ಎಸ್.ಐ.ಆರ್ ವಿಶೇಷ ಜಾಗೃತಿ ಅಭಿಯಾನ ಮತ್ತು ಬೀದಿನಾಟಕ

Upayuktha
0

 


ಮಂಗಳೂರು:  ಎಸ್.ಐ.ಆರ್ ನಲ್ಲಿ ಪಾಲ್ಗೊಳ್ಳುವ ಮೂಲಕ ಮತದಾರರು   ಹಕ್ಕನ್ನು ಚಲಾಯಿಸಬೇಕು, ಯಾವುದೇ ಅರ್ಹ ಮತದಾರರು ಹಿಂದುಳಿಯದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ದ.ಕ. ಜಿಲ್ಲಾ ಪಂಚಾಯತಿ ಸ್ವೀಪ್ ಸಂಯೋಜಕಿ ಸುಮಂಗಲ ನಾಯಕ್ ಹೇಳಿದ್ದಾರೆ.
    
ಇವರು ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ವಿಶೇಷ ಸಮಗ್ರ ಪರಿಷ್ಕರಣೆ 2026 (SIಖ) ವಿಶೇಷ ಜಾಗೃತಿ ಅಭಿಯಾನ ಮತ್ತು ಬೀದಿನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 
   
ಯಕ್ಷಗಾನ ಕಲಾವಿದ ಗಿರೀಶ್ ನಾವಡ ಮತ್ತು ಬಳಗ ಕರಾವಳಿ ಜಾನಪದ ಕಲಾ ವೇದಿಕೆ, ಸುರತ್ಕಲ್ ಇವರು ಎಸ್.ಐ.ಆರ್ ಕುರಿತು  ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶಿಸಿದರು.
   
ಬಿ.ಎಲ್.ಒ ರವರು ಕೊಟ್ಟ ಗಣತಿ ಫಾರ್ಮಿಗೆ ಕಡ್ಡಾಯ ಸಹಿ ಹಾಕಿ ಹಿಂತಿರುಗಿಸಬೇಕು. ಅಲ್ಲದೇ ಆನ್‍ಲೈನ್‍ನಲ್ಲಿಯೂ ಎಸ್.ಐ.ಆರ್ ಫಾರಂ ತುಂಬಬಹುದು. ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಲು ಸಹಾಯವಾಗಲು ಬಿ.ಎಲ್.ಒ. ಹೆಸರು ಹಾಗೂ ಮೊಬೈಲ್ ಸಂಖ್ಯೆ ಮುದ್ರಿಸಲಾಗಿದೆ. ಅಲ್ಲದೆ ಸಮಗ್ರವಾಗಿ ಉಚಿತ ಮಾಹಿತಿಗೆ 1950 ಗೆ ಕರೆ ಮಾಡಬಹುದು ಎಂದು ಬೀದಿನಾಟಕದಲ್ಲಿ  ಸಂದೇಶ ನೀಡಲಾಯಿತು.
    
ಸ್ವೀಪ್ ಸದಸ್ಯ ಡೊಂಬಯ್ಯ ಇಡ್ಕಿದು, ಕಲಾವಿದರಾದ ವಿಶ್ವನಾಥ ಶೆಟ್ಟಿ, ಮನೋಜ್ ಗಣೇಶಪುರ, ಆಶಾ, ಹನೀಫ್, ವಿಘ್ನೇಶ್ ನಾವಡ ಮೊದಲಾದವರು ಭಾಗವಹಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top