ರಾಘವೇಶ್ವರ ಶ್ರೀಗಳ 'ಅನ್ನಬ್ರಹ್ಮ' ಚಾತುರ್ಮಾಸ್ಯ: ನಾಳೆಯಿಂದ ಸೆ.26ರ ವರೆಗೆ

Upayuktha
0

 


ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ 33ನೆಯ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯನ್ನು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ಕೈಗೊಳ್ಳುತ್ತಿದ್ದು, ದಿನಾಂಕ 29.07.2026 ರಂದು ವ್ಯಾಸಪೂಜೆಯ ಮೂಲಕ ಚಾತುರ್ಮಾಸ್ಯವು ಪ್ರಾರಂಭವಾಗಿ 26.09.2026 ವರೆಗೆ ನಡೆಯಲಿದೆ.


ಧಾರ್ಮಿಕತೆಯ ಜೊತೆಗೆ ಜನಜಾಗೃತಿ ಎಂಬಂತೆ ಪೂಜ್ಯ ಶ್ರೀಗಳು ಪ್ರತಿವರ್ಷದ ಚಾತುರ್ಮಾಸ್ಯವನ್ನು ವಿಷಯಾಧಾರಿತವಾದ ಜನಜಾಗರಣಕ್ಕೆ ಬಳಸಿಕೊಳ್ಳುತ್ತಿದ್ದು, ಈ ವರ್ಷ ಆಹಾರದ ಕುರಿತಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಲು "ಅನ್ನಬ್ರಹ್ಮ ಚಾತುರ್ಮಾಸ್ಯ" ಎಂಬ ಹೆಸರಿನೊಂದಿಗೆ ಚಾತುರ್ಮಾಸ್ಯವನ್ನು ಸಂಕಲ್ಪಿಸಿದ್ದಾರೆ. ಆಹಾರದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದಷ್ಟೇ ಅಲ್ಲದೆ ಅನ್ನವನ್ನು ಗೌರವಿಸುವ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು ಈ ಬಾರಿಯ ಚಾತುರ್ಮಾಸ್ಯದ ಪರಿಕಲ್ಪನೆಯಾಗಿದೆ. 


ಈ ಚಾತುರ್ಮಾಸ್ಯದ ಸಮಯದಲ್ಲಿ ಆಹಾರದ ಕುರಿತಾಗಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳು ಇರಲಿದ್ದು, ಸ್ವತಃ ಶ್ರೀಗಳು ಪ್ರತಿದಿನ ಆಹಾರದ ಕುರಿತಾದ ವಿಶೇಷ ಪ್ರವಚನ ಮಾಲಿಕೆಯನ್ನು ಅನುಗ್ರಹಿಸಲಿದ್ದಾರೆ. ಜ್ಞಾನೋದ್ದೀಪನದ ಜೊತೆಗೆ ಪ್ರಾಚೀನ ವಿಧಾನದ ಪಾರಂಪರಿಕ ಆಹಾರವೂ ಈ ಚಾತುರ್ಮಾಸ್ಯದಲ್ಲಿ ಇರಲಿವೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top