ಕೊಪ್ಪಳ ಜು ,17: ಕೊಪ್ಪಳದಲ್ಲಿ ವೆಂಕಟೇಶ ಹೆಗಡೆ ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಮುಖ್ಯ ಸಂಯೋಜಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿಗಳು, ಮತ್ತು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಅಯೋಧ್ಯ ರಾಮ ಮಂದಿರದ ಭ್ರಷ್ಟಾಚರದ ಹಗರಣವನ್ನು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಸಿ.ಬಿ.ಐ. ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಯೋಧ್ಯ ರಾಮಮಂದಿರದ ಭ್ರಷ್ಟಾಚಾರ ಹಗರಣ ಈ ಶತಮಾನದ ಅತಿ ದೊಡ್ಡ ಹಗರಣವಾಗಿರುತ್ತದೆ. ಅನೇಕ ದಶಕಗಳಿಂದ ರಾಮನ ಜಪ ಮಾಡಿ ಅಧಿಕಾರಕ್ಕೆ ಬಂದ ಬೆಜೆಪಿ ತರಾತುರಿಯಲ್ಲಿ ರಾಮಮಂದಿರವನ್ನು ಅಯೋಧ್ಯೆಯ ರಾಮ ಮಂದಿರವನ್ನು 2023ರಲ್ಲಿ ಉದ್ಘಾಟನೆ ಮಾಡಿ ಆ ವಿಚಾರದ ಮೇಲೆ 2024ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ಗಳಿಸಿಕೊಂಡರು, ಆದರೆ ಕೇಂದ್ರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರ ನೇಮಕ ಮಾಡಿದ ಟ್ರಸ್ಟಿನ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಅವರ ಅನುಯಾಯಿಗಳು ದೇವಸ್ಥಾನಕ್ಕೆ ಬಂದಿದ್ದ ಸಾವಿರಾರು ಕೋಟಿ ಹಣ, ಬಂಗಾರ, ವಡವೆ, ವಜ್ರ ವೈಡೂರ್ಯಗಳನ್ನು ಲೂಟಿ ಮಾಡಿರುತ್ತಾರೆ.
ಅವರುಗಳೆಲ್ಲರೂ ಬಿ.ಜೆ.ಪಿ. ಆರ್.ಎಸ್.ಎಸ್. ವಿ.ಎಚ್.ಪಿ. ಕಾರ್ಯಕರ್ತರೇ ಆಗಿರುತ್ತಾರೆ. ಆ ಟ್ರಸ್ಟ್‌ನ್ನು ಕೂಡಲೇ ವಜಾಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಿಸಬೇಕು,ಆ ನಂತರ ಪ್ರಾಮಾಣಿಕರನ್ನು ಟ್ರಸ್ಟಿಗೆ ಆಯ್ಕೆ ಮಾಡುವಂತೆ ಕ್ರಮ ವಹಿಸಬೇಕು ಮತ್ತು ಇದಕ್ಕೆ ಕಾರಣೀಬೂತರಾಗಿರುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರುಗಳ ರಾಜೀನಾಮೆ ಕೊಡಬೇಕು ಹಾಗೂ ರಾಷ್ಟ್ರದ ಜನತೆಯ ಕ್ಷಮೆಯನ್ನು ಕೇಳಬೇಕೆಂದು ತಮ್ಮ ಮೂಲಕ ಒತ್ತಾಯ ಮಾಡುತ್ತೇವೆ. ಹಾಗೆಯೇ ಸದರಿ ರಾಮ ಮಂದಿರ ಭ್ರಷ್ಟಾಚರದ ಹಗರಣವನ್ನು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಸಿ.ಬಿ.ಐ. ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತೋಟಪ್ಪ ಕಾಮನೂರ್, ಉಪಾಧ್ಯಕ್ಷರು ಕೊಪ್ಪಳ ಜಿಲ್ಲಾ ಪ್ರಚಾರದ ಸಮಿತಿ.
ಹಂಪಯ್ಯ ಸ್ವಾಮಿ ಹಿರೇಮಠ ಯಲಬುರ್ಗಾ ಪ್ರಚಾರ ಸಮಿತಿ ಅಧ್ಯಕ್ಷರು.ಮಹಮ್ಮದ್ ರಫಿ ಕಾರಟಗಿ ಪ್ರಚಾರ ಸಮಿತಿ ಅಧ್ಯಕ್ಷರು,ಶಂಕರಗೌಡ್ ಪಾಟೀಲ್ ವಕೀಲರು ಕುಷ್ಟಗಿ ಪ್ರಚಾರ ಸಮಿತಿ ಅಧ್ಯಕ್ಷರು,ಪ್ರಕಾಶ್ ರಾಥೋಡ್ ಕುಷ್ಟಗಿ ಹನಮಸಾಗರ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರು,ಸೋಮಲಿಂಗಪ್ಪ ಹುಡೇದ. ಕೊಪ್ಪಳ ಪ್ರಚಾರ ಸಮಿತಿ ಅಧ್ಯಕ್ಷರು.ಅಶೋಕ್ ಗೋರಂಟ್ಲಿ. ಅಧ್ಯಕ್ಷರು ಸಾಮಾಜಿಕ ಜಾಲತಾಣ ಕೊಪ್ಪಳ ಜಿಲ್ಲಾ ಪ್ರಚಾರ ಸಮಿತಿ .ಅಕ್ಬರ್ ಪಲ್ಟನ್ ಪ್ರಧಾನ ಕಾರ್ಯದರ್ಶಿಗಳು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ. ಟಿ ಆನಂದ್ ಮತ್ತು ರವಿಕುಮಾರ್ ಇದ್ದರು.

