ಸೇವಾಭಾರತಿ ಸಂಸ್ಥೆಯಲ್ಲಿ ನೂತನ ಪಾಕಶಾಲೆ ಉದ್ಘಾಟನೆ

Upayuktha
0



ಮಂಗಳೂರು: ಸೇವಾಭಾರತಿ (ರಿ.) ಮಂಗಳೂರು ಇವರ ನರಿಂಗಾನ ಮೋಂಟೆಪದವು ಮಾಧವವನದ “ಅಂಕುರ ಸೌಧ”ದಲ್ಲಿ ನೂತನ ಪಾಕಶಾಲಾ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 17ನೇ ಜುಲೈ 2026ರಂದು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. 


ಈ ಸುಸಜ್ಜಿತ ಪಾಕಶಾಲೆಯ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಪರದೆ ಎಳೆಯುವುದರ ಮೂಲಕ ಪಾಕಶಾಲೆಯನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಬೆಳಗಿಸುವುದರ ಮೂಲಕ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಮಾತೆಯರೆಲ್ಲರೂ ಸೇರಿ ಹಾಲುಕ್ಕಿಸುವುದರ ಮುಲಕ ಪೌಷ್ಟಿಕ ಆಹಾರ ತಯಾರಿಕೆಗೆ ಚಾಲನೆ ನೀಡಲಾಯಿತು. 


 ಈ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಶಾಲೆಯ ಬಗ್ಗೆ, ಸಂಸ್ಥೆಯ ಸಾಮಾಜಿಕ ಕಾರ್ಯವೈಖರಿಯ ಬಗ್ಗೆ, ಶಿಕ್ಷಕರ ಬಗ್ಗೆ ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಡೆವೂರು ಮಠ, ಉಪ್ಪಳ ಇದರ ಪರಮ ಪೂಜ್ಯರಾದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಸೇವಾಭಾರತಿ ಸಂಸ್ಥೆಯು ದಿವ್ಯಾಂಗರನ್ನು, ಸಮಾಜದ ಮುಖ್ಯವಾಹಿನಿಗೆ ಕರೆತರಲು ಮಾಡಿರುವ ಎಲ್ಲಾ ರೀತಿಯ ಸೌಕರ್ಯಗಳನ್ನು ನೋಡಿ ಶ್ಲಾಘಿಸಿದರು. ತದನಂತರ ತಮ್ಮ ದಿವ್ಯ ಆಶೀರ್ವಚನ ಮತ್ತು ಆಶೀರ್ವಾದವನ್ನು ನೆರೆದ ಎಲ್ಲಾ ಸಭಿಕರಿಗೆ ನೀಡಿದರು.


ಕಾರ್ಯಕ್ರಮವನ್ನು ಶಿಕ್ಷಕಿ ಯಶೋಧ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸೇವಾಭಾರತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಹೆಚ್. ನಾಗರಾಜ್ ಭಟ್, ಖಜಾಂಚಿ ಶ್ರೀ ವಿನೋದ್ ಶೆಣೈ, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೃಥ್ವಿಪಾಲ್. ಕೆ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ವಿಶ್ವಸ್ಥರು, ಅದಮ್ಯ ಚೇತನಾ ವಸತಿಯುತ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವರ್ಷಾ, ಸ್ವಯಂ ಸೇವಕರು, ಮಕ್ಕಳ ಪೋಷಕರು, ಶಾಲೆಯ ಎಲಾ ಸಿಬ್ಬಂದಿ ವರ್ಗದವರು, ಹಿತೈಷಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top