gov.in/

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top