ಶ್ರೀನಿವಾಸ್ ವಿಶ್ವವಿದ್ಯಾಲಯ: ಬಿ.ಕಾಂ ವಿದ್ಯಾರ್ಥಿಗಳಿಗೆ ‘ಕೆರಿಯರ್ ಲಾಂಚ್ ಪ್ಯಾಡ್–2026’ ಕಾರ್ಯಕ್ರಮ

Upayuktha
0

 


ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮರ್ಸ್ (IMC)ನ ಬಿ.ಕಾಂ ವಿಭಾಗದ ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ಕೆರಿಯರ್ ಲಾಂಚ್ ಪ್ಯಾಡ್–2026’ ಎಂಬ ಶೀರ್ಷಿಕೆಯಡಿ ಐದು ದಿನಗಳ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮವನ್ನು ಜೂನ್ 29ರಿಂದ ಜುಲೈ 3ರವರೆಗೆ ಪಾಂಡೇಶ್ವರ ಕ್ಯಾಂಪಸ್‌ನ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.


ವಿದ್ಯಾರ್ಥಿಗಳ ಉದ್ಯೋಗಾರ್ಹತೆ, ಸಂವಹನ ಕೌಶಲ್ಯ, ತಾಂತ್ರಿಕ ಸಾಮರ್ಥ್ಯ ಹಾಗೂ ಕ್ಯಾಂಪಸ್ ನೇಮಕಾತಿಗೆ ಅಗತ್ಯವಾದ ಸಿದ್ಧತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮರ್ಸ್‌ನ ಡೀನ್ ಡಾ. ವೆಂಕಟೇಶ್ ಎಸ್. ಅಮೀನ್ ಅವರ ಮಾರ್ಗದರ್ಶನದಲ್ಲಿ, ಬಿ.ಕಾಂ ವಿಭಾಗದ ಮುಖ್ಯಸ್ಥೆ ಪ್ರೊ. ಶರ್ಮಿಳಾ ಎಸ್. ಶೆಟ್ಟಿ ಹಾಗೂ ಎಸಿಸಿಎ ಕೋರ್ಸ್ ಸಂಯೋಜಕಿ ಪ್ರೊ. ಯಶಸ್ವಿ ಎ. ಐಲ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪ್ಲೇಸ್‌ಮೆಂಟ್ ಸೆಲ್ ಸಂಯೋಜಕಿ ಪ್ರೊ. ವಿನುತಾ ಎಚ್. ಕೆ. ಹಾಗೂ ಪ್ರೊ. ಅಕ್ಷತಾ ವೈ. ಕಾರ್ಯಕ್ರಮವನ್ನು ಸಂಯೋಜಿಸಿದರು.


ಜೂನ್ 29ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಡಾ. ವೆಂಕಟೇಶ್ ಎಸ್. ಅಮೀನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಪೊರೇಟ್ ತರಬೇತುದಾರ್ತಿ ಹಾಗೂ ಎಚ್‌ಆರ್ ವೃತ್ತಿಪರರಾದ ಸುಪ್ರೀತಾ ಶೈನ್ ಅವರು ‘Professional Presence 101: From Appearance to Attitude’ ವಿಷಯದ ಕುರಿತು ಉಪನ್ಯಾಸ ನೀಡಿ, ವೃತ್ತಿಪರ ಉಡುಗೆ, ದೇಹಭಾಷೆ, ಸ್ವ-ಪರಿಚಯ, ಕಚೇರಿ ನಡವಳಿಕೆ ಹಾಗೂ ವೈಯಕ್ತಿಕ ಬ್ರ್ಯಾಂಡಿಂಗ್‌ನ ಮಹತ್ವವನ್ನು ವಿವರಿಸಿದರು.


