ಸೈಂಟ್ ಆಂಟನಿ ಆಶ್ರಮವು ಆಶ್ರಯದಾತ ಮನೆಯಾಗಿದೆ: ಫಾ ಜೆ ಬಿ‌ ಕ್ರಾಸ್ತಾ

Upayuktha
0

 



ಮಂಗಳೂರು: ಸೈಂಟ್ ಆಂಟನಿಯವರ ಭಕ್ತರು ಆನೆಕಾಲು, ಟಿಬಿ ರೋಗಿಗಳ ಆರೈಕೆಗೆ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ 18ನೇ ಶತಮಾನದಲ್ಲಿ ಆರಂಭಿಸಿದ ಸಂಸ್ಥೆಯೇ ಸೈಂಟ್ ಆಂಟನಿ ಆಶ್ರಯವಾಗಿದೆ. ಇಂದು ಫೈಲೇರಿಯಾ, ಟ್ಯೂಬರ್‌ಕುಲೋಸಿಸ್ ಇಲ್ಲವಾದ್ದರಿಂದ  ಅದು ನಿರಾಶ್ರಿತರ ಆಶ್ರಯದಾತ ಮನೆಯಾಗಿ ಪರಿವರ್ತನೆ ಆಗಿದೆ ಎಂದು ನಿರ್ದೇಶಕ ಫಾ ಜೆಬಿ ಕ್ರಾಸ್ತಾ ನುಡಿದರು.

ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಕಾರ್ಯಕಾರಿ ಸದಸ್ಯರಿಗೆ ಸಂಸ್ಥೆಯ ಮಾಹಿತಿ ಮತ್ತು  ತಾವು ನಡೆಸುವ ಕ್ರೈಸ್ತ ಧರ್ಮದ ಮಾಹಿತಿ ಮ್ಯೂಸಿಯಮ್ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ ಕೊಂಕಣಿ ಮಾತೃಭಾಷೆ ಇರುವ ಹಿಂದು, ಕ್ರೈಸ್ತ, ಮುಸ್ಲಿಂ, ಕುಡುಬಿ, ಖಾರ್ವಿ, ಜಿಎಸ್‌ಬಿ, ಸಿದ್ದಿ ಪಂಗಡಗಳು ಕೆಬಿಎಂಕೆ ಸದಸ್ಯರು ಆಗಿದ್ದಾರೆ. ಸರ್ವಧರ್ಮ ಸಮನ್ವಯ ಅಂದರೆ  ಕೊಂಕಣಿ ಆದುದರಿಂದ ಧರ್ಮಗಳ ನಡುವೆ  ಸೌಹಾರ್ದ ‌ಇರಲು‌ ಇಂತಹ ಭೇಟಿಗಳು ಅಗತ್ಯ ಎಂದು  ನುಡಿದರು.

ಉಪಾಧ್ಯಕ್ಷ ಮೀನಾಕ್ಷಿ ಪೈ, ಕಾರ್ಯಕಾರಿ ಸಲಹೆದಾರ  ಗೀತಾ ಕಿಣಿ, ಸದಸ್ಯರಾದ ಝೀನಾ ಫರ್ನಾಂಡೀಸ್, ಎಡೋಲ್ಫ್ ಡಿಸೋಜ, ಜೊಸ್ಸಿ ಪಿಂಟೊ, ಲಾರೆನ್ಸ್ ಪಿಂಟೊ ಮತ್ತು ಶಾಂತಿ ವೆರೊನಿಕಾ ಜೊತೆಗೆ ಆಹ್ವಾನಿತರಾದ ಸ್ಟೇನಿ ತಾವ್ರೊ, ಜೋನ್ ತಾವ್ರೊ, ಹೆರಾಲ್ಡ್ ಅಲ್ಬುಕರ್ಕ್, ಜಿಲ್ಲೂಸ್ ಸಂಸ್ಥೆಯ ಜೂಲಿಯಾನ ಇದ್ದರು.

ಖಜಾಂಚಿ ವಸಂತ ಕೆ ರಾವ್ ನಿರ್ವಹಿಸಿ, ಕಾರ್ಯದರ್ಶಿ ಲಿಸ್ಟನ್ ಡಿಸೋಜ ವಂದಿಸಿದರು. 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top