ಸುರತ್ಕಲ್ ರೋಟರಿ ಕ್ಲಬ್: ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ

Upayuktha
0

 


ಸುರತ್ಕಲ್: ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸುತ್ತಿರುವ ಸಾಮಾಜಿಕ ಸೇವಾ ಕಾರ್ಯಕ್ರಮಗಳು ವಿಶ್ವವನ್ನು ಒಂದಾಗಿಸುವ ಪ್ರಕ್ರಿಯೆಯಾಗಿದೆ. ಸಮಾಜದ  ಸರ್ವ ವರ್ಗಗಳನ್ನು ತಲುಪುವುದರೊಂದಿಗೆ ಅತ್ಯಂತಿಕ ಪರಿಣಾಮಕಾರಿಯಾಗ ಬೇಕೆನ್ನುವ ಗುರಿಯನ್ನು ಹೊಂದಲಾಗಿದೆ ಎಂದು ಜಿಲ್ಲಾ ರೋಟರಿ 3181ರ ಚುನಾಯಿತ ಜಿಲ್ಲಾ ಗವರ್ನರ್ ರೊ. ಯಶಸ್ವಿ ಎಸ್. ಸೋಮಶೇಖರ್ ನುಡಿದರು. 


ಅವರು ಸುರತ್ಕಲ್ ರೋಟರಿ ಕ್ಲಬ್ ನ 2026-27 ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ವನ್ನು ನೆರವೇರಿಸಿ ಮಾತನಾಡಿದರು. 


ನೂತನ ಅಧ್ಯಕ್ಷ ರಾಗಿ ಶ್ರೀಧರ್ ಟಿ. ಎನ್.,ಕಾರ್ಯದರ್ಶಿಯಾಗಿ ಶ್ರೀನಿವಾಸ ರಾವ್ ಪಾದೆಬೆಟ್ಟು, ಉಪಾಧ್ಯಕ್ಷರಾಗಿ ಚಂದ್ರಕಾಂತ್ ಮರಾಠೆ, ಕೋಶಾಧಿಕಾರಿಯಾಗಿ ಶ್ರೀಶ ಭಟ್, ನಿಯೋಜಿತ ಅಧ್ಯಕ್ಷರಾಗಿ ಕೃಷ್ಣಮೂರ್ತಿ. ಪಿ. ಮತ್ತು ನಿರ್ದೇಶಕರು ಅಧಿಕಾರ ಸ್ವೀಕರಿಸಿದರು.


ಸಚ್ಚಿದಾನಂದ ರಾವ್ ಮತ್ತು ಆನಂದ ರಾವ್ ಸಂಪಾದಕತ್ವದ ಗೃಹ ಪತ್ರಿಕೆ  ಇ -ಸುಹೃತ್ ನ ವಿಶೇಷ ಸಂಚಿಕೆಯನ್ನು  ರೋಟರಿ ಜಿಲ್ಲೆ 3181 ವಲಯ 2 ರ ಸಹಾಯಕ ಗವರ್ನರ್ ರೊ. ಸಂದೀಪ್ ರಾವ್ ಇಡ್ಯಾ ಅವರು ಬಿಡುಗಡೆಗೊಳಿಸಿ ಸುರತ್ಕಲ್ ರೋಟರಿ ಸಂಸ್ಥೆಯು ಅನನ್ಯ ಕಾರ್ಯಕ್ರಮಗಳಿಂದ  ಜನ ಮಾನ್ಯತೆ ಪಡೆದಿದೆ ಎಂದರು.


ಸಮಾಜಸೇವಾ ಕಾರ್ಯದ  ಅಂಗವಾಗಿ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿ ನ ಮಧ್ಯಾಹ್ನ ದ ಊಟ ದ ಯೋಜನೆ ಗೆ ರೂ. 75,000ವನ್ನು ಹಿಂದು ವಿದ್ಯಾದಾಯಿನಿ ಸಂಘ ದ ಕಾರ್ಯದರ್ಶಿ ಹೆಚ್. ಶ್ರೀರಂಗ ಅವರಿಗೆ ಹಸ್ತಾಂತರಿಸಲಾಯಿತು. ವಿವಿಧ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವನ್ನು ವಿತರಿಸಲಾಯಿತು.


ರೋಟರಿ ಜಿಲ್ಲಾ 3181 ವಲಯ 2 ರ ಝೋನಲ್ ಲೇಫ್ಟಿಂನೆಂಟ್ ಸುಧಾಕರ್ ಎನ್. ಸಾಲ್ಯಾನ್ ಶುಭ ಹಾರೈಸಿದರು.  ನೂತನ ಅಧ್ಯಕ್ಷ ಶ್ರೀಧರ್ ಟಿ. ಎನ್. ಪ್ರಸ್ತುತ ವರ್ಷ ದ ಕಾರ್ಯ ಯೋಜನೆ ಗಳನ್ನು ತಿಳಿಸಿದರು. ನಿರ್ಗಮನ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಸ್ವಾಗತಿಸಿ, ತಮ್ಮ ಸೇವಾ ಅವಧಿ ಯ ಅನುಭವ ಗಳನ್ನು ಹಂಚಿಕೊಂಡರು.


ಕಾರ್ಯದರ್ಶಿ ರಾಮಮೋಹನ್ ವೈ. ವರದಿ ವಾಚಿಸಿ, ನೂತನ ಕಾರ್ಯದರ್ಶಿ ಶ್ರೀನಿವಾಸ ರಾವ್ ಪಾದೆಬೆಟ್ಟು ವಂದಿಸಿದರು. ಡಾ. ಅರವಿಂದ ಭಟ್ ಅತಿಥಿಗಳ ಉಪಸ್ಥಿತ ಪಟ್ಟಿ ವಾಚಿಸಿದರು. ಪೂರ್ಣಿಮಾ ಸತೀಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top