ಸಂತ ಫಿಲೋಮಿನಾ ಕಾಲೇಜು: "ಯಕ್ಷಾಮೃತ" ಉದ್ಘಾಟನೆ

Upayuktha
0

ಪುತ್ತೂರು: ಸಂತ ಫೀಲೋಮಿನಾ ಕಾಲೇಜು(ಸ್ವಾಯತ್ತ) ಪುತ್ತೂರು, ಯಕ್ಷಕಲಾಕೇಂದ್ರ ಮತ್ತು ದೇಶಭಕ್ತ ಎನ್. ಎಸ್ ಕಿಲ್ಲೆ ಪ್ರತಿಷ್ಠಾನ ಸಹಯೋಗದಲ್ಲಿ “ಯಕ್ಷಾಮೃತ” 40 ಗಂಟೆಗಳ ಧೃಡಪತ್ರ ಶಿಕ್ಷಣ ಪಿಜಿ ಸಭಾಂಗಣದಲ್ಲಿ ಉದ್ಘಾಟನೆಗೋಂಡಿತು. ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಮತ್ತು ಪ್ರಸರಣದ ಉದ್ದೇಶದಿಂದ ಯಕ್ಷಕಲಾಕೇಂದ್ರವು ಹಲವು ರಚನಾತ್ಮಕ ಕಾರ್ಯಕ್ರಮವನ್ನು ಸಂಯೋಜಿಸಿದೆ.


ಯಕ್ಷಾಮೃತ ಧೃಡಪತ್ರ ಶಿಕ್ಷಣ ವಿದ್ಯಾರ್ಥಿಗಳನ್ನು ಯಕ್ಷಗಾನ ಪ್ರದರ್ಶನ ಕಲೆಯಲ್ಲಿ ವೃತ್ತಿಪರ ಪ್ರದರ್ಶನ ನೀಡುವ ಮಟ್ಟದಲ್ಲಿ ತರಬೇತುಗೊಳಿಸುತ್ತದೆ. ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಧೃಡಪತ್ರವನ್ನು ನೀಡಿ ಪ್ರದರ್ಶನ ಸಂಯೋಜಿಸಲಾಗುತ್ತದೆ.


”ಯಕ್ಷಾಮೃತ” 2026-27ನ್ನು ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಪಣಂಬೂರು ಉದ್ಘಾಟಿಸಿ, ಯಕ್ಷಗಾನ ಪ್ರದರ್ಶನ ಕಲೆಯ ಶೈಕ್ಷಣಿಕ ವಿಸ್ತರತೆಯನ್ನು ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರೇ.ಡಾ.ಆಂಟನಿ ಪ್ರಕಾಶ್ ಮೋಂತೇರೊ ವಹಿಸಿ ವಿದ್ಯಾರ್ಥಿಗಳಿಗೆ ಸೃಜನಶೀಲತೆಯನ್ನು ಮೖಗೂಡಿಸಿಕೊಳ್ಳುವಂತೆ ತಿಳಿಸಿ, ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ  ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು  ಕಲಾತ್ಮಕತೆ  ಇಲ್ಲವಾಗಿದೆ. ಕಲೆಗಳ  ಆಸ್ವಾದನೆಯ ಆಸಕ್ತಿಯು  ಕಡಿಮೆಯಾಗಿದೆ. ಯಕ್ಷ ಕಲಾ ಕೇಂದ್ರವು ನಮ್ಮ ನೆಲದ  ಕಲೆಗಳ ಪ್ರಸರಣ  ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಮತ್ತು ಯಕ್ಷ ಕಲಾ ಕೇಂದ್ರದ ಕಾರ್ಯಗಳಿಗೆ ಸಹಕರಿಸುವಂತೆ ವಿನಂತಿಸಿದರು. 


ಯಕ್ಷ ಕಲಾ ಕೇಂದ್ರ ಸಂಯೋಜಕ ಪ್ರಶಾಂತ್ ರೈ ಸ್ವಾಗತಿಸಿ ಯಕ್ಷಾಮೃತ ಸಂಯೋಜಕಿ ಸುರಕ್ಷಾ ರೈ ವಂದಿಸಿ, ಯಕ್ಷಕಲಾ ಕೇಂದ್ರ ವಿದ್ಯಾರ್ಥಿ ಸನ್ನಿಧಿ ರೈ ಪ್ರಾರ್ಥಿಸಿದರು. ಯಕ್ಷಾಮೃತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top