ಸಂತ ಫಿಲೋಮಿನಾ ಕಾಲೇಜು: ಆಲ್ ಇಂಡಿಯಾ ನೌ ಸೈನಿಕ್ ಕ್ಯಾಂಪ್‌ನಲ್ಲಿ ಎನ್‌ಸಿಸಿ ಕೆಡೆಟ್‌ ಗೆ ಬೆಳ್ಳಿ, ಕಂಚಿನ ಪದಕ

Upayuktha
0

 


 

ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್ಸಿಸಿ ನೌಕಾದಳ ವಿಭಾಗದ ಕೆಡೆಟ್ ಕ್ಯಾಪ್ಟನ್ ದಿಗಂತ್ ವಿ. ಎಸ್. ಅವರು ಪ್ರತಿಷ್ಠಿತ ಆಲ್ ಇಂಡಿಯಾ ನೌ ಸೈನಿಕ್ ಕ್ಯಾಂಪ್ (AINSC)–2026ರಲ್ಲಿ ಎರಡು ಪದಕಗಳನ್ನು ಗೆದ್ದು ಕಾಲೇಜಿಗೆ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ.

 

ಮಹಾರಾಷ್ಟ್ರದ ಲೋಣಾವಲಾದ ಐಎನ್ಎಸ್ ಶಿವಾಜಿಯಲ್ಲಿ ಜುಲೈ 1ರಿಂದ 12ರವರೆಗೆ ನಡೆದ ರಾಷ್ಟ್ರೀಯ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ದಿಗಂತ್, ದೇಶದ ವಿವಿಧ ರಾಜ್ಯಗಳ ಅತ್ಯುತ್ತಮ ಎನ್ಸಿಸಿ ನೌಕಾದಳ ವಿಭಾಗದ ಕೆಡೆಟ್ಗಳೊಂದಿಗೆ ಸ್ಪರ್ಧಿಸಿ,ದೈಹಿಕ ಸಾಮರ್ಥ್ಯ, ಶಿಸ್ತು ಮತ್ತು ವೃತ್ತಿಪರ ಕೌಶಲ್ಯವನ್ನು ಪ್ರದರ್ಶಿಸಿದ ಅವರು ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ಸರ್ವಿಸ್ ಸಬ್ಜೆಕ್ಟ್ ಪರೀಕ್ಷೆಯಲ್ಲಿ ಕಂಚಿನ ಪದಕ ಪಡೆದು ಗಮನ ಸೆಳೆದ ಕೆಡೆಟ್ ದಿಗಂತ್ ಅವರಿಗೆ ಎನ್ಸಿಸಿ ನೌಕಾದಳ ವಿಭಾಗದ ಸಹಾಯಕ ಎನ್ಸಿಸಿ ಅಧಿಕಾರಿ (Associate NCC Officer) ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಅವರು ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದು, ಅವರ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

 

ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ದಿಗಂತ್ ಅವರ ರಾಷ್ಟ್ರೀಯ ಸಾಧನೆಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top