ಜೂನ್ 30ರಂದು ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಪೋರ್ಟ್, ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕ ಪ್ರೊ. ಎಲ್ಸನ್ ಡಿಸೋಜಾ ಅವರು ‘The Digital Resume Advantage: Networking Your Way to Success’ ವಿಷಯದ ಕುರಿತು ತರಬೇತಿ ನೀಡಿ, ಎಟಿಎಸ್ ಸ್ನೇಹಿ ರೆಸ್ಯೂಮ್ ರಚನೆ, ಲಿಂಕ್ಡ್‌ಇನ್ ಪ್ರೊಫೈಲ್ ಅಭಿವೃದ್ಧಿ, ನೆಟ್‌ವರ್ಕಿಂಗ್ ತಂತ್ರಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಉಪಕರಣಗಳ ಬಳಕೆಯ ಕುರಿತು ಮಾಹಿತಿ ನೀಡಿದರು.


ಜುಲೈ 1ರಂದು ಹಿಂಟೇಲ್ ಸಂಸ್ಥೆಯ ಡೇಟಾ ಸೈಂಟಿಸ್ಟ್ ಹಾಗೂ ಡೇಟಾ ಸೈನ್ಸ್ ತರಬೇತುದಾರ ಸುಮಂತ್ ಎಂ. ಅವರು Data Skills for the Future: From Spreadsheets to Insights’ ವಿಷಯದ ಕಾರ್ಯಾಗಾರ ನಡೆಸಿದರು. ಎಂಎಸ್ ಎಕ್ಸೆಲ್, SQL, ಪವರ್ BI ಹಾಗೂ ಡೇಟಾ ಅನಾಲಿಟಿಕ್ಸ್ ಕುರಿತ ಪ್ರಾಯೋಗಿಕ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡರು.


ಜುಲೈ 2ರಂದು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಜೆ. ರಾವ್ ಅವರು ‘Aptitude Accelerator: Think. Solve. Succeed.’ ವಿಷಯದ ಕುರಿತು ಕಾರ್ಯಾಗಾರ ನಡೆಸಿ, ತಾರ್ಕಿಕ ಚಿಂತನೆ, ಸಂಖ್ಯಾತ್ಮಕ ಸಾಮರ್ಥ್ಯ, ವಿಶ್ಲೇಷಣಾತ್ಮಕ ಕೌಶಲ್ಯ ಹಾಗೂ ಮಾದರಿ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ವೃದ್ಧಿಪಡಿಸಿದರು.


ಜುಲೈ 3ರಂದು Career Launch Lab – Build, Present & Prove Your Potential ಶೀರ್ಷಿಕೆಯಡಿ ಮೌಲ್ಯಮಾಪನ ಮತ್ತು ಪರಿಶೀಲನಾ ಕಾರ್ಯಕ್ರಮ ನಡೆಯಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಸಾಗರ್ ಶ್ರೀನಿವಾಸ್ ಹಾಗೂ ಪೋರ್ಟ್, ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ವಿಭಾಗದ ಪ್ಲೇಸ್‌ಮೆಂಟ್ ತರಬೇತುದಾರ್ತಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸ್ವಾತಿ ನಾರಾಯಣ್ ವಿದ್ಯಾರ್ಥಿಗಳ ಸಂವಹನ ಕೌಶಲ್ಯ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಸಾಮಾನ್ಯ ಜ್ಞಾನ ಹಾಗೂ ವೃತ್ತಿಪರ ಸಿದ್ಧತೆಯನ್ನು ಮೌಲ್ಯಮಾಪನ ಮಾಡಿ ವೈಯಕ್ತಿಕ ಸಲಹೆಗಳನ್ನು ನೀಡಿದರು.


ಬಿ.ಕಾಂ ಹಾನರ್ಸ್ ಹಾಗೂ ಬಿ.ಕಾಂ ಎಸಿಸಿಎ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ವಿವಿಧ ಕಾರ್ಯಾಗಾರಗಳು, ಪ್ರಾಯೋಗಿಕ ತರಬೇತಿಗಳು ಹಾಗೂ ಮೌಲ್ಯಮಾಪನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಐದು ದಿನಗಳ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಡಿಜಿಟಲ್ ಜ್ಞಾನ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಉದ್ಯೋಗ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಿತು.


ಸಮಾರೋಪ ಸಮಾರಂಭದಲ್ಲಿ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು, ಮೌಲ್ಯಮಾಪಕರು, ಸಂಯೋಜಕರು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top