ಮಂಗಳೂರು: ಇಲ್ಲಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ 2026-27ನೇ ಸಾಲಿನ ವಿದ್ಯಾರ್ಥಿಗಳ ಪರಿಷತ್ತಿನ ಉದ್ಘಾಟನಾ ಸಮಾರಂಭವು 2026 ರ ಜುಲೈ 20ರಂದು ಕಾಲೇಜಿನ ಎಲ್.ಎಫ್. ಸಭಾಂಗಣದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ, ಸ್ಲೋವಾಕಿಯಾದ ಟ್ರಿನಾವಾ ವಿಶ್ವವಿದ್ಯಾನಿಲಯದ ಕುಲಪತಿಗ ಪ್ರೊ. ಮಿಲೊಸ್ ಲಿಚ್ನರ್, ಎಸ್.ಜೆ. ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿ ಪರಿಷತ್ತಿನ ಚುನಾಯಿತ ಪದಾಧಿಕಾರಿಗಳನ್ನು ಅಭಿನಂದಿಸಿದರು. ಅವರು ನಾಯಕತ್ವದಲ್ಲಿ ಅವಶ್ಯಕವಾಗಿ ಇರಲೇಬೇಕಾದ ಐದು ತತ್ವಗಳ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್, ನಾಯಕತ್ವವು ನಿಮ್ಮಲ್ಲಿರುವ ವಿಶೇಷ ಗುಣವಾಗಿದೆ. ನೀವೊಬ್ಬ ಉತ್ತಮ ನಾಯಕರೆಂದು ಸಾಬೀತುಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ. ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಎಲ್ಲಾ ಸಾಂಸ್ಥಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಬೇಕು ಎಂದರು.
ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್, ಫಾದರ್ ಬ್ರಾಯನ್ ಪಿರೇರಾ, ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕತ್ವವು ಒಂದು ಸ್ಥಾನವಲ್ಲ, ಅದು ಒಂದು ಉತ್ಸಾಹ. ನೀವು ಎಲ್ಲಿಂದ ಬಂದಿದ್ದೀರಿ ಎಂಬುದರ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಸಬಲೀಕರಣದ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಕೌನ್ಸಿಲ್‌ನಲ್ಲಿರುವುದು ಕೇವಲ ಒಂದು ಅವಕಾಶ ಮಾತ್ರವಲ್ಲ, ಅದು ಒಂದು ಜವಾಬ್ದಾರಿಯಾಗಿದೆ ಎಂದರು.
ವಿವಿಯ ಕುಲಸಚಿವ ಡಾ. ರೊನಾಲ್ಡ್ ನಜರೆತ್, ವಿದ್ಯಾರ್ಥಿ ಪರಿಷತ್ತಿನ ನಿರ್ದೇಶಕ ಡಾ. ಅನೂಪ್
ಡೆನ್ಜಿಲ್ ವೇಗಸ್ ಮತ್ತು ಸಹಾಯಕ ನಿರ್ದೇಶಕಿ ಬಿನ್ನಿ ಚಾನ್ ಹಾಗೂ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ,
ವಿದ್ಯಾರ್ಥಿ ಪರಿಷತ್ತಿನ 2026-27ನೇ ಸಾಲಿನ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ವಿವಿಧ ಬ್ಲಾಕ್‌ಗಳ ಡೀನ್ ಗಳಾದ ಡಾ. ಮನೋಹರ್ ಸೆರಾವೊ, ಡಾ. ಅರುಣ ಕಲ್ಕೂರ್, ಡಾ. ಆಶಾ ಅಬ್ರಹಾಂ, ಡಾ. ಮಮತಾ, ಶ್ರೀಮತಿ ಕ್ಲಾರೆಟ್ ವಿನಯಾ ಪೆರೇರಾ, ಡಾ. ಲವೀನಾ ಲೋಬೊ, ಡಾ. ರೆನಿಟಾ ಮರಿಯಾ ಡಿಸೋಜ, ಡಾ. ರೂಬನ್ ಎಸ್., ಡಾ ಸುಚೇತ ವಿಜಯಕುಮಾರ್, ಡಾ. ರೇಚಲ್ ನತಾಶಾ ಮೇರಿ, ಡಾ. ಮೆಲಿಸಾ ಗೋವಿಯಸ್, ಶಾರೊಲಿನ್ ಮಿನೇಜಸ್, ಡಾ. ಡೆಲ್ನಾ ಡಿ ಲೋಬೊ, ಡಾ. ಸ್ನೇಹಾ ಬಾಲರಾಜ್ ಮತ್ತು ವಿವಿಧ ಸಹಾಯಕ ಡೀನ್‌ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಿನ್ನಿ ಚಾನ್ ಮುಖ್ಯ
ಅತಿಥಿಯನ್ನು ಪರಿಚಯಿಸಿ, ಬಿ.ಕಾಂ. ವಿದ್ಯಾರ್ಥಿನಿ ವೆರಿನಾ ಕಾರ್ಯಕ್ರಮ ನಿರೂಪಿಸಿದರು. ಜಿಸೆಲ್
ಪರ್ಲ್ ವಾಸ್ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಪರಿಷತ್ತಿನ ಮೂಲಕ ಕೈಗೊಳ್ಳಲಾಗುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಡಾ. ಅನುಪ್ ಡೆಂಜಿಲ್ ವೇಗಸ್ ಸ್ವಾಗತಿಸಿ, ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷ ಜೀವನ್ ಡಿಮೆಲ್ಲೊ
ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


