ವ್ಯಾಸ ಪೂರ್ಣಿಮಾ, ಗುರು ಪೂರ್ಣಿಮೆಯ ಮಹತ್ವ

Upayuktha
0

 


ಜುಲೈ 29ರಂದು ವ್ಯಾಸ ಪೂರ್ಣಿಮಾ ಮತ್ತು ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ. ವೇದವ್ಯಾಸರ ಜನ್ಮ ದಿನವನ್ನೇ ನಾವು ಗುರು ಪೂರ್ಣಿಮಾವೆಂದು ಆಚರಿಸುತ್ತೇವೆ. ಆಷಾಡ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮಾ ಆಚರಿಸಲಾಗುತ್ತದೆ. 


ಗುರುಬ್ರಹ್ಮ ಗುರುವಿಷ್ಣು 

ಗುರುದೇವೋ ಮಹೇಶ್ವರ 

ಗುರುಸಾಕ್ಷಾತ್ ಪರಬ್ರಹ್ಮ

 ತಸ್ಮೖೆ ಶ್ರೀ ಗುರುವೇ ನಮಃ  


ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಎಲ್ಲಾ ಮಕ್ಕಳಿಗೂ ತಾಯಿ ತಂದೆಯೇ ಮೊದಲ ಗುರು. ಮನೆಯೇ ಮೊದಲ ಪಾಠ ಶಾಲೆ. ತನ್ನ ಮಕ್ಕಳಿಗೆ ಮೊದಲನೆಯ ಶಿಕ್ಷಕಿ ತಾಯಿ. ಇಲ್ಲಿ  ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ ಪವಿತ್ರವಾದದ್ದು, ಜವಬ್ದಾರಿಯುತವಾದದ್ದು. ಈ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಸೃಷ್ಟಿಕರ್ತರು ಗುರು. ಮನುಷ್ಯನಾದ ಮೇಲೆ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದುಕೊಂಡಿರುತ್ತಾರೆ. ಗುರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವರು ಗುರು. ' ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು' ಅನ್ನೋ ಗಾದೆ ಮಾತು ತುಂಬಾ ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು..  ತಲುಪಬೇಕೆಂದರೆ ಗುರುವಿನ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಇರಲೇಬೇಕು.  ಗುರುಗಳ ಸಹಾಯದಿಂದ ಮಾತ್ರ ನಾವು ಅಂದುಕೊಂಡ ಗುರಿ ತಲುಪಬಹುದು. ಗುರುವೇಂದರೆ ಕೇವಲ ಶಿಕ್ಷಕರಲ್ಲ ಜೀವನದಲ್ಲಿ ಸರಿಯಾದದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ ಇಂತಹ ಎಲ್ಲಾ ಗುರುವೃಂದಕ್ಕೂ ಗುರು ಪೂರ್ಣಿಮೆಯ ಶುಭಾಶಯಗಳು. 

     


- ವಿ.ಎಂ.ಎಸ್.ಗೋಪಿ 

ಲೇಖಕರು, ಬೆಂಗಳೂರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top