ಮಂಜೇಶ್ವರ: ಸುರಕ್ಷಾ ದಂತ ಚಿಕಿತ್ಸಾಲಯದ 29ನೇಯ ಸಂಸ್ಥಾಪನಾ ದಿನವನ್ನು 3 ಜುಲೈ ಶುಕ್ರವಾರದಂದು ಆಚರಿಸಲಾಯಿತು. ಡಾ ಚೂಂತಾರು ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಉಚಿತ ದಂತ ತಪಾಸಣೆ ಮಾಡಲಾಯಿತು ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ಸಿಹಿ ತಿಂಡಿ ಹಂಚಿ ಟೂತ್ ಬ್ರಷ್ ಮತ್ತು ಟೂತ್ ಪೇಸ್ಟ್ ನೀಡಿ ಸಂಭ್ರಮಿಸಲಾಯಿತು.
ಸುರಕ್ಷಾ ದಂತ ಚಿಕಿತ್ಸಾಲಯದ ವೈದ್ಯರಾದ ಡಾ ಮುರಲೀ ಮೋಹನ್ ಚೂಂತಾರು, ಡಾ ರಾಜಶ್ರೀ ಮೋಹನ್, ಹಾಗೂ ದಂತ ಸಹಾಯಕಿಯರಾದ ರಮ್ಯಾ, ಚೈತ್ರ, ಸುಷ್ಮೀತಾ, ರಶ್ಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಳೆದ 26 ವರುಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯ ಮಂಜೇಶ್ವರದ ಗ್ರಾಮೀಣ ಪರಿಸರದ ಜನತೆಗೆ ವಿಶ್ವ ದರ್ಜೆಯ ದಂತ ಚಿಕಿತ್ಸೆಯನ್ನು ನೀಡಿ ಜನಮನ್ನಣೆ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.


